Honda sp 125 : 2023ರ ಹೋಂಡಾ SP125 ಬೈಕ್ ವಿಶೇಷತೆಗಳು, ಕಂಪ್ಲೀಟ್‌ ವಿವರ ಇಲ್ಲಿದೆ!

Honda SP 125 : ಬೈಕ್ ಅಂದರೆ ಸಾಕು!!! ಹುಡುಗರ ಪಾಲಿನ ಗರ್ಲ್ ಫ್ರೆಂಡ್ ಇದ್ದಂತೆ. ಎಲ್ಲೇ ಹೋದರು ಬಂದರೂ ಯುವಜನತೆಗೆ ಬೈಕ್ ಮೇಲಿನ ವ್ಯಾಮೋಹ ಕಡಿಮೆ ಅಗುವಂತಹದಲ್ಲ. ಇಂದು ಮಾರುಕಟ್ಟೆಯಲ್ಲಿ ಹೊಸ ಹೊಸ ವೈಶಿಷ್ಟ್ಯದ ಬೈಕ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಇತ್ತೀಚೆಗೆ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಹೊಸ ವಿಶೇಷತೆಯನ್ನು ಒಳಗೊಂಡ ಪವರ್‌ಟ್ರೇನ್‌ನೊಂದಿಗೆ 2023ರ ಹೋಂಡಾ SP125 ಬೈಕ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ 2023ರ ಹೋಂಡಾ SP125 (Honda SP 125)ಬೈಕಿನ ವಿಶೇಷತೆಯ ಬಗ್ಗೆ ಮಾಹಿತಿ ಇಲ್ಲಿದೆ. 2023ರ ಹೋಂಡಾ SP125 (2023 Honda SP125)ಬೈಕಿನಲ್ಲಿನ ಎಂಜಿನ್ ಅನ್ನು ಇತ್ತೀಚಿನ RDE ಮತ್ತು BS6 ಹಂತ 2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಲಾಗಿದೆ. ಇದಲ್ಲದೆ, ಈ ಬೈಕ್ ನೈಜ-ಸಮಯದ ಹೊರಸೂಸುವಿಕೆಯನ್ನು ಮೇಲ್ವಿಚಾರಣೆ ಮಾಡಲು OBD2 ಪೋರ್ಟ್ ಅನ್ನು ಸಹ ಹೊಂದಿದೆ. ಈ ಬೈಕ್ ಹೊಸ ನವೀಕರಣಗಳೊಂದಿಗೆ ಉತ್ತಮ ಮೈಲೇಜ್ ಅನ್ನು ಒದಗಿಸುತ್ತದೆ.

ಹೊಸ ಹೋಂಡಾ SP125 ಬೈಕ್ ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 100mm ಅಗಲದ ಹಿಂಭಾಗದ ಟೈರ್‌ಗಳು, LED ಹೆಡ್‌ಲ್ಯಾಂಪ್, ಕಾಂಬಿ-ಬ್ರೇಕ್ ಸಿಸ್ಟಮ್, ಇಂಟಿಗ್ರೇಟೆಡ್ ಪಾಸ್ ಲೈಟ್ ಸ್ವಿಚ್, ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿದೆ. ಇದರ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸರಾಸರಿ ಫ್ಯೂಯಲ್ ದಕ್ಷತೆ, ನೈಜ-ಸಮಯದ ಇಂಧನ ದಕ್ಷತೆ, ECO ಸೂಚಕ, ಗೇರ್ ಪೊಸಿಷನ್ ಸೂಚಕ, ಸರ್ವಿಸ್ ಮತ್ತು ಇತರ ಮಾಹಿತಿಗಳನ್ನು ತೋರ್ಪಡಿಸುತ್ತದೆ.

2023ರ ಹೋಂಡಾ SP125 ಬೈಕ್ ಬಿಡುಗಡೆಯೊಂದಿಗೆ 125cc ಬೈಕ್ ವಿಭಾಗದಲ್ಲಿ ತನ್ನ ಪ್ರಭಾವ ಹೆಚ್ಚಿಸಲು ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ಯೋಜನೆ ಹಾಕುತ್ತಿದೆ. ಅತ್ಯುತ್ತಮ ಫೀಚರ್ಸ್ ಗಳೊಂದಿಗೆ ಈ ಬೈಕ್ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. 2023ರ ಹೋಂಡಾ SP125 ಬೈಕ್ ಬ್ಯಾಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಇಂಪೀರಿಯಲ್ ರೆಡ್ ಮೆಟಾಲಿಕ್, ಪರ್ಲ್ ಸೈರನ್ ಬ್ಲೂ ಮತ್ತು ನ್ಯೂ ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್ ಒಳಗೊಂಡಂತೆ 5 ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದ್ದು, ಗ್ರಾಹಕರು ಇದರಲ್ಲಿ ತಮ್ಮ ಮೆಚ್ಚಿನ ಬಣ್ಣದ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

2023ರ ಹೋಂಡಾ SP125 ಬೈಕಿನಲ್ಲಿ 125cc, ಸಿಂಗಲ್-ಸಿಲಿಂಡರ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಈ ಎಂಜಿನ್ 10.7 bhp ಪವರ್ ಮತ್ತು 10.9 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ACG ಸ್ಟಾರ್ಟರ್ ಮೋಟಾರ್ ಮತ್ತು 5-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ. 2023ರ ಹೋಂಡಾ SP125 ಬೈಕ್ ಎರಡು ರೂಪಾಂತರಗಳಲ್ಲಿ ದೊರೆಯಲಿದೆ. ಇದು ಡ್ರಮ್ ಮತ್ತು ಡಿಸ್ಕ್ ರೂಪಾಂತರಗಳಾಗಿದ್ದು, ಈ ಹೋಂಡಾ ಬೈಕಿನ ಡ್ರಮ್ ರೂಪಾಂತರದ ಬೆಲೆಯು ಎಕ್ಸ್ ಶೋರೂಂ (Ex -Showroom)ರೂ.85,121 ಗಳಾದರೆ, ಈ ಬೈಕಿನ ಟಾಪ್ ರೂಪಾಂತರವಾದ ಡಿಸ್ಕ್ ರೂಪಾಂತರ ಬೆಲೆಯು(Ex- Showroom) ರೂ,89,131 ಆಗಿದೆ.

ಇದನ್ನೂ ಓದಿ: Nayanatara childrens Name : ಕೊನೆಗೂ ತನ್ನ ಅವಳಿ ಮಕ್ಕಳ ಹೆಸರು ಬಹಿರಂಗಪಡಿಸಿದ ನಯನತಾರಾ ದಂಪತಿ!

Leave A Reply

Your email address will not be published.