Smart Phone got Huge Discount : ಭರ್ಜರಿ ಡಿಸ್ಕೌಂಟ್ ನಲ್ಲಿ ಉತ್ತಮ ಸ್ಮಾರ್ಟ್ ಫೋನ್!! ಈಗಲೇ ಖರೀದಿಸಿ

Smart phone : ಸ್ಮಾರ್ಟ್ ಫೋನ್ ನ ವ್ಯಾಪಕವಾದ ಬಳಕೆಯಿಂದಾಗಿ ಕಂಪನಿಗಳು(company )ಕೂಡ ಹೊಸ ಹೊಸ ರೀತಿಯ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಆದರೆ ಉತ್ತಮ ಕ್ಯಾಮೆರಾ(camera ), ಹೆಚ್ಚಿನ ಪ್ರೊಸೆಸರ್, ಫಾಸ್ಟ್ ಚಾರ್ಜಿಂಗ್ ಬ್ಯಾಟರಿಯಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿರುವ, ಸ್ಮಾರ್ಟ್‌ ಫೋನ್‌ಗೆ ಅಪ್ಡೇಟ್ ಆಗುವುದು ಎಲ್ಲರ ಕನಸು. ಸದ್ಯ ಬಜೆಟ್ ಸಮಸ್ಯೆಯಿಂದ ಸಾಧ್ಯವಾಗುವುದಿಲ್ಲ. ಇದೀಗ ಅತ್ಯುತ್ತಮವಾದ ಸ್ಮಾರ್ಟ್‌ಫೋನ್‌ಗಳಿಗೆ (Smart phone)ಬೆಲೆ ಇಳಿಕೆಯಾಗಿದ್ದು, ಈ ಮೂಲಕ ನೀವು ಹಳೆಯ ಫೋನ್‌ನಿಂದ ಹೊಸ ಫೋನ್‌ಗೆ ಅಪ್ಡೇಟ್ ಆಗಬಹುದಾಗಿದೆ.

 

 

ಹೌದು, ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರಮುಖವಾಗಿ ಒನ್‌ಪ್ಲಸ್, ಶಿಯೋಮಿ,ಮೊಟೊರೊಲಾ ಸೇರಿದಂತೆ ಇನ್ನಿತರೆ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಅಫರ್ ನೀಡಲಾಗಿದೆ.

 

ಶಿಯೋಮಿ 12 ಪ್ರೊ:

ಶಿಯೋಮಿ 12 ಪ್ರೊ ಈ ಫೋನ್ ಮೇಲೆ ಬರೋಬ್ಬರಿ 10,000ರೂ. ಗಳ ಬೆಲೆ ಇಳಿಕೆಯಾಗಿದೆ. ಈ ಮೂಲಕ ನೀವು 8GB ವೇರಿಯಂಟ್ ಫೋನ್ ಅನ್ನು 52,999ರೂ. ಗಳಿಗೆ ಹಾಗೂ 12GB ವೇರಿಯಂಟ್ ಫೋನ್ ಅನ್ನು 54,999ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಈ ಫೋನ್ ಆಕ್ಷಾ-ಕೋರ್ ಕ್ವಾಲ್ಕಾಮ್ ಸ್ನಾಷ್ಟ್ರಾಗನ್ 8 ಜನ್ 1 ಪ್ರೊಸೆಸರ್ ಬಲ ಹೊಂದಿದೆ.

 

ಶಿಯೋಮಿ 11 ಲೈಟ್ NE 5G:

ಶಿಯೋಮಿ 11 ಲೈಟ್ NE 5G ಸ್ಮಾರ್ಟ್‌ಫೋನ್ ಸೆಪ್ಟೆಂಬರ್ 2021 ರಲ್ಲಿ ಲಾಂಚ್ ಆಗಿದ್ದು 3,000ರೂ. ಗಳ ಬೆಲೆ ಕಡಿತವನ್ನು ಹೊಂದಿದೆ. ಈ ಮೂಲಕ ಗ್ರಾಹಕರು 6GB ವೇರಿಯಂಟ್ ಫೋನ್ ಅನ್ನು 26,999ರೂ. ಗಳಿಗೆ ಹಾಗೂ 8GB ವೇರಿಯಂಟ್ ಫೋನ್ ಅನ್ನು 28,999ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಜೊತೆಗೆ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 778G ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ.

 

ಒನ್‌ಪ್ಲಸ್ 10R:

ಒನ್‌ಪ್ಲಸ್ 10R ಫೋನ್ ಇತ್ತೀಚೆಗೆ ಹೆಚ್ಚು ಮಾರಾಟ ಆಗುತ್ತಿರುವ ಸ್ಮಾರ್ಟ್‌ಫೋನ್ ಆಗಿದ್ದು, ಇತ್ತೀಚೆಗೆ ಎರಡನೇ ಬಾರಿಗೆ ಇದರ ಬೆಲೆಯಲ್ಲಿ ಕಡಿತವಾಗಿದೆ. ಅಂದರೆ ಕಳೆದ ವರ್ಷ 4,000ರೂ. ಗಳ ಬೆಲೆ ಇಳಿಕೆ ಕಂಡಿದ್ದ ಈ ಫೋನ್ ಇದೀಗ ಮತ್ತೆ 3,000ರೂ. ಗಳ ಬೆಲೆ ಇಳಿಕೆಯೊಂದಿಗೆ ಕಾಣಿಸಿಕೊಂಡಿದೆ. ಇದರೊಂದಿಗೆ 8GB+128GB (80W), 12GB+256GB (80W) 12GB+256GB (150W) 3 ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿದ್ದು, 34,999ರೂ. ಗಳ ಆರಂಭಿಕ ಬೆಲೆ ಹೊಂದಿದೆ.

 

ಮೊಟೊ G72:

ಮಾರುಕಟ್ಟೆಯಲ್ಲಿ ಮಗದೊಂದು ಜನಪ್ರಿಯ ಸ್ಮಾರ್ಟ್‌ಫೋನ್ ಆಗಿರುವ ಮೊಟೊ G72 ಫೋನ್ ಸಹ 3,000ರೂ. ಗಳ ಡಿಸ್ಕೌಂಟ್ ಪಡೆದಿದ್ದು, ಈ ಮೂಲಕ 15,999ರೂ. ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ. ಇದು ಆಕ್ಷಾ-ಕೋರ್ ಮೀಡಿಯಾ ಟೆಕ್ ಹಿಲಿಯೋ G99 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ.

 

ಮೊಟೊ ಎಡ್ಜ್ 30:

ಮೊಟೊ ಎಡ್ಸ್ 30 ಸ್ಮಾರ್ಟ್‌ಫೋನ್ 3,000ರೂ. ಗಳ ಬೆಲೆ ಕಡಿಮೆ ಆಗಿದ್ದು , ಈ ಮೂಲಕ 6GB ವೇರಿಯಂಟ್‌ಗೆ 24,999ರೂ. ಗಳು ಹಾಗೂ 8GB ವೇರಿಯಂಟ್‌ಗೆ 26,999ರೂ. ಗಳನ್ನು ನಿಗದಿ ಮಾಡಲಾಗಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್ಟಾಗನ್ 778+ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಹಾಗೆಯೇ ಆಂಡ್ರಾಯ್ಡ್ 12 ಅನ್ನು ರನ್ ಮಾಡುತ್ತದೆ.

 

ಈ ಮೇಲಿನ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಪ್ರಮುಖ ಇ-ಕಾಮರ್ಸ್ ಸೈಟ್‌ಗಳಾದ ಅಮೆಜಾನ್ ಹಾಗೂ ಸ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದ್ದು, ಈ ಬೆಲೆ ಇಳಿಕೆ ಆಫರ್‌ನೊಂದಿಗೆ ಇನ್ನೂ ಹೆಚ್ಚಿನ ಆಫರ್ ಅನ್ನು ಸಹ ಪಡೆದುಕೊಳ್ಳಬಹುದು. ಅಂದರೆ ಗ್ರಾಹಕರು ಬ್ಯಾಂಕ್ ಕಾರ್ಡ್‌ಗಳು ಹಾಗೂ ವಿನಿಮಯ ಆಫರ್ ಮೂಲಕ ಖರೀದಿ ಮಾಡಿದರೆ ಇನ್ನೂ ಹೆಚ್ಚಿನ ಆಫರ್ ಬೆಲೆಯಲ್ಲಿ ಈ ಹೊಸ ಫೋನ್‌ಗಳು ಲಭ್ಯವಾಗಲಿದೆ. ಸದ್ಯ ಈ ಎಲ್ಲಾ ಫೋನ್‌ಗಳು ಉತ್ತಮ ಕಾರ್ಯಕ್ಷಮತೆ ಹಾಗೂ ಅತ್ಯುತ್ತಮ ಪ್ರೊಸೆಸರ್ ಅನ್ನು ಪಡೆದುಕೊಂಡಿದ್ದು, ದೀರ್ಘ ಬಾಳಿಕೆ ಬರುತ್ತವೆ ಎಂದು ಕಂಪನಿ ಭರವಸೆ ನೀಡಿದೆ.

ಇದನ್ನೂ ಓದಿ: Summer 2023 : ಬೇಸಿಗೆಯಲ್ಲಿ ಮಕ್ಕಳಿಗೆ ಕಾಡುವ ಆರೋಗ್ಯ ಸಮಸ್ಯೆ, ಪೋಷಕರೇ ಇಲ್ಲಿದೆ ಕೆಲವು ಮಾಹಿತಿ!

Leave A Reply

Your email address will not be published.