CUET PG-2023 : ಈ 15 ಹೊಸ ವಿಶ್ವವಿದ್ಯಾಲಯಗಳು 2023 ರ CUET PG ಪರೀಕ್ಷೆಗೆ ಆದ್ಯತೆ ನೀಡಲು ಸಿದ್ಧ !
CUET PG-2023 : ಕೇಂದ್ರ ಸರ್ಕಾರವು ಪ್ರವೇಶ ಪರೀಕ್ಷೆಯ ಪ್ರಕ್ರಿಯೆಯನ್ನು ಸುಲಭಗೊಳಿಸುವ ಮತ್ತು ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸಲು ವಿಶ್ವವಿದ್ಯಾಲಯ (University) ಪ್ರವೇಶ ಪರೀಕ್ಷೆಯನ್ನು (CUET PG-2023) ಪರಿಚಯಿಸಿದೆ.
CUET PG ಪರೀಕ್ಷೆಯನ್ನು ಮೊದಲಿಗೆ ಕೇವಲ ಕೆಲವು ವಿಶ್ವವಿದ್ಯಾಲಯಗಳು ನಡೆಸುತ್ತಿದ್ದವು. ಆದರೆ ಕ್ರಮೇಣವಾಗಿ ಪರೀಕ್ಷೆ ನಡೆಸುವ ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚುತ್ತ ಹೋದವು. ಇದೀಗ ಕೇಂದ್ರೀಯ ವಿಶ್ವವಿದ್ಯಾಲಯಗಳು, ರಾಜ್ಯ ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ಸ್ನಾತ್ತಕೋತ್ತರ ಕೋರ್ಸ್ ಗಳ ಪ್ರವೇಶಕ್ಕೆ CUTE PG ಪರೀಕ್ಷೆಯನ್ನು ಅನುಸರಿಸುತ್ತಿವೆ.
ಈ ವರ್ಷವು ಮೊದಲಿಗೆ ಕೆಲವು ವಿಶ್ವವಿದ್ಯಾಲಯಗಳು ಈ ಪರೀಕ್ಷೆಯನ್ನು (Exam) ಅರ್ಹತೆ ಎಂದು ಪರಿಗಣಿಸಲು ಮುಂದೆ ಬಂದವು. ಈಗ ಅವರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಕೇಂದ್ರೀಯ ವಿಶ್ವವಿದ್ಯಾನಿಲಯಗಳು, ರಾಜ್ಯ, ಡೀಮ್ಡ್ ಮತ್ತು ಇತರ 15 ವಿಶ್ವವಿದ್ಯಾಲಯಗಳು CUET PG ಪರೀಕ್ಷೆಯನ್ನು ಪ್ರಾರಂಭಿಸಿದೆ. ರಾಷ್ಟ್ರೀಯ ಸಂಸ್ಥೆವು ನೀಡಿರುವ ಮಾಹಿತಿ ಪ್ರಕಾರ ಖಾಸಗಿ ವಿಶ್ವವಿದ್ಯಾನಿಲಯಗಳು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಪ್ರವೇಶಕ್ಕಾಗಿ CUET PG ಅನ್ನು ಅರ್ಹತಾ ಪರೀಕ್ಷೆಯಾಗಿ ಪ್ರಾರಂಭಿಸಿದೆ.
ಹೊಸ CUTE PGಗೆ ಸೇರ್ಪಡೆಗೊಂಡ ವಿಶ್ವವಿದ್ಯಾಲಯಗಳ ಹೆಸರನ್ನು ಇಲ್ಲಿ ನೀಡಲಾಗಿದೆ. ನೀವೂ ಈ ಪರೀಕ್ಷೆ ಬರೆಯುವ ಮೂಲಕ ಈ ಯುನಿವರ್ಸಿಟಿಗಳಿಗೆ ಸೇರಿಕೊಳ್ಳಬಹುದು. ವಿಶ್ವವಿದ್ಯಾಲಯಗಳ ಹೆಸರು ಇಲ್ಲಿದೆ ನೋಡಿ.
ಕತ್ರಾದ ಶ್ರೀ ಮಾತಾ ವೈಷ್ಟೋ ದೇವಿ ವಿಶ್ವವಿದ್ಯಾಲಯ
ದ್ವಾರಕಾದ ಪಾರುಲ್ ವಿಶ್ವವಿದ್ಯಾಲಯ- ವಡೋದರಾನೇತಾಜಿ ಸುಭಾಸ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ
ಗುರಗಾಂವ್ ನ ಶ್ರೀ ವಿಶ್ವಕರ್ಮ ಕೌಶಲ್ಯ ವಿಶ್ವವಿದ್ಯಾಲಯ
ದೆಹಲಿಯ ಸೋನೆಪತ್ ನಲ್ಲಿನ SRM ವಿಶ್ವವಿದ್ಯಾಲಯ
ಸಿಂಗ್ ನ ಜ್ಞಾನಿ ಇಂದರ್ ಸಿಂಗ್ ಇನ್‌ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಸ್ಟಡೀಸ್
ಡೆಹ್ರಾಡೂನ್ ನ ಭಂಡಾರಿಉತ್ತರಾಖಂಡ ತಾಂತ್ರಿಕ ವಿಶ್ವವಿದ್ಯಾಲಯ
ಮೇಘಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ
ನೋಯ್ಡಾದ ಜೇಪೀ ಇನ್‌ಸ್ಟಿಟ್ಯೂಟ್ ಆಫ್ ಇನ್ನರ್ಮೇಷನ್ ಟೆಕ್ನಾಲಜಿ
ಅಮರಕಂಟಕ್‌ನ ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯ
ಜಮ್ಮು ಮತ್ತು ಕಾಶ್ಮೀರ ದಲ್ಲಿನ ರಚೌರಿ ಬಾಬಾ ಗುಲಾಮ್ ಶಾ ಬಾದಶಾ ವಿಶ್ವವಿದ್ಯಾಲಯ
ರೂರ್ಕಿ ಯ ಕ್ವಾಂಟಮ್ ವಿಶ್ವವಿದ್ಯಾಲಯ
ಧನ್ಹಾದ್ ನ ಬಿನೋದ್ ಬಿಹಾರಿ ಮಹತೋ ಕೊಯಲಾಂಚಲ್ ವಿಶ್ವವಿದ್ಯಾಲಯ
ನವದೆಹಲಿಯ TRI ಸ್ಕೂಲ್ ಆಫ್ ಅಡ್ವಾನ್ಸ್ ಸ್ಟಡೀಸ್
ಈ ಎಲ್ಲಾ ವಿಶ್ವವಿದ್ಯಾಲಯದಲ್ಲಿ ನೀವು ಪರೀಕ್ಷೆ ಪಡೆಯಬಹುದು.
ಇನ್ನೂ ಕೆಲವು ವಿಶ್ವವಿದ್ಯಾಲಯಗಳು CUET PG ಪರೀಕ್ಷೆಗೆ ಹೊಸ ಕೋರ್ಸ್‌ಗಳನ್ನು ಕೂಡ ಸೇರಿಸಿವೆ. ವಿಶ್ವವಿದ್ಯಾಲಯಗಳ ಹೆಸರಿನ ಪಟ್ಟಿ ಇಲ್ಲಿದೆ. ಜಮ್ಮು ವಿಶ್ವವಿದ್ಯಾಲಯ, ಪಾಂಡಿಚೇರಿ ವಿಶ್ವವಿದ್ಯಾಲಯ,ಹೈದರಾಬಾದ್ ವಿಶ್ವವಿದ್ಯಾಲಯ, ಎಸ್‌ಆರ್ ವಿಶ್ವವಿದ್ಯಾಲಯ, ದೆಹಲಿಯ ಡಾ. ಬಿ.ಆರ್. ಅಂಬೇಡ್ಕರ್ ವಿಶ್ವವಿದ್ಯಾಲಯ, ಸೋಮಯ್ಯ ವಿದ್ಯಾವಿಹಾರ್ ವಿಶ್ವವಿದ್ಯಾಲಯ ,ತ್ರಿಪುರಾ ವಿಶ್ವವಿದ್ಯಾಲಯ ಮತ್ತು ಡಾ. ಹರಿಸಿಂಗ್ ಗೌರ್ ವಿಶ್ವವಿದ್ಯಾಲಯಗಳು.
ಕೆಲವೊಂದು ವಿಶ್ವವಿದ್ಯಾಲಯಗಳು ಹೊಸ ಕೋರ್ಸ್ಗಳನ್ನು ಸೇರಿಸಿದೆ ಮತ್ತು ಕೆಲ ವಿಶ್ವ ವಿದ್ಯಾಲಯ ಪರೀಕ್ಷೆಯಲ್ಲಿ ಕೆಲವೊಂದು ಕೋರ್ಸ್ ಗಳನ್ನು ತೆಗೆದು ಹಾಕಿವೆ. ತೆಗೆದು ಹಾಕಿರುವ ವಿಶ್ವವಿದ್ಯಾಲಯ ಹೆಸರು- ಗೋರಖ್ಪುರ ದ ಮದನ್ ಮೋಹನ್ ಮಾಳವೀಯ ತಂತ್ರಜ್ಞಾನ ವಿಶ್ವವಿದ್ಯಾಲಯ, ರಾಜಸ್ತಾನ ದ ಸಂಗಮ್ ವಿಶ್ವವಿದ್ಯಾಲಯ, ಸಾಗರ್ ದ ಹರಿಸಿಂಗ್ ಗೌರ್ ವಿಶ್ವವಿದ್ಯಾಲಯಗಳು. ಕೋರ್ಸ್ ಗಳನ್ನು ಸೇರಿಸಿರುವ ವಿಶ್ವವಿದ್ಯಾಲಯಗಳು – ಸಿಕ್ಕಂ ನ ವಿಶ್ವವಿದ್ಯಾನಿಲಯ, ದೆಹಲಿಯ ಡಾ. ಬಿ ಆರ್ ಅಂಬೇಡ್ಕರ್ ವಿಶ್ವವಿದ್ಯಾನಿಲಯ, ಈಶಾನ್ಯ ಹಿಲ್ ವಿಶ್ವ ವಿದ್ಯಾನಿಲಯ, ಹಾಗೂ ಹೈದರಾಬಾದ್ ನ ವಿಶ್ವ ವಿದ್ಯಾನಿಲಯ ಗಳು.
ಮುಂದಿನ ಜೂನ್ 1 ರಿಂದ ಪರೀಕ್ಷೆಗಳು ಆರಂಭವಾಗುತ್ತಿದೆ.
ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ನಡೆಸಲಾಗುತ್ತದೆ ಎಂದು ಎನ್ ಟಿ ಎ ತಿಳಿಸಿದೆ. ಇದರ ಮುಂಚೆ ಹಿಂದೂ ಅಧ್ಯನ ಪತ್ರಿಕೆಯನ್ನು ಸಂಸ್ಕೃತ ಮತ್ತು ಇಂಗ್ಲಿಷ್ ನಲ್ಲಿ ನಡೆಸಲಾಗುತ್ತದೆ ಎಂದು ಹೇಳುತ್ತಿದ್ದರು. ಆದರೆ ಇದೀಗ ಎನ್ ಟಿ ಎ ಪರೀಕ್ಷೆಯ ಬಗ್ಗೆ ಮಾಹಿತಿ ನೀಡಿದೆ. ಪರೀಕ್ಷೆಯು ಜೂನ್ 1 ರಿಂದ ಪ್ರಾರಂಭವಾಗುತ್ತದೆ. ಈಗಾಗಲೇ ನೋಂದಣಿ ಪ್ರಕ್ರಿಯೆ ಶುರು ಆಗಿದೆ ಮತ್ತು ಏಪ್ರಿಲ್ 19ಕ್ಕೆ ನೋಂದಣಿ ಕೊನೆಗೊಳ್ಳಲಿದೆ.