Aryavardhan guruji: ಆರ್ಯವರ್ಧನ್ ಗುರೂಜಿ ಸಂಖ್ಯಾ ಭವಿಷ್ಯದಂತೆ ರೋಚಕ ಜಯ ಗಳಿಸಿದ RCB! ನಂಬರ್ ಅಂದ್ರೆ ಆರ್ಯವರ್ಧನ್, ಆರ್ಯವರ್ಧನ್ ಅಂದ್ರೆ ನಂಬರ್!!
Aryavardhan guruji : ಸದ್ಯ ಆರ್ಯವರ್ಧನ್ ಗುರೂಜಿ(Aryavardhan Guruji) ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಬಿಗ್ ಬಾಸ್(Bigg Boss) ಮನೆಗೆ ಹೋಗಿ ಬಂದಮೇಲಂತೂ ಗುರೂಜಿ ಫುಲ್ ಫೇಮಸ್! ಜೊತೆಗೆ ಸಂಖ್ಯೆಗಳ ಮೂಲಕವೇ ಭವಿಷ್ಯ ನುಡಿಯೋ ಇವರು ಸಂಖ್ಯಾ ಬ್ರಹ್ಮ ಎಂದೂ ಖ್ಯಾತಿ ಗಳಿಸಿದ್ದಾರೆ. ಬಿಗ್ ಬಾಸ್ ಮನೆಗೂ ಸಂಖ್ಯೆ ನೋಡಿ ಭವಿಷ್ಯ ಹೇಳೋ ಮೂಲಕವೇ ಆರ್ಯವರ್ಧನ್ ಎಂಟ್ರಿ ಕೊಟ್ಟಿದ್ರು. ಅಂದಹಾಗೆ ನೆನ್ನೆ ನಡೆದ IPLನ ಮುಂಬೈ- ಆರ್ಸಿಬಿ(RCB) ಮ್ಯಾಚ್ನ ಭವಿಷ್ಯವನ್ನು ಕೂಡ ಸಂಖ್ಯೆ ನೋಡೇ ಹೇಳಿದ್ದರು.
ಹೌದು ನಿನ್ನೆ ಬಿಟಿವಿಯ 4 ಗಂಟೆಯ IPL ಹಂಗಾಮಾದಲ್ಲಿ ನಾಡಿನ ಖ್ಯಾತ ಸಂಖ್ಯಾಶಾಸ್ತ್ರ ಬ್ರಹ್ಮ ಆರ್ಯವರ್ಧನ್ ಗುರೂಜಿ ಅವರು 4.22ಕ್ಕೆ RCBಯ ಭವಿಷ್ಯ ನುಡಿದಿದ್ದು, ಮುಂಬೈ ಹಾಗೂ ಬೆಂಗಳೂರು(Bangalore) ಮ್ಯಾಚ್ ನಲ್ಲಿ RCB ಗೆದ್ದೇ ಗೆಲ್ಲುತ್ತೆ ಅಂತ ಹೇಳಿದ್ದರು. ಅಂತೆಯೇ ಗುರೂಜಿ ನುಡಿದಂತೆ ನಡೆದಿದೆ. ಇದೀಗ ಆರ್ಯವರ್ಧನ್ ಗೂರೂಜಿ ಹೇಳಿದ್ದೇ ನಿಜಾವಾಯ್ತು, ನಂಬರ್ ಅಂದ್ರೆ ಆರ್ಯವರ್ಧನ್, ಆರ್ಯವರ್ಧನ್ ಅಂದ್ರೆ ನಂಬರ್ ಅನ್ನೋ ಮಾತು ಎಲ್ಲೆಡೆ ಕೇಳಿಬರುತ್ತಿದೆ.
ಅಂದಹಾಗೆ ನಿನ್ನೆ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 171 ರನ್ನ ಉತ್ತಮ ಟಾರ್ಗೆಟ್ ನ್ನ RCB ಗೆ ನೀಡಿತ್ತು. ಅದನ್ನ ಬೆನ್ನಟ್ಟಿದ RCB ಅಂತಹ ಬೃಹತ್ ಮೊತ್ತವನ್ನು ಲೀಲಾಜಾಲವಾಗಿ ಚೇಸ್ ಮಾಡಿ ಕೇವಲ 2 ವಿಕೆಟ್ ನಷ್ಟಕ್ಕೇ ಗುರಿ ಮುಟ್ಟಿ ಜಯಭೇರಿ ಬಾರಿಸಿತ್ತು. ಅಲ್ಲಿಗೆ ಗುರೂಜಿ ಆರ್ಯವರ್ಧನ್ ಮಾಡಿದ ಪರ್ಫೆಕ್ಟ್ ಪ್ರಿಡಿಕ್ಷನ್ ನೂರಕ್ಕೆ ನೂರು ಸತ್ಯವಾದಂತಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ಓಪನರ್ಸ್ ಭರ್ಜರಿ ಆಟ ಆಡಿದ್ದು, ಆರ್ಸಿಬಿ ಮೊದಲ ಮ್ಯಾಚ್ನಲ್ಲೇ ಭರ್ಜರಿ ಜಯಗಳಿಸಿದೆ.
ಸ್ಟೇಡಿಯಂನಲ್ಲಿ ‘ವಿರಾಟ’ ದರ್ಶನ ಆಗಿದೆ. ಕೊಹ್ಲಿ ಅರ್ಧ ಶತಕ ಬಾರಿಸಿದ್ದಾರೆ. ಕೊಹ್ಲಿ ಮತ್ತು ಡುಪ್ಲೆಸಿಸ್ ಪಾರ್ಟನರ್ಶಿಪ್ ರೋಚಕವಾಗಿತ್ತು. ಕೇವಲ 43 ಬಾಲ್ಗಳಿಗೆ 73 ರನ್ ಬಾರಿಸಿ ಡು ಪ್ಲೆಸಿಸ್ ಔಟ್ ಆಗಿದ್ದು, ಆರ್ಸಿಬಿ ಬಾಯ್ಸ್ 8 ವಿಕೆಟ್ಗಳ ಭರ್ಜರಿ ವಿಜಯ ಸಾಧಿಸಿದೆ. 49 ಎಸೆತಗಳಲ್ಲಿ ಬರೋಬ್ಬರಿ 82 ರನ್ಗಳ ಅಮೋಘ ಆಟ ಆಡಿದೆ. ಸ್ಟೇಡಿಯಂ ಫುಲ್ ಆರ್ಸಿಬಿ ಅಭಿಮಾನಿಗಳ ಹರ್ಷೋದ್ಘಾರ ಮೆರೆದಿದ್ಧಾರೆ. MI 20 ಓವರ್ಗೆ 171 ರನ್ಗೆ 7 ವಿಕೆಟ್ ಕಳೆದುಕೊಂಡಿತ್ತು.
ಅಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್(IPL)ನಲ್ಲಿ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವುದು ಮುಂಬೈ ಇಂಡಿಯನ್ಸ್ಗೆ ಹೊಸದೇನು ಅಲ್ಲ. ಕಳೆದ 11 ಸೀಸನ್ಗಳಲ್ಲಿ ತಾನು ಆಡಿದ ಮೊದಲ ಪಂದ್ಯದಲ್ಲಿ ಮುಂಬೈ ಸತತವಾಗಿ ಸೋಲುತ್ತಲೇ ಬಂದಿದೆ. ಐಪಿಎಲ್ 2023 ರಲ್ಲಿ ಕೂಡ ಅದು ಮುಂದುವರೆಯಿತು. ಸಂಪ್ರದಾಯ ಎಂಬಂತೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ರೋಹಿತ್ ಪಡೆ ಸೋಲುಂಡಿತು.