TVS Sales: ಮಾರ್ಚ್ ತಿಂಗಳ ಮಾರಾಟದಲ್ಲಿ ದಾಖಲೆ ಸೃಷ್ಟಿಸಿದ ಟಿವಿಎಸ್ !!

TVS Sales: ಹಲವು ವಾಹನಗಳು (vehicle) ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಅದರಲ್ಲಿ ಕೆಲವು ಹೆಚ್ಚು ಬೇಡಿಕೆ ಪಡೆದು ಮಾರಾಟವಾದರೆ, ಇನ್ನೂ ಕೆಲವು ಮಾರಾಟ ಕಾಣದೆ, ಫ್ಲಾಪ್ ಆಗುತ್ತವೆ. ಸದ್ಯ TVS ಮೋಟಾರ್ ಕಂಪನಿಯ ದ್ವಿಚಕ್ರ ವಾಹನ ಮಾರ್ಚ್ ತಿಂಗಳಲ್ಲಿ ಅಧಿಕ ಮಾರಾಟವಾಗಿ, ಹೊಸ ದಾಖಲೆ ಸೃಷ್ಟಿಸಿದೆ. ದೇಶದಲ್ಲಿ ಟಿವಿಎಸ್ ಮೋಟಾರ್‌ ಸೈಕಲ್‌ಗಳು (TVs motor cycle) ಉತ್ತಮ ಬೇಡಿಕೆ ಪಡೆದಿವೆ. ಹಾಗೆಯೇ ಟಿವಿಎಸ್ ಆಟೋಗಳು (TVs auto) ಕೂಡ ಇತ್ತೀಚೆಗೆ ಉತ್ತಮವಾಗಿ ಮಾರಾಟವಾಗುತ್ತಿವೆ. ಸದ್ಯ ಮಾರ್ಚ್ ತಿಂಗಳ ಟಿವಿಎಸ್ ಮಾರಾಟದ (TVS Sales) ವಿವರ ನೋಡೋಣ.

 

ಕಂಪನಿಯ ದ್ವಿಚಕ್ರ ವಾಹನ ಮಾರ್ಚ್ 2022 ರಲ್ಲಿ 2,92,918 ಹಾಗೂ ಮಾರ್ಚ್ 2023 ರಲ್ಲಿ 3,07,559 ಯುನಿಟ್‌ಗಳಷ್ಟು ಮಾರಾಟವಾಗಿದೆ. ದೇಶೀಯ ದ್ವಿಚಕ್ರ ವಾಹನ ಮಾರಾಟವು ಶೇ 22 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಒಟ್ಟು ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ5 ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ. ಮಾರ್ಚ್ 2022 ರಲ್ಲಿ ಮಾರಾಟವಾದ 94,747 ಯುನಿಟ್‌ಗಳಿಂದ 2023 ಮಾರ್ಚ್‌ನಲ್ಲಿ 1,28,817 ಕ್ಕೆ ಏರಿಕೆಯಾಗಿದೆ.

 

TVS iQube ಎಲೆಕ್ಟ್ರಿಕ್ ಸ್ಕೂಟರ್ ಮಾರ್ಚ್ 2022 ರಲ್ಲಿ 1,799 ಹಾಗೂ ಮಾರ್ಚ್ 2023 ರಲ್ಲಿ 15,364 ಯುನಿಟ್‌ಗಳು ಮಾರಾಟವಾಗಿದೆ. ಕಂಪನಿಯ ಒಟ್ಟು ರಫ್ತುಗಳು ಮಾರ್ಚ್ 2022 ರಲ್ಲಿ 109,724 ಹಾಗೂ ಮಾರ್ಚ್ 2023 ರಲ್ಲಿ 75,037 ಯುನಿಟ್‌ಗಳು ಮಾರಾಟವಾಗಿದೆ. ಇನ್ನು ಮೋಟಾರ್‌ಸೈಕಲ್ ವಿಭಾಗದಲ್ಲಿ ಮಾರ್ಚ್ 2022 ರಲ್ಲಿ 1,60,522 ಹಾಗೂ ಮಾರ್ಚ್ 2023 ರಲ್ಲಿ 141,250 ಯುನಿಟ್‌ಗಳಷ್ಟು ಮಾರಾಟವಾಗಿದೆ.

 

ಕಂಪನಿಯ ದ್ವಿಚಕ್ರ ವಾಹನ ರಫ್ತುಗಳು ಮಾರ್ಚ್ 2022 ರಲ್ಲಿ 95,962 ಯುನಿಟ್‌ಗಳು ಹಾಗೂ ಮಾರ್ಚ್ 2023 ರಲ್ಲಿ 66,779 ರಫ್ತಾಗಿದ್ದವು. ಕಂಪನಿಯ ತ್ರಿಚಕ್ರ ವಾಹನಗಳು ಮಾರ್ಚ್ 2022 ರಲ್ಲಿ 15,036 ಹಾಗೂ ಮಾರ್ಚ್ 2023 ರಲ್ಲಿ 9,593 ಯುನಿಟ್‌ಗಳ ಮಾರಾಟವನ್ನು ನೋಂದಾಯಿಸಿವೆ.

 

ಆರ್ಥಿಕ ವರ್ಷ 21-22ರ ಮೂರನೇ ತ್ರೈಮಾಸಿಕದಲ್ಲಿ 3.15 ಲಕ್ಷ ಯುನಿಟ್‌ಗಳಿಗೆ ಹೋಲಿಸಿದರೆ ಒಟ್ಟು ರಫ್ತುಗಳು ಪ್ರಸಕ್ತ ತ್ರೈಮಾಸಿಕದಲ್ಲಿ 1.85 ಲಕ್ಷ ಯುನಿಟ್‌ಗಳ ಮಾರಾಟವನ್ನು ದಾಖಲಿಸಿವೆ. 2021-22 ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ದ್ವಿಚಕ್ರ ವಾಹನಗಳು 8.15 ಲಕ್ಷ ಯುನಿಟ್‌ಗಳು ನೋಂದಾಯಿಸಲ್ಪಟ್ಟಿವೆ. 2022-23 ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ, 8.40 ಲಕ್ಷ ಯುನಿಟ್‌ಗಳ ಮಾರಾಟವನ್ನು ದಾಖಲಿಸಿದೆ. 2021-22 ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ 0.42 ಯುನಿಟ್‌ಗಳು, 2022-23 ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ತ್ರಿಚಕ್ರ ವಾಹನವು 0.29 ಲಕ್ಷ ಯುನಿಟ್‌ಗಳ ಮಾರಾಟವನ್ನು ದಾಖಲಿಸಿದೆ.

Leave A Reply

Your email address will not be published.