Tulsi Plant Vastu : ತುಳಸಿಯನ್ನು ಮನೆಯ ಈ ದಿಕ್ಕಲ್ಲಿ ನೆಟ್ಟರೆ ಲಕ್ಷ್ಮೀ ಒಲಿಯುವುದು ಖಚಿತ!
Tulsi Plant Vastu : ತುಳಸಿ ಗಿಡವು ಸಾಮಾನ್ಯವಾಗಿ ಎಲ್ಲರ ಮನೆಯ ಅಂಗಳದಲ್ಲಿ ಇದ್ದೇ ಇರುತ್ತದೆ. ಹಾಗೆಯೇ ಈ ತುಳಸಿ ಗಿಡವನ್ನು ಪೂಜಿಸಿದರೆ ಸಾಕ್ಷಾತ್ ವಿಷ್ಣು ದೇವರನ್ನು ಪೂಜಿಸಿದ ಹಾಗೆ ಎಂದು ಹಿಂದೂ ಸಂಪ್ರದಾಯದಲ್ಲಿ ತಿಳಿಸಿದ್ದಾರೆ. ತುಳಸಿ ಗಿಡವು ನೋಡಲು ಹಸಿರಿನಿಂದ ಕೂಡಿದ್ದು ಇದು ನೋಡುಗರ ಕಣ್ಣನ್ನು ಸೆಳೆಯುವ ಒಂದು ಅತ್ಯಮೂಲ್ಯ ಗಿಡಮೂಲಿಕೆಯಾಗಿದೆ. ಈ ಗಿಡವನ್ನು ನೆಟ್ಟರೆ ಮನೆಯಲ್ಲಿ ಸದಾ ನೆಮ್ಮದಿ – ಸಂತೋಷ(happiness) ಮನೆ ಮಾಡಿರುತ್ತದೆ. ತುಳಸಿಯ ಬಗ್ಗೆ ಜ್ಯೋತಿಷ್ಯ ದಿಂದ ಬಿಟ್ಟು ಹೇಳಿದರೆ ಅನೇಕ ವೈದ್ಯಕೀಯಕ್ಕೆ ಉಪಯೋಗ ಆಗುವ ಉತ್ತಮ ಗಿಡಮೂಲಿಕೆ ಆಗಿದೆ. ಇದರ ಎಲೆಯನ್ನು ಸೇವಿಸಿದರೆ ಆರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತದೆ.
ಹೌದು, ಮನೆಯಲ್ಲಿ ತುಳಸಿ ಗಿಡ ಇದ್ದರೆ ಸುಖ-ನೆಮ್ಮದಿ ಇದ್ದ ಹಾಗೇ. ತುಳಸಿ ನೆಟ್ಟರೆ ಸೊಳ್ಳೆಗಳ (mosquitoes)ಕಾಟ ಮನೆಯ ಸುತ್ತ ಮುತ್ತ ಇರುವುದಿಲ್ಲ ಎಂಬುದು ಎಲ್ಲರಿಗೂ ತಿಳಿದೇ ಇದೆ. ಹಾಗಾದರೆ ತುಳಸಿ ಗಿಡವನ್ನು ಯಾವ ದಿಕ್ಕಿನಲ್ಲಿ(direction) ಇಡುವುದು ಅವಶ್ಯಕ, ಯಾವ ದಿಕ್ಕಿನಲ್ಲಿ ನೆಟ್ಟರೆ ಶುಭ ಎನಿಸುತ್ತದೆ. ತುಳಸಿ ಗಿಡದ (Tulsi Plant Vastu) ದಿಕ್ಕಿನ ವಿಶೇಷ ಮಹತ್ವವನ್ನು ವಾಸ್ತುವಿನಲ್ಲಿ ಯಾವ ರೀತಿ ತಿಳಿಸಿದ್ದಾರೆ ನೋಡಿ.
ತುಳಸಿಯನ್ನು ಪ್ರತಿ ಮನೆಯ ಅಂಗಳದ ಸೊಬಗು ಎಂದು ಹೇಳುತ್ತಾರೆ.ತುಳಸಿ ಗಿಡ ಮನೆಯ ಮುಂಭಾಗದಲ್ಲಿ ಇದ್ದರೆ ಮನೆಗೆ ಒಂದು ಒಳ್ಳೆಯ ದೃಷ್ಟಿ. ತುಳಸಿ ಗಿಡವನ್ನು ಸರಿಯಾದ ದಿಕ್ಕಿನಲ್ಲಿ (direction)ಮತ್ತು ಸರಿಯಾದ ಸ್ಥಳದಲ್ಲಿ ಇಟ್ಟರೆ ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯ(positiveness) ಹರಿವು ಹೆಚ್ಚಾಗುತ್ತದೆ ಮತ್ತು ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ.ಇದರಿಂದ ನೀವು ಯಾವುದೇ ಕೆಲಸ ಮಾಡಿದರು ನಿಮ್ಮಿಂದ ಅದು ಮಾಡಲು ಸಾಧ್ಯವಾಗುತ್ತದೆ.
ತುಳಸಿ ಗಿಡ ಮನೆಯಲ್ಲಿ ಒಣಗಿದರೆ ಅ ಮನೆಯವರಿಗೆ ದಿನದಿಂದ ದಿನಕ್ಕೆ ಕಷ್ಟಗಳು(problem) ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾಗಿ, ತುಳಸಿ ಗಿಡವನ್ನು ನೆಡುವಾಗ ಅದು ಒಣಗದಂತೆ ಹೆಚ್ಚು ಕಾಳಜಿ ವಹಿಸಬೇಕು. ಅದರ ಮಣ್ಣಿನ ಬಗ್ಗೆ ಕಾಳಜಿವಹಿಸ ಬೇಕು. ಅದಕ್ಕೆ ಎಷ್ಟು ಪ್ರಮಾಣದಲ್ಲಿ ಬೆಳಕು, ಗಾಳಿ, ನೀರು ಅಗತ್ಯವಿದೆ ಎಂಬ ವಿಷಯ ತಿಳಿದಿರಬೇಕು. ಮತ್ತು ಅದನ್ನು ಯಾವ ದಿಕ್ಕಿನಲ್ಲಿ(direction) ನೆಟ್ಟರೆ ಮನೆಗೆ ಸಮೃದ್ಧಿ ಹಾಗೂ ಅದನ್ನು ಎಲ್ಲಿ ನೆಟ್ಟರೆ ಅದು ಚೆನ್ನಾಗಿ ಬೆಳೆಯುತ್ತದೆ ಎಂದು ನೋಡಿ.
ತುಳಸಿ ಗಿಡ ನೆಡಲು ಸರಿಯಾದ ದಿಕ್ಕು ಯಾವುದು?
ಹಿಂದಿನ ಕಾಲದಲ್ಲಿ ಹಿರಿಯರು ಅಳವಡಿಸಿಕೊಂಡು ಬಂದಂತ ಸಂಪ್ರದಾಯದಲ್ಲಿ(culture) ತುಳಸಿ ಗಿಡವನ್ನು ಮನೆಯ ಅಂಗಳದ ಮಧ್ಯದಲ್ಲಿ ನೆಡುವ ಸಂಪ್ರದಾಯವಿತ್ತು, ಇದರಿಂದ ಸಸ್ಯಕ್ಕೆ ಬೇಕಾದಷ್ಟು ಗಾಳಿ, ಸೂರ್ಯನ ಬೆಳಕು,ಮತ್ತು ನೀರು ಸಿಗುತ್ತದೆ ಎಂಬ ಕಾರಣದಿಂದ. ಜೋತಿಷ್ಯ ದ ಪ್ರಕಾರ ತುಳಸಿ ಗಿಡ ಯಾವ ದಿಕ್ಕಿನಲ್ಲಿ ನೆಟ್ಟರೆ ಶುಭ ಎನ್ನುದರ ಬಗ್ಗೆ ನೋಡೋಣ.
ನೀವು ಮನೆಯ ಮುಖ್ಯ ಬಾಗಿಲಿನ (main door)ಬಳಿಯಲ್ಲಿ ತುಳಸಿ ಗಿಡವನ್ನು ನೆಡಬಹುದು. ಆದರೆ ನಿಮ್ಮ ಮನೆಯ ಮುಖ್ಯ ಬಾಗಿಲಿಗೆ ಗಾಳಿ, ನೀರು ಮತ್ತು ಸೂರ್ಯನ ಬೆಳಕು ಬರದಿದ್ದರೆ ತುಳಸಿ ಗಿಡ ಒಣಗುವುದು. ಅದಕ್ಕಾಗಿಯೇ ಅಂತಹ ಮನೆಗಳ ಬಾಲ್ಕನಿಯಲ್ಲಿ ತುಳಸಿ ಗಿಡವನ್ನು ನೆಡಬಹುದು. ಉತ್ತರ ದಿಕ್ಕಿನಲ್ಲಿ ತುಳಸಿ ನೆಡುವುದು ಭಾರಿ ಒಳ್ಳೆಯದು. ಇದರಿಂದ ನಿಮ್ಮ ಮನೆಯಲ್ಲಿ ಸಂಪತ್ತು(money) ಹೆಚ್ಚಾಗುತ್ತದೆ ಹಾಗೆಯೇ ನೀವು ಸುಖದ ಜೀವನವನ್ನು ಸಾಗಿಸಬಹುದು.
ಜೋತಿಷ್ಯರು ಹೇಳುವ ವಾಸ್ತುಗಳ ಪ್ರಕಾರ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಯಾವುದೇ ತುಳಸಿ ಗಿಡವನ್ನು ನೆಡಬಾರದು. ಈ ದಿಕ್ಕನ್ನು ಪೂರ್ವಜರ ಆವಾಸಸ್ಥಾನವೆಂದು ಪರಿಗಣಿಸಲಾಗಿದೆ ಮತ್ತು ಈ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಟ್ಟರೆ ಅದು ಒಣಗುತ್ತದೆ ಯಾವುದೇ ಕಾರಣಕ್ಕೂ ಬದುಕುಳಿಯುವ ಸಾಧ್ಯತೆ ಇರುವುದಿಲ್ಲ. ಮೊದರಲಿನಿಂದಲೂ ಪೂರ್ವಜರ ಪೂಜೆಗೆ ಈ ದಿಕ್ಕನ್ನು ಅಂದರೆ ದಕ್ಷಿಣ ದಿಕ್ಕನ್ನು(direction) ಬಳಸುತ್ತಾರೆ ಹಾಗಾಗಿ ತಪ್ಪಾಗಿಯೂ ತುಳಸಿ ಗಿಡವನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ನೆಡಬಾರದು.
ತುಳಸಿಯ ಪರಿಹಾರಗಳು ಏನಿರಬಹುದು : ನಿಮ್ಮ ಮನೆಯಲ್ಲಿ ದಂಪತಿಗಳ ನಡುವೆ ಅಂದರೆ ಪತಿ – ಪತ್ನಿ ಗಳ ನಡುವೆ ದಿನಾಲೂ ಜಗಳ ನಡೆಯುತ್ತಿದ್ದರೆ ಅಡುಗೆ ಮನೆಯ (cooking place)ಹೊರಗೆ ತುಳಸಿ ಗಿಡವನ್ನು ಇಡಿ. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ಜಗಳ ನಡೆಯುದಿಲ್ಲ. ಮನೆಯಲ್ಲಿ ಸುಖದ ವಾತಾವರಣ ಚೆಲ್ಲುತ್ತದೆ ಮತ್ತು ಒಬ್ಬರಿಂದ ಒಬ್ಬರಿಗೆ ಪ್ರೀತಿಯು ಬೆಳೆಯಲು ಪ್ರಾರಂಭಿಸುತ್ತದೆ.
ನಿಮ್ಮ ಕೈ ಇಂದ ಹಣವನ್ನು ಉಳಿಸಲು ಸಾಧ್ಯವಾಗದಿದ್ದರೆ ತುಳಸಿ ಗಿಡವನ್ನು ನಿಮ್ಮ ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಿ. ಇದರಿಂದ ಯಾವುದೇ ಕೆಲಸ ಮಾಡಿದರು ಒಳ್ಳೆದಾಗುತ್ತದೆ ಮತ್ತು ನೀವು ಸಂತೋಷ(happiness) ಮತ್ತು ಸಮೃದ್ಧಿಯನ್ನು ಪಡೆಯುತ್ತೀರಿ, ಸುಖದ ವಾತಾವರಣ ನಿಮ್ಮದಾಗುತ್ತದೆ. ಹಾಗಾಗಿ ವಾಸ್ತುಗಳ ಪ್ರಕಾರ ಆರೋಗ್ಯ ಮತ್ತು ಸಮೃದ್ದಿ ವಾತಾವರಣವನ್ನು ಪಡೆಯಲು ತುಳಸಿ ಗಿಡವನ್ನು ಬೆಳೆಸುದು ಉತ್ತಮ.
ಇದನ್ನೂ ಓದಿ: ಆನೆ ಕನಸಿನಲ್ಲಿ ಬಂದ್ರೆ ಏನರ್ಥ? ಸ್ವಪ್ನ ಶಾಸ್ತ್ರ ಹೀಗೆ ಹೇಳುತ್ತೆ