Weekend with Ramesh: ಡಾಕ್ಟರ್ ಬ್ರೋ ಬರೋ ವಿಷ್ಯ ಹೇಳಿದ ರಮೇಶ್ ವೈರಲ್ !
Weekend with-Ramesh: ಸತ್ಯವನ್ನು ಒಪ್ಪಿಕೊಳ್ಳಬೇಕು, ಜನರು ಹೇಳುವುದನ್ನು ಪರಿಗಣಿಸಿ ಬದಲಾಗಬೇಕು ಎಂದ ನಟ ನಿರೂಪಕ ರಮೇಶ್ ಅರವಿಂದ್. ಹಾಗಾದ್ರೆ ಡಾಕ್ಟರ್ ಬ್ರೋ (Dr. Bro) ಬರೋದು ಪಕ್ಕಾನಾ ?
ಕನ್ನಡ ಕಿರುತೆರೆ ಜನಪ್ರಿಯ ಶೋ ವೀಕೆಂಡ್ (Weekend with-Ramesh) ವಿತ್ ರಮೇಶ್ ಸೀಸನ್ 5 ರಮ್ಯಾ (Season 5) ಎಂಟ್ರಿಯ ಜತೆ ಆರಂಭವಾಗಿದೆ. ಮೊದಲ ಎಪಿಸೋಡ್‌ನಲ್ಲಿ ಆದುದರಿಂದ ಇದು ಬಹುನಿರೀಕ್ಷಿತ, ಬಹು ಅಪೇಕ್ಷಿತ ಎಪಿಸೋಡ್ ಆಗಿತ್ತು ಅದು. ಆದರೆ ಅಲ್ಲಿ ರಮ್ಯಾ ಇಂಗ್ಲಿಷ್ ಮಾತನಾಡಿ ದೊಡ್ಡ ಎಡವಟ್ಟು ಮಾಡಿಕೊಂಡಿದ್ದರು. ಇದರಿಂದ ವೀಕ್ಷಕರಿಗೆ ತೀರಾ ಬೇಸರವಾಗಿದ್ದು ಅದೇ ಕಾರಣಕ್ಕೆ ಹಿಗ್ಗ ಮುಗ್ಗ ಟ್ರೋಲ್ ಆಗಿದ್ದರು.
ಇಂಗ್ಲಿಷ್ ಎಪಿಸೋಡ್ ಎಂದು ಟ್ರೋಲ್?:
‘ ರಮ್ಯಾ ಅವರು ಇಂಗ್ಲಿಷ್‌ನಲ್ಲಿ ಮಾತನಾಡಿರವುದಕ್ಕೆ ಟ್ರೋಲ್ ಆಗಿದ್ದಾರೆ. ವೀಕೆಂಡ್ ವಿತ್ ರಮೇಶ್ ಮಾತ್ರವಲ್ಲ, ನನ್ನ ಸಿನಿಮಾಗಳ ಬಗ್ಗೆ ಅಥವಾ ನನ್ನ ವೈಯಕ್ತಿಕ ಬದುಕಿನ ಬಗ್ಗೆ ಏನೇ ಇರಬಹುದು: ಅದರಲ್ಲಿ ಸತ್ಯ ಇದೆ ಅನಿಸಿದ್ದರೆ ನನ್ನನ್ನು ನಾನು ತಿದ್ದುಕೊಂಡಿಲ್ಲ ಅಂದ್ರೆ ನನ್ನಷ್ಟು ದಡ್ಡ ಇನ್ನೊಬ್ಬ ಇಲ್ಲ. ಹಾಗಾಗಿ ಏನೇ ಸಲಹೆ ಬಂದರೂ ನಾನದನ್ನು ಪರಿಗಣಿಸಬೇಕು. ಅದರಲ್ಲಿ ಇರುವ ಸತ್ಯವನ್ನು ಒಪ್ಪಿಕೊಳ್ಳಬೇಕು ಮತ್ತು ತಿದ್ದಿಕೊಳ್ಳಬೇಕು. ಅದೊಂದೇ ದಾರಿ ಮೇಲೆ ಬರುವುದಕ್ಕೆ.’ ಎಂದು ರಮೇಶ್ ಅವರು ಹೇಳಿದ್ದಾರೆ.
‘ ಜನರು ಹೇಳಿರುವ ವಿಷ್ಯ ನಮಗೆ ಗೊತ್ತಾಗಿದೆ. ಇನ್ನು ನಾನು ಮತ್ತು ನಮ್ಮ ತಂಡದವರು ಹುಷಾರಾಗಿ ಜವಾಬ್ದಾರಿಯಿಂದ ಇರ್ತೀವಿ. ಆದ್ರ ಬಗ್ಗೆ ಸಂಶಯವಿಲ್ಲ. ಇನ್ನೂ ತಿದ್ದಿಕೊಳ್ಳಲು 20 ಎಪಿಸೋಡ್‌ಗಳು ಇರುವ ಕಾರಣ ತಿದ್ದಿಕೊಳ್ಳಲು ತುಂಬಾ ಅವಕಾಶಗಳಿದೆ. ಇನ್ನೊಂದು ಹೊಸ ಅವಕಾಶ ಮುಂದಿನ ಎಪಿಸೋಡ್‌ನಲ್ಲಿ ಸಿಕ್ಕಿದೆ. ನಿಮ್ಮ ಸಲಹೆಗಳು ಬರ್ತಾ ಇರಲಿ, ಧನ್ಯವಾದ. ನೀವ್ ಶೋ ಬಗ್ಗೆ ಮಾತ್ರವಲ್ಲ, ನನ್ನ ಬಗ್ಗೆ ಕೂಡ ಗಮನಿಸುತ್ತಾ ಇರಿ: ತಿದ್ದುಕೊಳ್ಳಬೇಕು ಅಂದ್ರೆ ತಿಳಿಸಿ, ಏಕೆಂದರೆ ನಿರಂತರ ತಿದ್ದುಪಡಿಕೆಯೇ ಬೆಳವಣಿಗೆ ರಹಸ್ಯವಾಗಿರುತ್ತದೆ, ಅದನ್ನು ನಾನು ಇಲ್ಲಿತನಕ ಮಾಡಿಕೊಂಡು ಬಂದಿದ್ದೀನಿ. Life is about constant correction ನಾನು ಮಾಡಿಕೊಂಡು ಬರುವೆ’ ಎಂದು ಖಾಸಗಿ ಯುಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ರಮೇಶ್ ಅವರು ಹೇಳಿದ್ದಾರೆ.
ಡಾಕ್ಟರ್ ಬ್ರೋ ಬರ್ತಾರಾ, ಏನಂದ್ರು ರಮೇಶ್ ?!
‘ ವೀಕೆಂಡ್ ‘ ಕಾರ್ಯಕ್ರಮಕ್ಕೆ ಯಾರು ಬರಬೇಕು ಅನ್ನೋ ವಿಚಾರದ ಬಗ್ಗೆ ನಾನು ಸಾಮಾನ್ಯವಾಗಿ ತಂಡದ ಜೊತೆ ಚರ್ಚೆ ಮಾಡುವುದಿಲ್ಲ. ನನ್ನ ಕೆಲಸ ಕೇವಲ ನಿರೂಪಣೆ ಮಾಡುವುದು. ಕರ್ನಾಟಕದಲ್ಲಿ ಇರುವಂತ ಒಳ್ಳೆ ಸಾಧಕರು ಮತ್ತು ಜನರು ಇಷ್ಟ ಪಡುವಂತವರನ್ನು ಈ ಚೇರ್ ಮೇಲೆ ಕೂರಿಸಬೇಕು ಎಂಬ ವೈಯಕ್ತಿಕ ಆಸೆ ನನಗಿದೆ.
ಯಾವುದೋ ಒಂದು ಕಾರಣಕ್ಕೆ ಯುವಕರು ನಿಮಗೆ ಇಷ್ಟ ಆಗಿದ್ದಾರೆ ಅಂದ್ರೆ ಅದನ್ನು ಗೌರವಿಸಬೇಕಾಗುತ್ತದೆ. ಈ ಚೇರ್‌ನ ಉದ್ದೇಶವೇ ಅದು. ಯಾರು ಯಾರು ಸಾಧನೆ ಮಾಡಿದ್ದಾರೆಯೋ, ಅವರ ಬದುಕಿನ ಸಾಧನೆಯ ಕಥೆಯನ್ನು ನಿಮಗೆ ತಿಳಿಸಬೇಕು ಎಂದು ಕಾರ್ಯಕ್ರಮವನ್ನು ಶುರು ಮಾಡಿರುವುದು ನಾವು. ಈಗಲೇ ಆಗುತ್ತೆ ಮುಂದಿನ ವಾರ ಇವ್ರು ಬರಬಹುದು ಎಂದು ನಾನು ಹೇಳುವುದಕ್ಕೆ ಆಗಲ್ಲ, ಅದು ಚಾನೆಲ್ ನಿರ್ಧಾರ ಮಾಡುತ್ತಾರೆ. ಎಲ್ಲಾ ಸಾಧಕರು ಆ ಚೇರ್ ಮೇಲೆ ಕುಳಿತುಕೊಳ್ಳಬೇಕು ಅನ್ನೋದು ನನ್ನ ಆಸೆ’ ಎಂದು ರಮೇಶ್ ಹೇಳಿದ್ದಾರೆ. ಆ ಡಾಕ್ಟರ್ ಬ್ರೋ ಬರುವ ಸಾಧ್ಯತೆಯ ಹಿಂಟ್ ನೀಡಿದ್ದಾರೆ. ಆದುದರಿಂದ ಡಾಕ್ಟರ್ ಬ್ರೋ ಬರುವುದು ಪಕ್ಕ ಆದಂತಿದೆ.