Rishab Shetty: ರಾಜಕೀಯಕ್ಕೆ ರಿಷಬ್ ಶೆಟ್ಟಿ ಎಂಟ್ರಿ? ನನನ್ನು ಈ ಪಕ್ಷಕ್ಕೆ ಸೇರಿಸಿದ್ದಾರೆಂದು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಡಿವೈನ್‌ ಸ್ಟಾರ್!!

Share the Article

Rishab Shetty politics : ಭಾರತದಾದ್ಯಂತ ಸದ್ದು ಮಾಡಿದ ಕಾಂತಾರ (Kantara) ಸೂಪರ್ ಹಿಟ್ ಸಿನಿಮಾ ಆದ ಬಳಿಕ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಭಾರತೀಯ ಸಿನಿ ರಂಗಕ್ಕೆ ಪರಿಚಿತರಾಗುವುದಲ್ಲದೆ, ಸಿನಿ ಪ್ರೇಕ್ಷಕರ ಮನೆ ಮಾತಾಗಿದ್ದಾರೆ. ಜೊತೆಗೆ ಬಹುವಾಗಿ ಚರ್ಚೆಯಲ್ಲಿದ್ದಾರೆ. ಅವರ ಪ್ರತಿ ಹೇಳಿಕೆ, ಹಾಕುವ ಬಟ್ಟೆಗಳನ್ನೂ ಗಮನಿಸಿ ಅದರಲ್ಲೊಂದು ‘ಸ್ಟೇಟ್​ಮೆಂಟ್’ ಹುಡುಕಲಾಗುತ್ತಿದೆ. ಇದೆಲ್ಲದರ ನಡುವೆ ಇಂದು ರಿಷಬ್ ಶೆಟ್ಟಿ ರಾಜಕೀಯ (Rishab Shetty politics) ಪ್ರವೇಶ ಮಾಡ್ತಾರೆ ಅನ್ನೋ ಸುದ್ದಿ ಇದ್ದಕ್ಕಿದ್ದಂತೆ ಹುಟ್ಟಿಕೊಂಡು, ರಿಷಬ್ ಕೂಡ ಹಠಾತ್ತನೇ ತಮ್ಮ ರಾಜಕೀಯ (Politics) ಪ್ರವೇಶದ ಬಗ್ಗೆ ಟ್ವೀಟ್ ಒಂದನ್ನು ಮಾಡಿದ್ದಾರೆ.

ಹೌದು, ಪತ್ರಕರ್ತೆಯೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ರಿಷಬ್ ಅವರ ಅದೇ ಚಿತ್ರವನ್ನು ಹಂಚಿಕೊಂಡು, ರಿಷಬ್ ಶೆಟ್ಟಿ ರಾಜಕೀಯ ಪ್ರವೇಶಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಪತ್ರಕರ್ತೆಯ ಟ್ವೀಟ್​ಗೆ ತಮಾಷೆಯಾಗಿಯೇ ಪ್ರತಿಕ್ರಿಯಿಸಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ, ‘ಸುಮ್ಮನೆ ಇರಿ ಮಾರಾರ್ಯೆ, ಸುಳ್ಳು ಸುದ್ದಿ ಇದು, ಏಪ್ರಿಲ್ 1 ಎಂದು ಸ್ಪಷ್ಟವಾಗಿ ಹೇಳಿ. ಮೊದಲೇ ಕೆಲವರು ನನ್ನನ್ನು ಒಂದು ಪಕ್ಷಕ್ಕೆ ಸೇರಿಸಿಬಿಟ್ಟಿದ್ದಾರೆ. ನಾನು ರಾಜಕೀಯಕ್ಕೆ ಎಂದೂ ಹೋಗುವುದಿಲ್ಲ’ ಎಂದಿದ್ದಾರೆ.

ಅಂದಹಾಗೆ ಕೆಲವು ದಿನಗಳ ಹಿಂದೆ ರಿಷಬ್ ಶೆಟ್ಟಿ, ವಿಶ್ವಸಂಸ್ಥೆಗೆ ಹೋಗಿದ್ದಾಗ ಅಲ್ಲಿ ತೆಗೆಸಿಕೊಂಡಿದ್ದ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ರಿಷಬ್ ಅವರು ಮೋದಿ ಜಾಕೆಟ್ ಮಾದರಿಯ ನೀಲಿ ಬಣ್ಣದ ಜಾಕೆಟ್ ಧರಿಸಿ ಬಿಳಿ ಬಣ್ಣದ ಕುರ್ತಾ ಧರಿಸಿ ಥೇಟ್ ರಾಜಕಾರಣಿಯಂತೆ ಕಾಣುತ್ತಿದ್ದರು. ಪತ್ರಕರ್ತೆ ಕೂಡ ರಿಷಬ್ ಅವರ ಅದೇ ಚಿತ್ರವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡು ಏಪ್ರಿಲ್ ಪೂಲ್ ಮಾಡಿದ್ದಾರೆ. ರಿಷಬ್ ಶೆಟ್ಟರ ಈ ಟ್ವೀಟ್​ಗೆ ವ್ಯಕ್ತಿಯೊಬ್ಬ ಪ್ರತಿಕ್ರಿಯಿಸಿ ‘ಬನ್ನಿ ಶೆಟ್ರೆ, ನನ್ನ ಫುಲ್ ಬೆಂಬಲ ನಿಮಗೆ’ ಎಂದಿದ್ದಾನೆ. ಆ ವ್ಯಕ್ತಿಗೂ ಪ್ರತಿಕ್ರಿಯೆ ನೀಡಿರುವ ರಿಷಬ್ ಶೆಟ್ಟಿ, ‘ಬೇಡ ದೇವ್ರು ನನ್ನ ಸಿನಿಮಾಕ್ಕೆ ನಿಮ್ಮ ಬೆಂಬಲ ಇದ್ರೆ ಸಾಕು’ ಎಂದಿದ್ದಾರೆ.

ಅಲ್ಲದೆ ರಿಷಬ್ ಶೆಟ್ಟಿಯವರ ರಾಜಕೀಯದ ಪ್ರವೇಶದ ಬಗ್ಗೆ ಅಥವಾ ರಾಜಕೀಯ ಪಕ್ಷವೊಂದಕ್ಕೆ ಬೆಂಬಲ ನೀಡುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಲ್ಲಲ್ಲಿ ಮಾತುಗಳು ಕೇಳಿ ಬರುತ್ತಿದ್ದವು. ಇದೀಗ ಸ್ವತಃ ರಿಷಬ್ ಶೆಟ್ಟಿಯವರು ಎಲ್ಲ ಊಹಾಪೋಹಗಳಿಗೆ ಟ್ವೀಟ್​ ಮೂಲಕ ತೆರೆ ಎಳೆದಿದ್ದಾರೆ. ರಿಷಬ್ ಶೆಟ್ಟಿ ಸಂಪೂರ್ಣವಾಗಿ ಸಿನಿಮಾಗಳ ಮೇಲೆ ಮಾತ್ರವೇ ಗಮನ ಕೇಂದ್ರೀಕರಿಸಲು ನಿರ್ಧರಿಸಿದಂತಿದೆ. ಇದೇ ನಿಲವು ಅಚಲವಾಗಿ ಉಳಿಯುತ್ತದೆಯೇ? ಕಾದು ನೋಡಬೇಕಿದೆ.

https://twitter.com/saraswathi1717/status/1642073851113902081?t=19EAfZgPV906Tz2eCz_6Xw&s=08

Leave A Reply