Research: ಜಪಾನ್ ಪ್ರಯೋಗದ ಅನುಸಾರ ಎರಡು ಗಂಡು ಇಲಿಗೆ ಇಲಿ ಮರಿಯ ಜನನ! ಈ ವಿಧಾನ ಸಲಿಂಗ ದಂಪತಿಗಳಿಗೆ ಆಗಬಹುದೇ ವರದಾನ?
Research two male mice : ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯಾಗಿ ಆವಿಷ್ಕಾರದ (Research And Invention) ಪ್ರತಿಫಲವಾಗಿ ಅನೇಕ ಆವಿಷ್ಕಾರಗಳು ಆಗಿರುವುದು ಗೊತ್ತೇ ಇದೆ. ಇದೀಗ, ಸಲಿಂಗ ದಂಪತಿಗಳಿಗೆ ಮಕ್ಕಳನ್ನು ಹೊಂದಲು ವರದಾನವಾಗಬಲ್ಲ ಪ್ರಯೋಗಕ್ಕೆ ಜಪಾನ್ ವಿಜ್ಞಾನಿಗಳು (Japan Scientist) ಅಡಿಯಿಟ್ಟಿದ್ದಾರೆ.
ದಿ ಗಾರ್ಡಿಯನ್ ವರದಿ ಅನುಸಾರ, ಎರಡು ಜೈವಿಕ ಗಂಡು (ತಂದೆ) ಇಲಿಗಳ ( Research two male mice) ಮುಖಾಂತರ ಒಂದು ಇಲಿಯನ್ನು (Rats) ಜಪಾನ್ ವಿಜ್ಞಾನಿಗಳು ಸೃಷ್ಟಿ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ಈ ಆವಿಷ್ಕಾರದ (Invention) ಪರಿಣಾಮವಾಗಿ ಜೈವಿಕ ಮಕ್ಕಳನ್ನು ಹೊಂದಲು ಬಯಸುವ ಸಲಿಂಗ ದಂಪತಿಗಳಿಗೆ ಈ ಪ್ರಯೋಗ ನೆರವಾಗುವ ಸಾಧ್ಯತೆ ದಟ್ಟವಾಗಿದೆ. ಜಪಾನ್ನ ಕ್ಯುಶು ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆಯ(Research) ಜವಾಬ್ದಾರಿ ಹೊಂದಿದ್ದ ಕಟ್ಸುಹಿಕೊ ಹಯಾಶಿ ಪುರುಷ ಕೋಶಗಳಿಂದ ಸದೃಢವಾದ ಸಸ್ತನಿ ಅಂಡಾಣುಗಳನ್ನು ಸಿದ್ದ ಪಡಿಸುವ ಮೊತ್ತ ಮೊದಲ ಪ್ರಕರಣವೆಂದು ಮಾಹಿತಿ ನೀಡಿದ್ದಾರೆ.
ವಿಜ್ಞಾನಿಗಳು ಈ ಹಿಂದೆ ಎರಡು ಜೈವಿಕ ತಂದೆಗಳ ಮೂಲಕ ಜೈವಿಜ ಇಲಿಗಳನ್ನು ಸೃಷ್ಟಿಸಲು ಸಂಕೀರ್ಣವಾದ ಜೆನೆಟಿಕ್ ಎಂಜಿನಿಯರಿಂಗ್ ತಂತ್ರಗಳನ್ನು ಬಳಕೆ ಮಾಡಿದ್ದರು. ಆದರೆ, ಇದೀಗ, ಹೆಚ್ಚು ಸುಲಭ ಮತ್ತು ಕಡಿಮೆ ಸಂಕೀರ್ಣವಾಗಿರುವ ಪ್ರಕ್ರಿಯೆ ಮುಖಾಂತರ ಜೈವಿಕ ಇಲಿ ಸೃಷ್ಟಿಸಲಾಗಿದೆ. ಸಲಿಂಗ ದಂಪತಿಗಳಿಗೆ ಮಾತ್ರ ಟರ್ನರ್ ಸಿಂಡ್ರೋಮ್ (Turner syndrome)(gonadal dysgenesis)ಎಂಬ ಎಕ್ಸ್ ಕ್ರೋಮೋಸೋಮ್ನ(X chromosome)ಒಂದು ಪ್ರತಿ ಇಲ್ಲದೆ ಭಾಗಶಃ ಇಲ್ಲದೆ ಮಕ್ಕಳಾಗದೆ ತೊಂದರೆ ಅನುಭವಿಸುವವರಿಗೂ ಇದು ಭವಿಷ್ಯದಲ್ಲಿ ನೆರವಾಗಲಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಮೊದಲಿಗೆ ಈ ಜೀವಕೋಶಗಳ Y ಕ್ರೋಮೋಸೋಮ್ ಅನ್ನು ತೆಗೆದುಹಾಕಲಾಗಿ, ಇನ್ನೊಂದು ಕೋಶದಿಂದ X ಕ್ರೋಮೋಸೋಮ್ ಅನ್ನು ಸೇರಿಸಲಾಗಿದೆ. ಇದರ ಪರಿಣಾಮವಾಗಿ ಎರಡು ಒಂದೇ X ಕ್ರೋಮೋಸೋಮ್ಗಳನ್ನು ಹೊಂದಿರುವ iPS ಜೀವಕೋಶಗಳನ್ನು (iPS Cells) ಸಿದ್ದ ಪಡಿಸಲಾಗಿದೆ. ಈ ತಂತ್ರವು ಪುರುಷ XY ಕೋಶಗಳೊಂದಿಗೆ ಶುರುವಾಗಿದ್ದು, XX ಕ್ರೋಮೋಸೋಮ್ ಸಂಯೋಜನೆಯೊಂದಿಗೆ ಕಾರ್ಯಸಾಧ್ಯವಾದ ಎಗ್ ರಚಿಸಲು ಸಂಶೋಧಕರಿಗೆ ಅನುವು ಮಾಡಿಕೊಟ್ಟಿದೆ.
ಪುರುಷ ಜೀವಕೋಶಗಳಿಂದ ಕಾರ್ಯಸಾಧ್ಯವಾದ ಮೊಟ್ಟೆಗಳನ್ನು ಉತ್ಪಾದಿಸುವ ಸಲುವಾಗಿ ಹಲವು ಸರಣಿಯ ಕಾರ್ಯವಿಧಾನಗಳನ್ನು ಅನುಸರಿಸಬೇಕಾಗಿತ್ತು. ಮೊದಲ ಹಂತದಲ್ಲಿ ಪುರುಷ ಚರ್ಮದ ಕೋಶಗಳನ್ನು ಸ್ಟೆಮ್ ಸೆಲ್ಗಳಿಗೆ ಹೋಲುವ ಸ್ಥಿತಿಗೆ ರಿಪ್ರೊಗ್ರಾಮ್ ಮಾಡಬೇಕಿತ್ತು. ಇದನ್ನು induced pluripotent stem (iPS) ಕೋಶಗಳೆನ್ನಲಾಗುತ್ತದೆ. ಮನುಷ್ಯರ ಕೋಶವು ಪ್ರಬುದ್ಧ ಮೊಟ್ಟೆಯನ್ನು ಉತ್ಪಾದನೆ ಮಾಡಲು ಹೆಚ್ಚಿನ ಅವಧಿ ಬೇಕಾಗಬಹುದು ಎಂದು ಅಧ್ಯಯನ ತಿಳಿಸಿದ್ದು, ಹೀಗಾಗಿ, ಅನಗತ್ಯ ಅನುವಂಶಿಕ ಬದಲಾವಣೆಗಳು ಉಂಟಾಗುವ ಸಾಧ್ಯತೆಗಳಿದ್ದು ಇದರಿಂದಾಗಿ ಅಪಾಯ ಉಂಟಾಗುವ ಸಂಭವ ಕೂಡ ಇದೆ. ಮನುಷ್ಯರ ಮೇಲೆ ಇಂತಹ ವಿಜ್ಞಾನ ಬಳಕೆ ಮಾಡಲು ಹೆಚ್ಚಿನ ಅಧ್ಯಯನ, ಸಂಶೋಧನೆ ಅವಶ್ಯಕವೆಂದು ಸಂಶೋಧಕರು ಅಂದಾಜಿಸಿದ್ದು, ಮುಂದಿನ ಹತ್ತು ಅಥವಾ ಇಪ್ಪತ್ತು ವರ್ಷಗಳಲ್ಲಿ ಇದು ಕಾರ್ಯರೂಪಕ್ಕೆ ಬರುವ ಸಾಧ್ಯತೆಯ ಬಗ್ಗೆ ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Men’s Beauty Tips: ಬಿರು ಬಿಸಿಲಿನಲ್ಲಿ ಬೇಗೆಯ ನಡುವೆ ಪುರುಷರ ಮೊಗದ ಸೌಂದರ್ಯ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ!