Condom : ಕಾಂಡೋಮ್ ಬಳಕೆಯಲ್ಲಿ ಭಾರತೀಯರೇ ಎತ್ತಿದ ಕೈ ! ಅಂಕಿ ಅಂಶ ಇಂತಿದೆ!
Condom : ಲೈಂಗಿಕ ಸಂಭೋಗದ ಸಮಯದಲ್ಲಿ ಲೈಂಗಿಕವಾಗಿ ಹರಡುವ ಸೋಂಕನ್ನು ( STI ) ಕಡಿಮೆ ಮಾಡಲು ಮತ್ತು ಮಕ್ಕಳನ್ನು ಪಡೆಯಲು ಇಚ್ಛೆ ಇಲ್ಲದ ದಂಪತಿ ಬಳಸುವ ಪೊರೆ-ಆಕಾರದ ತಡೆಗೋಡೆಯೇ ಕಾಂಡೋಮ್ (Condom ) ಸಾಧನವಾಗಿದೆ.
ಇತ್ತೀಚಿನ ದಿನಗಳಲ್ಲಿ ಮದುವೆಗೂ (marriage ) ಮುನ್ನ ಸಹಬಾಳ್ವೆ ನಡೆಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಎಲ್ಲಾ ಕಾರಣದಿಂದ ಕಾಂಡೋಮ್ ಬಳಕೆಯ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನು ಕೆಲವರು ಜೀವನದಲ್ಲಿ ಸೆಟಲ್ ಆದ ನಂತರವೇ ಮಕ್ಕಳು ಮಾಡಿಕೊಳ್ಳಲು ಬಯಸುತ್ತಾರೆ. ಈ ಎಲ್ಲಾ ಕಾರಣದಿಂದ ಕಾಂಡೋಮ್ ಬಳಕೆ ಹೆಚ್ಚಾಗಿದೆ.
ಪ್ರಸ್ತುತ ಸಮಾಜದಲ್ಲಿ ಹಲವಾರು ಬದಲಾವಣೆಯಾಗಿದ್ದು, ಆಧುನಿಕತೆಗೆ ಮಾರು ಹೋಗಿರುವ ಜನರಿಗೆ ದೈಹಿಕ ಸಂಪರ್ಕ ಎನ್ನುವುದು ಮೋಜು ಮಸ್ತಿ ಯಂತೆ ಎಂದರೆ ತಪ್ಪಾಗಲಾರದು.
ಅದಲ್ಲದೆ ಇತ್ತೀಚಿನ ಅಂಕಿಅಂಶಗಳು ದೇಶದಲ್ಲಿ ಕಾಂಡೋಮ್ ಬಳಕೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ತೋರಿಸುತ್ತವೆ. ಎಷ್ಟರಮಟ್ಟಿಗೆಂದರೆ ಕಾಂಡೋಮ್‌ಗಳನ್ನು ಹೆಚ್ಚು ಬಳಸುವ ದೇಶಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ.
ಹೌದು, ಪ್ರಮುಖ ಟ್ರೇಡಿಂಗ್ ಮತ್ತು ಹೂಡಿಕೆ ಕಂಪನಿ ಸ್ಟಾಕ್‌ಗ್ರೋ ನಡೆಸಿದ ಸಮೀಕ್ಷೆಯಲ್ಲಿ ಈ ಕುತೂಹಲಕಾರಿ ಸಂಗತಿಗಳು ಬಹಿರಂಗವಾಗಿವೆ. ಕಂಪನಿಯ ಪ್ರಕಾರ, ಭಾರತದಲ್ಲಿ ಕಾಂಡೋಮ್ ಮಾರುಕಟ್ಟೆಯ ಮೌಲ್ಯವು 2026 ರ ವೇಳೆಗೆ 134 ಮಿಲಿಯನ್ ಡಾಲರ್‌ಗಳನ್ನು (ಸುಮಾರು 1100 ಕೋಟಿ ರೂ) ತಲುಪುವ ನಿರೀಕ್ಷೆಯಿದೆ.
ಇನ್ನು ಮ್ಯಾನ್‌ಫೋರ್ಸ್ ಇಂಡಿಯಾ ಪ್ರಕಾರ ಭಾರತದಲ್ಲಿ ಕಾಂಡೋಮ್‌ಗಳ ಮಾರುಕಟ್ಟೆಯಲ್ಲಿ ಹೆಚ್ಚಿನ ಭಾಗವು ಕಾನೂನುಬಾಹಿರವಾಗಿದೆ ಎಂದು ಹೇಳಿದೆ. ಯುವಜನರಲ್ಲಿ ಕಾಂಡೋಮ್‌ಗಳು ಅತ್ಯಂತ ಜನಪ್ರಿಯ ಗರ್ಭನಿರೋಧಕ ವಿಧಾನವಾಗಿರುವುದರಿಂದ, ಇದು ಭಾರತದಲ್ಲಿ ಕಾಂಡೋಮ್ ಕಂಪನಿಗಳಿಗೆ ಭಾರಿ ಆದಾಯದ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಸ್ಟಾಕ್‌ಗ್ರೋ ಅಭಿಪ್ರಾಯ ಆಗಿದೆ .
ಅದರಲ್ಲೂ ಭಾರತದಲ್ಲಿ ಪ್ರತಿ ವರ್ಷ 2 ಬಿಲಿಯನ್ ಕಾಂಡೋಮ್‌ಗಳು ಮಾರಾಟವಾಗುತ್ತವೆ ಎಂದು ಈ ಸಮೀಕ್ಷೆ ತಿಳಿಸಿದೆ. ಇವರಲ್ಲಿ ಶೇ.8.9ರಷ್ಟು ವಿವಾಹಿತ ಮಹಿಳೆಯರು ಮತ್ತು ಶೇ.10.3ರಷ್ಟು ವಿವಾಹಿತ ಪುರುಷರು ಕಾಂಡೋಮ್ ಬಳಸುತ್ತಾರೆ. ಉಳಿದ ಪಾಲು ಅವಿವಾಹಿತ ಜೋಡಿಗಳದ್ದು ಎಂಬುದು ಪ್ರಮುಖವಾಗಿದ್ದು, ಸಮೀಕ್ಷೆಯ ಪ್ರಕಾರ ಕಳೆದ ಒಂದು ದಶಕದಲ್ಲಿ ಅವಿವಾಹಿತ ಹುಡುಗಿಯರಲ್ಲಿ ಕಾಂಡೋಮ್ ಬಳಕೆ ಆರು ಪಟ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ದೇಶದಲ್ಲಿ ಕಾಂಡೋಮ್ ಗೆ ಮಾರುಕಟ್ಟೆ ಯಲ್ಲಿ ಹೆಚ್ಚಿನ ಬೇಡಿಕೆ ಇರುವುದು ಅಂಕಿ ಅಂಶದ ಮೂಲಕ ತಿಳಿದು ಬಂದಿದೆ.