MS Dhoni : ಕ್ಯಾಪ್ಟನ್ ಕೂಲ್ ಗಾಗಿ ಪ್ರೇಯಸಿಯನ್ನೇ ಬೇಡ ಎಂದು ತೊರೆದ ಧೋನಿ ಅಭಿಮಾನಿ!
MS Dhoni : ಇದೀಗ 2023 ರ ಐಪಿಎಲ್ (IPL)16ನೇ ಸೀಸನ್ ಅದ್ಧೂರಿಯಾಗಿ ಶುಭಾರಂಭವಾಗಿದೆ. ಐಪಿಎಲ್ ನ ಆರಂಭದಲ್ಲಿ ಮೊದಲ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಅಡಿದ್ದವು. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತಮ್ಮ ತವರು ಮೈದಾನದಲ್ಲಿ ಗುಜರಾತ್ ತಂಡವನ್ನು ಸೋಲಿಸಿತ್ತು.
ಗುಜರಾತ್ ನ ಮೈದಾನವಗಿದ್ದರೂ, ಚೆನ್ನೈ ನ ಅಭಿಮಾನಿಗಳೇ ಹೆಚ್ಚಾಗಿ ಹಾಜರಿದ್ದರು. ಮೊದಲ ಪಂದ್ಯಕ್ಕೆ ಸುಮಾರು 80 ಪ್ರತಿಶತ CSK ಅಭಿಮಾನಿಗಳೆ ತುಂಬಿದ್ದರು. ಇದಕ್ಕೆ ಮುಖ್ಯ ಕಾರಣವೆಂದರೆ ಅದು ಮಹೇಂದ್ರ ಸಿಂಗ್ ಧೋನಿ(MS Dhoni). ಭಾರತ ತಂಡದ ಮಾಜಿ ಮಹೇಂದ್ರ ಸಿಂಗ್ ಧೋನಿಗೆ ಇರುವ ಅಭಿಮಾನಿಗಳ ಬಗ್ಗೆ ಗೊತ್ತೇ ಇದೆ. ಐಪಿಎಲ್ ನಲ್ಲಿ ಧೋನಿ ಪ್ರತಿನಿಧಿಸುತ್ತಿರುವ CSK ಗೆ ಅಪಾರ ಅಭಿಮಾನಿಗಳಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ತಮ್ಮ ಅಭಿಮಾನಿಗಳಿಂದಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಇಲ್ಲೊಬ್ಬ ಧೋನಿ ಅಭಿಮಾನಿ ತನ್ನ ಅಭಿಮಾನವನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಐಪಿಎಲ್‌ಗೂ ಮುನ್ನವೇ ಅಭ್ಯಾಸದ ಸಮಯದಲ್ಲಿ ಧೋನಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಇದರ ಫೋಟೋ ಕೂಡ ವೈರಲ್ ಆಗಿದೆ. ಉದ್ಘಾಟನಾ ಸಮಯದಲ್ಲಿ ಧೋನಿ ಅಭಿಮಾನಿಯೊಬ್ಬರು ಬೌಂಡರಿಯಲ್ಲಿ ನಿಂತು ಪೋಸ್ಟರ್ ತೋರಿಸಿದ್ದರು. ಈ ಅಭಿಮಾನಿಯ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪೋಸ್ಟರ್ ನಲ್ಲಿ ತನಗೆ ಧೋನಿಗಿಂತ ಮಿಗಿಲಾದುದು ಯಾವುದು ಇಲ್ಲ ಎಂದು ಅಭಿಮಾನಿ ತಿಳಿಸಿದ್ದಾರೆ . ಗರ್ಲ್ ಫ್ರೆಂಡ್ ಅಥವಾ ಧೋನಿಯೇ ಎಂದು ಪ್ರಶ್ನೆಗೆ, ಅಭಿಮಾನಿ ತನಗೆ ಧೋನಿಯೇ ಮುಖ್ಯ ಎಂದು ಹಿಡಿದಿರುವ ಪೋಸ್ಟರ್ ವೈರಲ್ ಆಗುತ್ತಿದೆ.
ಈ ಪೋಸ್ಟರ್ ಗೆ ಅಭಿಮಾನಿಗಳು ಕ್ರೇಜಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
Thanks for sharing. I read many of your blog posts, cool, your blog is very good.