UPI Payment system : UPI ಬಳಕೆದಾರರೇ ಕೇಂದ್ರ ಸರ್ಕಾರ ತೆಗೆದುಕೊಳ್ಳಲಿದೆ ಬಹು ದೊಡ್ಡ ನಿರ್ಧಾರ!
UPI payment : ದೇಶದ ಮುಕ್ಕಾಲು ಭಾಗದಷ್ಟು ಜನರು ಯುಪಿಐ ಮೂಲಕ ವಹಿವಾಟು (UPI payment) ನಡೆಸುತ್ತಿದ್ದಾರೆ. ಪ್ರಸ್ತುತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ ಯುಪಿಐ ಪಾವತಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿದ್ದು ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮದ ನಿರ್ಧಾರದ ಪರಿಣಾಮವನ್ನು ವಿಶ್ಲೇಷಿಸಿದ ಅಧ್ಯಯನವು, ವ್ಯಾಪಾರಿಗಳು ಸ್ವೀಕರಿಸಿದ ಪಾವತಿಗಳಿಗೆ ಯಾವುದೇ ಶುಲ್ಕವನ್ನು ವಿಧಿಸಬಾರದು ತಿಳಿಸಿದೆ.
ಸದ್ಯ ಯುಪಿಐ ಪಾವತಿ ಸಿಸ್ಟಮ್ ಅಪ್‌ಡೇಟ್‌ಗೆ ಅಗತ್ಯವಿರುವ ಮೂಲಸೌಕರ್ಯಕ್ಕೆ ಹಣಕಾಸು ಒದಗಿಸಲು ಮತ್ತು ಅದರ ಆರ್ಥಿಕ ಕಾರ್ಯಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಂತಹ ವಹಿವಾಟುಗಳ ಮೇಲೆ ಶೇಕಡಾ 0.3 ರಷ್ಟು ಶುಲ್ಕವನ್ನು ವಿಧಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)-ಬಾಂಬೆ ನಡೆಸಿದ ಅಧ್ಯಯನವೊಂದರಲ್ಲಿ ಈ ವಿಷಯವನ್ನು ಸೂಚಿಸಿದೆ.
ಪ್ರಸ್ತುತ 0.3 ರಷ್ಟು ವಿಧಿಸುವ ಶುಲ್ಕದಿಂದ 2023-24 ರಲ್ಲಿ ಸುಮಾರು 5,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಬಹುದು ಎಂದು ದಿ ಡಿಸೆಪ್ಶನ್’ ಎಂಬ ಶೀರ್ಷಿಕೆಯ ಅಧ್ಯಯನವು ತಿಳಿಸಿದೆ.
ಇದೀಗ ಮೊಬೈಲ್ ವ್ಯಾಲೆಟ್‌ಗಳ ಮೂಲಕ ಮಾಡಿದ ಪಾವತಿಗಳ ಮೇಲೆ ವಿನಿಮಯ ಶುಲ್ಕವನ್ನು ವಿಧಿಸುವ ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮದ (NPCI) ನಿರ್ಧಾರದ ಪರಿಣಾಮವನ್ನು ವಿಶ್ಲೇಷಿಸಿದ ಅಧ್ಯಯನವು, ವ್ಯಾಪಾರಿಗಳು ಸ್ವೀಕರಿಸಿದ ಪಾವತಿಗಳಿಗೆ ಯಾವುದೇ ಶುಲ್ಕವನ್ನು ವಿಧಿಸಬಾರದು ಎಂದು ತಿಳಿಸಿದೆ .
ಅದಲ್ಲದೆ ಪೇಮೆಂಟ್ ನೇರವಾಗಿ UPI ಮೂಲಕ ಮಾಡಿದರೂ ಅಥವಾ ಅಥವಾ ಪ್ರಿಪೇಯ್ಡ್ ಇ-ವ್ಯಾಲೆಟ್‌ಗಳ ಮೂಲಕ ಮಾಡಿದರೂ ಈ ಶುಲ್ಕವನ್ನು ವ್ಯಾಪಾರಿಗಳು ಸ್ವೀಕರಿಸಿದ ಪಾವತಿಗಳಿಗೆ ವಿಧಿಸಬಾರದು ಎಂದು ತಿಳಿಸಿದೆ .
ಮುಖ್ಯವಾಗಿ NPCI ಯುಪಿಐ ಮೂಲಕ ಅಂಗಡಿಯವರಿಗೆ ಪಾವತಿ ಮಾಡಿದರೆ ಪಾವತಿ ಮೊತ್ತದ ಶೇಕಡಾ 1.1 ರಷ್ಟು ‘ಇಂಟರ್‌ಚಾರ್ಜ್’ ಶುಲ್ಕವನ್ನು ಕಡಿತಗೊಳಿಸುವ ನಿಬಂಧನೆಯನ್ನು ಏಪ್ರಿಲ್ 1, 2023 ರಿಂದ ಪ್ರಾರಂಭಿಸಿದೆ. ಇದು ಪ್ರಿಪೇಯ್ಡ್ ವ್ಯಾಲೆಟ್ ಆಧಾರಿತ UPI ವಹಿವಾಟುಗಳಿಗೆ ಅನ್ವಯಿಸುತ್ತದೆ ಎಂದು ತಿಳಿಸಲಾಗಿದೆ.