Rani Mukherjee: 8 ವರ್ಷ ತನ್ನ ಮಗಳನ್ನು ಗೌಪ್ಯವಾಗಿಟ್ಟಿದ್ದ ನಟಿ ರಾಣಿ ಮುಖರ್ಜಿ ; ಕಾರಣವೇನು?
Rani Mukherjee: ರಾಣಿ ಮುಖರ್ಜಿ (Rani Mukherjee) ತಮ್ಮ ಮೊದಲ ಚಿತ್ರ ‘ರಾಜಾ ಕಿ ಆಯೇಗಿ ಬಾರಾತ್’ ಮೂಲಕ ಪ್ರೇಕ್ಷಕರ ಮನ ಗೆದ್ದರು. ಅಂದಿನಿಂದ ಇಂದಿನವರೆಗೂ ಈ ನಟಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಚಲನಚಿತ್ರ ನಿರ್ಮಾಪಕ ಆದಿತ್ಯ ಚೋಪ್ರಾ (Adithya Chopra) ಜೊತೆ ಮದುವೆಯಾದ ನಂತರ ನಟಿ ಸ್ವಲ್ಪ ಮಟ್ಟಿಗೆ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಸದ್ಯ ಬಾಲಿವುಡ್ (Bollywood) ನಟಿ ರಾಣಿ ಮುಖರ್ಜಿ ಹಲವು ವರ್ಷಗಳ ನಂತರ ‘ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ’ (Mrs Chatterjee Vs Norway) ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಮರಳಿದ್ದಾರೆ. ತಮ್ಮ ಅಭಿನಯದಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಜನರು ಅವರ ಅಭಿನಯದ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಣಿ ಮುಖರ್ಜಿ ಮತ್ತು ಆದಿತ್ಯ ಚೋಪ್ರಾ ಅವರಿಗೆ ಒಬ್ಬಳು ಮುದ್ದಾದ ಮಗಳಿದ್ದಾಳೆ. ಅವಳ ಹೆಸರು ಆದಿರಾ (aadira) ಆದರೆ, ರಾಣಿ ಮುಖರ್ಜಿ ತಮ್ಮ ಮಗಳನ್ನು 8 ವರ್ಷಗಳ ಕಾಲ ಗೌಪ್ಯವಾಗಿಟ್ಟಿದ್ದರು. ಯಾಕೆ ಗೊತ್ತಾ? ಈ ಬಗ್ಗೆ ರಾಣಿ ಮುಖರ್ಜಿ ಇತ್ತೀಚೆಗೆ ಕರೀನಾ ಕಪೂರ್ ಅವರ ವಾಟ್ ವುಮೆನ್ ವಾಂಟ್ ಶೋನಲ್ಲಿ ಹೇಳಿಕೊಂಡಿದ್ದಾರೆ.
ಕರೀನಾ ಕಪೂರ್ (kareena kapoor) ‘ವಾಟ್ ವುಮನ್ ವಾಂಟ್’ (what women want) ಎಂಬ ಶೋ ನಡೆಸುತ್ತಿದ್ದಾರೆ. ಅವರು ತಮ್ಮ ಶೋನಲ್ಲಿ ವಿವಿಧ ತಾರೆಯರನ್ನು ಕರೆಸುತ್ತಾರೆ ಮತ್ತು ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಾರೆ. ರಾಣಿ ಮುಖರ್ಜಿ ವಾಟ್ ವುಮೆನ್ ವಾಂಟ್ ಶೋಗೆ ಆಗಮಿಸಿದ್ದು, ಈ ವೇಳೆ ನಟಿ ವೈಯಕ್ತಿಕ ಜೀವನದ ಬಗ್ಗೆ ಹಲವು ವಿಚಾರ ಹಂಚಿಕೊಂಡಿದ್ದಾರೆ. ರಾಣಿ ಮುಖರ್ಜಿ ತಮ್ಮ ಮಗಳನ್ನು ಕ್ಯಾಮರಾಗಳಿಂದ ಗೌಪ್ಯವಾಗಿಟ್ಟಿದ್ದು, ಇದಕ್ಕೆ ಕಾರಣ ತಿಳಿಸಿದ್ದಾರೆ.
ಕರೀನಾ ಕಪೂರ್, ಕ್ಯಾಮರಾಗಳಿಂದ ಮಗಳನ್ನು ಗೌಪ್ಯವಾಗಿಡಲು ಕಾರಣ ಕೇಳಿದ್ದು, ರಾಣಿ ಮುಖರ್ಜಿ ಅವರು ತಮ್ಮ ಮಗಳು ಸಾಮಾನ್ಯ ಬಾಲ್ಯವನ್ನು ಹೊಂದಬೇಕೆಂದು ಬಯಸಿದ್ದು, ಈ ಕಾರಣದಿಂದ ಮಗಳ ಮೇಲೆ ಯಾವ ಕಣ್ಣು ಬೀಳದಂತೆ ನೋಡಿದ್ದರು ಎಂದಿದ್ದಾರೆ.
“ಆದಿರಾ ಶಾಲೆಯಲ್ಲಿ ಸಾಮಾನ್ಯ ಪಾಲನೆಯನ್ನು ಹೊಂದಲು ಬಹಳ ಮುಖ್ಯವಾಗಿತ್ತು, ಏಕೆಂದರೆ ನೀವು ಪ್ರಸಿದ್ಧ ಪೋಷಕರ ಮಗುವಾಗಿದ್ದಾಗ ಸಾಮಾನ್ಯವಾಗಿ ಮಗುವಿನ ಮೇಲೆ ಹೆಚ್ಚು ಗಮನ ಹರಿಸುತ್ತಾರೆ. ಆದಿರಾ ತಾನು ಯಾರ ಮಗಳೆಂಬ ಕಾರಣಕ್ಕಾಗಿ ಅವಳು ವಿಶೇಷವಲ್ಲ ಎಂದು ಅರಿತುಕೊಳ್ಳುವುದು ನನಗೆ ಮುಖ್ಯವಾಗಿತ್ತು. ತನ್ನನ್ನು ತಾನೇ ಜೀವನದಲ್ಲಿ ವಿಶೇಷವಾಗಿಸಿಕೊಳ್ಳಬೇಕು” ಎಂದರು.