Driving Licence : ಪದವಿ ಇಲ್ಲದವರಿಗೆ ಡ್ರೈವಿಂಗ್ ಲೈಸೆನ್ಸ್ ರದ್ದು!

Driving Licence: ಡ್ರೈವಿಂಗ್ ಲೈಸೆನ್ಸ್ (Driving licence)ಯಾವುದೇ ವಾಹನವನ್ನೂ ಚಲಾಯಿಸಲು ಅವಶ್ಯಕವಾಗಿದ್ದು, ಒಂದು ವೇಳೆ ಡಿಎಲ್(DL) ಎಂದರೆ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲ ಎಂದಾದರೆ ಸಾಮಾನ್ಯವಾಗಿ ನೀವು ಅದಕ್ಕಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಹೋಗಿ ಮಾಡಿಸಿಕೊಂಡು ಬರುವುದು ವಾಡಿಕೆ.ಹೆಚ್ಚುತ್ತಿರುವ ಸಂಚಾರ ದಟ್ಟಣೆ (Road Traffic)ನಿಯಂತ್ರಣಕ್ಕೆ ಕುವೈತ್‌ ಸರ್ಕಾರ ಹೊಸ ಕ್ರಮ ಜಾರಿಗೊಳಿಸಲು ಮುಂದಾಗಿದೆ.

 

ಕುವೈತ್‌ ಗೃಹ ಸಚಿವಾಲಯ ಸಂಚಾರ ದಟ್ಟಣೆಯನ್ನ ಕಡಿಮೆ ಮಾಡುವ ಸಲುವಾಗಿ 600 ದಿನಾರ್‌ಗಳಿಂದ ಕಡಿಮೆ ಸಂಬಳ ಇರುವ ಮತ್ತು ಮಾನ್ಯತೆ ಪಡೆದ ವಿವಿಯಿಂದ ಪದವಿ (Degree)ಅಥವಾ ಡಿಪ್ಲೊಮಾ(Diploma) ಹೊಂದಿರದೆ ಇರುವ ವಿದೇಶಿ ಚಾಲಕರ ಚಾಲನಾ ಪರವಾನಗಿಯನ್ನು ಹಿಂಪಡೆಯಲು ಕುವೈತ್‌ ಸರ್ಕಾರ ತೀರ್ಮಾನ ಕೈಗೊಂಡಿದೆ. ಹೀಗಾಗಿ, ಒಂದು ವೇಳೆ, ಈ ನಿಯಮ ಜಾರಿಗೆ ಬಂದಲ್ಲಿ ಭಾರತೀಯರನ್ನೊಳಗೊಂಡಂತೆ 3 ಲಕ್ಷ ಚಾಲಕರಿಗೆ ಸಮಸ್ಯೆ ತಲೆದೋರುವ ಲಕ್ಷಣಗಳು ದಟ್ಟವಾಗಿದೆ.

ಕುವೈತ್ ನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕುವೈತ್‌ ಸರ್ಕಾರ ಸಮಿತಿಯೊಂದನ್ನು ರಚನೆ ಮಾಡಿದ್ದು,ಈ ಸಮಿತಿಯು ಸಂಬಳ ಮತ್ತು ಪದವಿ ಆಧಾರದಲ್ಲಿ ಅರ್ಹತೆ ಇಲ್ಲದವರ ಚಾಲನಾ ಪರವಾನಗಿ(Driving Licence) ರದ್ದುಪಡಿಸಲು ಶಿಫಾರಸು ಮಾಡಿದ್ದು, ಈ ನಿರ್ಣಯಕ್ಕೆ ವಿವಿಧ ಮೂಲಗಳಿಂದ ವಿರೋಧ ವ್ಯಕ್ತವಾಗಿದೆ.

ಸರ್ಕಾರದ ಈ ತೀರ್ಮಾನ ಕುವೈತ್ ನಲ್ಲಿ ನೆಲೆಸಿರುವ ವಿದೇಶಿ ಚಾಲಕರಿಗೆ ಆತಂಕ ಉಂಟು ಮಾಡಿದ್ದು, ಇವರ ಜೊತೆಗೆ ಟ್ಯಾಕ್ಸಿ ಕಂಪನಿಗಳು(Taxy Company) ಮತ್ತು ಮಾಲೀಕರು(Owners)ಸಂಬಳ ಕೊಟ್ಟು ಟ್ಯಾಕ್ಸಿ ಸವಾರರನ್ನು ಪೋಷಿದುತ್ತಿದ್ದು, ಇವರಿಗೂ ಕೂಡ ಸಂಕಷ್ಟ ಎದುರಾಗಿದೆ. ಈ ನಡುವೆ ನಾಗರಿಕರು ಸಂಚಾರ ದಟ್ಟಣೆಯನ್ನು ತಗ್ಗಿಸಲು ಬೇರೆ ಪರ್ಯಾಯ ಮಾರ್ಗಗಳನ್ನು ಅನುಸರಿಸಬಹುದು ಎಂಬ ಅಭಿಪ್ರಾಯ ಹೊರ ಹಾಕುತ್ತಿದ್ದಾರೆ. ರಸ್ತೆಗಳ ಸುಧಾರಣೆ (Road Development Activities), ಸೇತುವೆಗಳು ಹಾಗೂ ಸುರಂಗಗಳ ನಿರ್ಮಾಣ, ಸಾರ್ವಜನಿಕ ಸಾರಿಗೆ ಸುಧಾರಣೆಯನ್ನು ಒಳಗೊಂಡಂತೆ ಬೇರೆ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಅಭಿಪ್ರಾಯ ಜನವಲಯಲದಲ್ಲಿ ಚರ್ಚೆ ಆಗುತ್ತಿದೆ.

Leave A Reply

Your email address will not be published.