ಇದು ಖಂಡಿತವಾಗಿಯೂ ಪೈಂಟಿಂಗ್ ಅಲ್ಲ, ಅದೇನು ಅಂತ ತಿಳಿದ್ರೆ ನೀವು ಶಾಕ್ ಆಗ್ತೀರಾ !
Painting : ಈ ಚಿತ್ರ ನಿಮಗೆ ಇಷ್ಟ ಆಗುತ್ತೆ. ಯಾರಪ್ಪಾ ಇಂತಹಾ ಫೋಟೋ ತೆಗೆದವರು ಅಂತ ನಿಮ್ಮಲ್ಲಿ ಪ್ರಶ್ನೆ ಮೂಡಬಹುದು. ಇದು ಫೋಟೋ ಅಲ್ಲ ಗುರೂ, ಸರ್ಯಾಗಿ ನೋಡು, ಅದು ಪೈಂಟಿಂಗ್ (Painting) ಇರ್ಬೇಕು ಅನ್ನೋ ಸಂಶಯ ಕೂಡಾ ನಿಮ್ಮನ್ನು ಕಾಡಬಹುದು. ಆದ್ರೆ ಇದು ಈ ಎರಡೂ ಅಲ್ಲ ಅಂತ ಯಾರಾದ್ರೂ ಅಂದ್ರೆ ತಮಾಷೆ ಮಾಡ್ತಿದ್ದಾರೆ ಅಂತ ತಕ್ಷಣ ಹೇಳ್ಬಿಡ್ತೀರ. ಆದ್ರೆ ನಿಮ್ಮ ಊಹೆ ತಪ್ಪಾಗತ್ತೆ : ಅದು ಎರಡೂ ಅಲ್ಲ, ಹಾಗಾದ್ರೆ ಮತ್ತೇನು ?!
ಇದನ್ನು ರಂಗೋಲಿ ಎಂದರೆ ನೀವು ನಂಬುತ್ತೀರಾ? ಹೌದು, ಈ ಶ್ರೀರಾಮ ಮತ್ತು ಕೌಸಲ್ಯೆಯರ ರಂಗೋಲಿಯಾಗಿದ್ದು ಇದನ್ನು ಖ್ಯಾತ ರಂಗೋಲಿಕಾರ ಅಕ್ಷಯ್ ಜಾಲಿಹಾಳ್ ರಚಿಸಿದ್ದಾರೆ.
ಅಕ್ಷಯ್ ಜಾಲಿಹಾಳ್ ಅವರ ಪಳಗಿದ ಬೆರಳುಗಳಲ್ಲಿ ಬಣ್ಣಬಣ್ಣದ ರಂಗೋಲಿ ಪುಡಿ ನೆಲಕ್ಕೆ ಉದುರಿ ಈ ಚಿತ್ರ ಜೀವ ಪಡೆದುಕೊಂಡಿದೆ.
ಈ ಚಿತ್ರದಲ್ಲಿ ಬಲರಾಮ ಹಾಗೂ ತಾಯಿ ಕೌಶಲ್ಯದೇವಿಯ ಪ್ರೀತಿ ವಾತ್ಸಲ್ಯಗಳು ಅಭಿವ್ಯಕ್ತಗೊಂಡಿದೆ. ಇದಕ್ಕಾಗಿ ರಂಗೋಲಿಕಾರರು 45ಕ್ಕೂ ಅಧಿಕ ಬಣ್ಣಗಳನ್ನು ಬಳಸಿದ್ದು ಸತತ 13 ಗಂಟೆಗಳ ಕಾಲ ಬೆವರು ಹರಿಸದಂತೆ ಪರಿಶ್ರಮ ಪಟ್ಟಿದ್ದಾರೆ. ರಂಗೋಲಿಗೆ ಒಂದು ಹನಿ ಬೆವರು ಬಿದ್ದರೂ ಅಸ್ತವ್ಯಸ್ತ ಆಗೋ ಅಪಾಯ ಎದುರಿಗಿಟ್ಟುಕೊಂಡು ಬೆರಳ ಕುಂಚದಲ್ಲಿ ದೃಶ್ಯ ಕಾವ್ಯ ಎಳೆಯಲಾಗಿದೆ.
ಜಿಗಣಿಯಲ್ಲಿ ಆಯೋಜನೆ ರಾಮಾಯಣ ಪಾರಾಯಣ ನಾಟಕ ಹರಿಕಥೆ ಕಾರ್ಯಕ್ರಮದ ಭಾಗವಾಗಿ ಈ ಚಿತ್ರವನ್ನು ಬಿಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಕ್ಷಯ ಜಾಲಿಹಾಳ್ ರಂಗೋಲಿ ಚಿತ್ರ ಪ್ರತಿಭೆ ಎಲ್ಲರ ಗಮನ ಸೆಳೆದಿದೆ. ಅಕ್ಷಯ್ ಜಾಲಿಹಾಳ್ ಆನೇಕಲ್ಲಿನ ಕಿತ್ತಗಾನ ಹಳ್ಳಿಯವರಾಗಿದ್ದು ಬೆಂಗಳೂರಿನ ಹಲವೆಡೆ ರಂಗೋಲಿಯ ಚಿತ್ತಾರ ಹರಡುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ.