Humans win Death: 2030 ಕ್ಕೆ ಮನುಷ್ಯ ಸಾವನ್ನು ಗೆಲ್ಲುತ್ತಾನೆ, ‘ ನಾನೋ ಬೋಟ್ ‘ಗಳು ಅದಕ್ಕೆ ಸಹಾಯ ಮಾಡುತ್ತವೆ !!

Humans win Death: ಇನ್ನೊಂದು ಕೆಲವೇ ಕೆಲವು ವರ್ಷ ಚೆನ್ನಾಗಿ ಆರೋಗ್ಯ ಮೈನ್ಟೈನ್ ಮಾಡಿಕೊಂಡು ಬದುಕಿರಿ. 2030 ರ ಇಸವಿ ಬರೋದರ ಒಳಗೆ ನೀವು ಸಾವನ್ನು ಗೆದ್ದಿರುತ್ತೀರಿ ! ಹೌೌದು, ಓದುಗರೇ, 2030 ರ ಇಷವಿಯ ಒಳಗೆ ಮನುಷ್ಯ ಸಾವನ್ನು ಗೆಲ್ಲುತ್ತಾನೆ. ಅದಕ್ಕೆ ನಾನೋ ಬೋಟ್ (Nano Bot) ಗಳು ಸಹಾಯ ಮಾಡುತ್ತವೆ ಎಂಬುದಾಗಿ ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಗೂಗಲ್ ನ ಮಾಜಿ ಇಂಜಿನಿಯರ್ ಆಗಿರುವ ಮತ್ತು ಫ್ಯೂಚರಿಸ್ಟ್ ಕರೆಸಿಕೊಳ್ಳುವ ರೇ ಕೂರ್ಜ್ವೀಲ್ Ray Kurzweil ಎಂಬ ಟೆಕ್ ವಿಜ್ಞಾನಿ ಹೇಳಿದ್ದಾರೆ. (As per Ray Kurzweil prediction, humans will not die after 2030. Nanobots will help humans to achieve immortality)

 

 

ಈತ ಹೇಳಿದ್ದನ್ನು ತುಂಬಾ ಸೀರಿಯಸ್ ಆಗಿ ಜಗತ್ತು ತೆಗೆದುಕೊಂಡಿದೆ. ಅದಕ್ಕೆ ಕಾರಣವೂ ಇದೆ. ಇಲ್ಲಿಯವರೆಗೆ ಆತ ಪ್ರೆಡಿಕ್ಟ್ ಮಾಡಿದ 147 ಭವಿಷ್ಯದ ಊಹೆಗಳಲ್ಲಿ ಪ್ರತಿಶತ 86% ರಷ್ಟು ಸತ್ಯವಾಗಿದೆ.

 

ಸಾವನ್ನು ಗೆಲ್ಲಲು ನಾನೋ ಬೋಟ್ ಗಳು ಸಹಾಯ ಮಾಡುತ್ತವೆಯಂತೆ. ನಾನೋ ಬೋಟ್ ಗಳೆಂದರೆ, ಸಣ್ಣ ಸೈಜಿನ ಭಾರೀ ಪವರ್ ಫುಲ್ ರೋಬೋಟ್ ಗಳು. ಅವುಗಳು ಮನುಷ್ಯ ದೇಹದ ಸತ್ತ ಕೋಶಗಳನ್ನು ತೆಗೆದುಹಾಕಿ ಒಳ್ಳೆಯ ಕೋಶಗಳನ್ನು ಭರಿಸುತ್ತದೆ. ಆ ಮೂಲಕ ಮನುಷ್ಯನು ಅಮರತ್ವವನ್ನು ಸಾಧಿಸುತ್ತಾನೆ. ಇದು 1997 ರಲ್ಲಿ ಟೆಕ್ನಾಲಜಿ ಯಲ್ಲಿ ಅವಾರ್ಡ್ ಪಡೆದ ಈ ವಿಜ್ಞಾನಿಯ ಭವಿಷ್ಯ.

 

ಆತನ ಊಹೆಯ ಪ್ರಕಾರ 2029 ನೇ ಇಸವಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅದರ ಅತ್ಯುನ್ನತ ಮಟ್ಟಕ್ಕೆ ತಲುಪಿ ಅದು ಟೂರಿಂಗ್ ಟೆಸ್ಟ್ ಅನ್ನು ಪಾಸ್ ಮಾಡುತ್ತದೆ. 2045 ಕ್ಕೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಶಿಖರವೇರಿ ಕುಳಿತಿರುತ್ತದೆ. ಅದು ಇವತ್ತಿನ ಬುದ್ಧಿಮತ್ತೆಗಿಂತ ಬಿಲಿಯನ್ ಪಟ್ಟು ಹೆಚ್ಚಾಗಿರುತ್ತದೆ. ಅಂತಹ ಸ್ಥಿತಿಯನ್ನು ಆತ singularity ಎಂದು ಕರೆದಿದ್ದಾರೆ. ಇದನ್ನಾತ 1917 ರಲ್ಲಿಯೇ ಊಹಿಸಿದ್ದ.

 

ಇಂತಹ ವೈಜ್ಞಾನಿಕ ಊಹೆಗಳನ್ನು ಆತ ಮಾಡುತ್ತಿರುವುದು ಮೊದಲೇನಲ್ಲ. Ray Kurzweil 1990 ರಲ್ಲಿ ಒಂದು ವೈಜ್ಞಾನಿಕ ಭವಿಷ್ಯ ನುಡಿದಿದ್ದ. ಬರುವ ಹತ್ತು ವರ್ಷದಲ್ಲಿ ಅಂದರೆ, 2000 ದ ಇಸವಿಗೆ ವರ್ಲ್ಡ್ ನಂಬರ್ ಒನ್ ಗ್ರಾಂಡ್ ಮಾಸ್ಟರ್ ನನ್ನು ಕಂಪ್ಯೂಟರ್ ಗಳು ಸೋಲಿಸಿ ಬಿಡುತ್ತವೆ ಎಂದಿದ್ದ. ಆತ ಹೇಳಿದ ಗಡುವಿನ 1 ವರ್ಷಕ್ಕೆ ಮೊದಲೇ ಡೀಪ್ ಬ್ಲೂ (Deep Blue) ಎಂಬ ಕಂಪ್ಯೂಟರ್ ಅಂದಿನ ಚೆಸ್ ಚಾಂಪಿಯನ್ ಗ್ಯಾರಿ ಕಾಸ್ಪರೋವ್ ನನ್ನು ಸೋಲಿಸಿ ಬಿಟ್ಟಿತ್ತು.

 

ಸೂಪರ್ ಕಂಪ್ಯೂಟರ್ ಗಳ ಬಗ್ಗೆ ಇನ್ನೂ ಕೆಲವರು ವೈಜ್ಞಾನಿಕ ಭವಿಷ್ಯ ನುಡಿದಿದ್ದಾರೆ. ಅದರಲ್ಲಿ ಜಪಾನಿನ ಸಾಫ್ಟ್ ಬ್ಯಾಂಕ್ ಸಿಇಒ ಮಸಾಯೋಷಿ ಸನ್ ಎಂಬಾತ ಪ್ರಮುಖ. 2047 ರ ಒಳಗೆ ಮನುಷ್ಯನಿಗಿಂತ ತೀರಾ ಚಿಕ್ಕದಾದ ಸೂಪರ್ ಕಂಪ್ಯೂಟರ್ ಗಳ (cyborgs)  lಉದಯ ಆಗತ್ತೆ. ಅವು ನಮ್ಮ ಭಾವನೆಗಳನ್ನು ಕೂಡಾ ಓದಬಲ್ಲ ಕ್ಷಮತೆ ಹೊಂದಿರಲಿದ್ದು, ಅವು ಪರಸ್ಪರ ತಾವೇ ತಮ್ಮನ್ನು ಟ್ರೈನಿಂಗ್ ಮಾಡಿಕೊಳ್ಳಬಲ್ಲವು. ಅವು ನಮ್ಮನ್ನು ನಿಮ್ಮನ್ನು ನೋಡಿ ಹಂಗಿಸಿ ನಗೋ ದಿನಗಳು ದೂರವಿಲ್ಲ ಅಂದಿದ್ದಾರೆ ಮಸಾಯೋಶಿ ಸನ್ ಅವರು.

 

ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನಲ್ಲಿ (Artificial intelligence) ಸಂಶೋಧನೆ ಮತ್ತು ಹೂಡಿಕೆ ಮಾಡಲು ಮೈಕ್ರೋಸಾಫ್ಟ್ ಮತ್ತು ನಿರಂತರವಾಗಿ ಮುಂದೆ ಬಂದಿವೆ. ಇದೇ ವರ್ಷ ಗೂಗಲ್ ಮತ್ತು ಮೈಕ್ರೋಸಾಫ್ಟ್ ತಮ್ಮ ಅಡ್ವಾನ್ಸ್ಡ್ ಚಾಟ್ ಬಾಟ್ ಗಳನ್ನು ಹೊರಕ್ಕೆ ತಂದಿದ್ದಾರೆ. ಆದರೆ ಉನ್ನತ ಮಟ್ಟದ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮನುಷ್ಯ ಸಂತತಿಗೆ ವಿನಾಶಕಾರಿಯಾಗಬಹುದೇ ಎನ್ನುವ ಚಿಂತನೆ ಇದೀಗ ಎದ್ದಿದೆ. ಇಂತಹಾ ಚಿಂತನೆಯ ಹಿಂದೆ ವಿಶ್ವದ ನಂಬರ್ ಒನ್ ಶ್ರೀಮಂತ ಎನಿಸಿಕೊಂಡಿದ್ದ ಟೆಕ್ ದೊರೆ, ಟ್ವಿಟರ್ ನ ಬಾಸ್, ಸ್ಪೇಸ್ ಎಕ್ಸ್ ನ ಜನಕ ಎಲಾನ್ ಮಸ್ಕ್ ಕೂಡ ಒಬ್ಬರು. ದೇಶ ವಿದೇಶಗಳಲ್ಲಿ ಏಕಾಏಕಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಲ್ಯಾಬ್ ಗಳು ತಲೆಯೆತ್ತಿರುವುದು ಮತ್ತು ಅದರ ಮೇಲೆ ಸರಕಾರದ ಯಾವುದೇ ನಿಯಂತ್ರಣ ಇಲ್ಲದೆ ಇರುವುದು ಕೆಲವು ಬುದ್ಧಿಜೀವಿ ವಿಜ್ಞಾನಿಗಳ ಭಯಕ್ಕೆ ಕಾರಣವಾಗಿದೆ. ಅದೇನೇ ಇರಲಿ ಆದಷ್ಟು ಬೇಗ ಮನುಷ್ಯ ಸಾವನ್ನು ಗೆಲ್ಲುವಂತವನಾಗಲಿ (Humans win Death). ಮತ್ತು ಯಂತ್ರಗಳು ಮನುಷ್ಯನ ಪೂರ್ಣ ಅಂಕುಶದಲ್ಲಿ ಇರುವಂತಾಗಲಿ.

ಇದನ್ನೂ ಓದಿ: Odisha : ಕುಡಿದ ಅಮಲಿನಲ್ಲಿ ಮಿತಿ ಮೀರಿದ ಜಗಳ ಗುಪ್ತಾಂಗವನ್ನೇ ಕತ್ತರಿಸಿದ ಸ್ನೇಹಿತ !

Leave A Reply

Your email address will not be published.