Remove Stains From Steel Utensils: ಸ್ಟೀಲ್ ಪಾತ್ರೆಗಳು ಫಳಫಳ ಹೊಳೆಯಲು ಈ ಟಿಪ್ಸ್ ಫಾಲೋ ಮಾಡಿ ಸಾಕು!!
Remove Stains From Steel Utensils : ಇತ್ತೀಚೆಗೆ ಮಣ್ಣಿನ ಪಾತ್ರೆ ಬಳಕೆ ವಿರಳವಾಗಿ ಸ್ಟೀಲ್ ಪಾತ್ರೆಗಳ ಬಳಕೆ ಹೆಚ್ಚಳವಾಗಿದೆ. ಪಳಪಳನೆ ಹೊಳೆಯುವ ಸ್ಟೀಲ್ ಪಾತ್ರೆಗಳ ಅಂದಕ್ಕೆ ನಾವು ಮಾರು ಹೋಗುತ್ತೇವೆ. ಆದರೆ ಮನೆಗೆ ತಂದು ಈ ಪಾತ್ರೆಯಲ್ಲಿ ಅಡುಗೆ ಮಾಡಲು ಶುರು ಮಾಡಿದರೆ, ಇದರ ಹೊಳಪು ನಿಧಾನಕ್ಕೆ (Remove Stains From Steel Utensils )ಕಡಿಮೆ ಆಗುತ್ತಾ ಬರುತ್ತದೆ. ಯಾಕೆ ಈ ರೀತಿ ಆಗುತ್ತದೆ ಎಂದು ಚಿಂತೆ ಆಗಿರಬಹುದು.
ಇನ್ನು ಸ್ಟೀಲ್ ಪಾತ್ರೆಗಳನ್ನು ಸ್ವಚ್ಛ ಮಾಡುವುದು ಕಷ್ಟದ ಕೆಲಸ ಎಂದು ನಿಮ್ಮ ಯೋಚನೆ ಆಗಿದ್ದರೆ, ಅದು ತಪ್ಪು. ಸದ್ಯ ಮನೆಯಲ್ಲಿರುವ ಸ್ಟೀಲ್ ಪಾತ್ರೆಯ ಹೊಳಪನ್ನು ಕಾಯ್ದುಕೊಳ್ಳುವ ಮತ್ತು ಈ ಪಾತ್ರೆಗಳಿಗೆ ಅಂಟಿಕೊಂಡಿರುವ ಕಲೆಗಳನ್ನು ನಿವಾರಣೆ (Remove Stains From Steel Utensils)ಮಾಡಲು ಇಲ್ಲಿ ಸುಲಭ ಉಪಾಯ ತಿಳಿಸಲಾಗಿದೆ.
ಅಡುಗೆ ಸೋಡಾ ಬಳಸಿ :
ಕಠಿಣ ಕಲೆಗಳನ್ನು ತೊಡೆದುಹಾಕಲು ಅಡುಗೆ ಸೋಡಾ ತುಂಬಾನೇ ಸಹಾಯಕ್ಕೆ ಬರುತ್ತದೆ. ನೀವು ಮಾಡಬೇಕಾಗಿ ರುವುದು ಇಷ್ಟೇ, ಕಲೆಯಾಗಿರುವ ಸ್ಟೀಲ್ ಪಾತ್ರೆಯಲ್ಲಿ ಸ್ವಲ್ಪ ನೀರು ತುಂಬಿಸಿ ಇದಕ್ಕೆ ಒಂದು ಟೇಬಲ್ ಚಮಚದಷ್ಟು ಅಡುಗೆ ಸೋಡಾ ವನ್ನು ಬೆರೆಸಿ, ಚೆನ್ನಾಗಿ ಕುದಿಯಲು ಬಿಡಿ. ಬಳಿಕ ಗ್ಯಾಸ್ ಒಲೆ ಆಫ್ ಮಾಡಿ ನೀರನ್ನು ತಣ್ಣಗಾಗಲು ಬಿಡಿ.
ನಂತರ ಹೆಚ್ಚುವರಿ ಅಡುಗೆ ಸೋಡಾವನ್ನು ಬಳಸಿ, ಕಲೆಗಳ ಮೇಲೆ ಉಜ್ಜಿ. ಹೀಗೆ ಮಾಡುವು ದರಿಂದ ಕಲೆಗಳು ಮಾಯವಾಗಿ, ಪಾತ್ರೆಯ ಹೊಳಪು ಕೂಡ ಹೆಚ್ಚಾಗುತ್ತದೆ.
ಸಾಮಾನ್ಯವಾಗಿ ನಿರಂತರ ಅಡುಗೆಗೆ ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳನ್ನು ಬಳಸುವುದರಿಂದ, ತುಕ್ಕು ಹಿಡಿದ ರೀತಿಯ ಕಂದು ಬಣ್ಣದ ಕಲೆಗಳು, ಇಂತಹ ಪಾತ್ರೆಗಳಲ್ಲಿ ಕಂಡು ಬರಲು ಶುರುವಾಗುತ್ತದೆ. ಆದರೆ ಸಾಧಾರಣ ಡಿಶ್ ಪೌಡರ್ ಬಳಸಿ, ಇಂತಹ ಕಲೆಗಳನ್ನು ತೆಗೆಯಲು ಸಾಧ್ಯವಿಲ್ಲ. ಹಾಗಾಗಿ ಈ ಕಲೆಗಳನ್ನು ಹೋಗಲಾ ಡಿಸಲು, ಒಂದು ಬಕೆಟ್ ಉಗುರು ಬೆಚ್ಚಗಿನ ನೀರಿನಲ್ಲಿ ಒಂದೆರಡು ಟೇಬಲ್ ಚಮಚ ಬೇಕಿಂಗ್ ಸೋಡಾ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಆ ಬಳಿಕ, ಈ ನೀರಿನಲ್ಲಿ ಪಾತ್ರೆಯನ್ನು ನೆನೆಹಾಕಿ. ಕೆಲವು ಗಂಟೆಗಳ ಕಾಲ ಹಾಗೆ ಬಿಡಿ. ಹೀಗೆ ಮಾಡುವುದರಿಂದ ಪಾತ್ರೆಗಳಲ್ಲಿ ಅಂಟಿಕೊಂಡಿರುವ ಕಲೆಗಳು ಕ್ರಮೇಣವಾಗಿ ಮಾಯವಾಗಿ ಬಿಡುತ್ತದೆ.
ನಿಂಬೆ ರಸ ಬಳಕೆ :
ಪಾತ್ರೆಯಲ್ಲಿ ಅಂಟಿರುವ ಕಠಿಣ ಕಲೆಗಳನ್ನು ತೆಗೆಯಲು ಕೂಡ ನಿಂಬೆ ರಸ ತುಂಬಾನೇ ಉಪಯೋಗಕ್ಕೆ ಬರುತ್ತದೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಸಿಗುವ, ಹೆಚ್ಚಿನ ಡಿಶ್ ವಾಶ್ ಸೋಪ್‌ಗಳಲ್ಲಿ ನಿಂಬೆಯನ್ನು ಬಳಸಲಾಗುತ್ತದೆ. ನಿಂಬೆಯ ಸಿಟ್ರಸ್ ಅಂಶವು ಕಠಿಣ ಕಲೆ ಹಾಗೂ ಜಿಡ್ಡನ್ನು ತೆಗೆಯಲು ನೆರವಾಗುತ್ತದೆ.
ಮುಖ್ಯವಾಗಿ ಸುಟ್ಟ ಕಲೆಯ ಭಾಗಕ್ಕೆ ನಿಂಬೆ ರಸ ಹಾಕಿ ಮತ್ತು ಹಾಗೆ ಸ್ವಲ್ಪ ಸಮಯ ಬಿಟ್ಟುಬಿಡಿ. ಈ ಹಣ್ಣಿನ ರಸದಲ್ಲಿ ಕಂಡು ಬರುವ ಆಮ್ಲೀಯ ಗುಣವು, ಪಾತ್ರೆಯಲ್ಲಿ ಅಂಟಿಕೊಂಡಿರುವ ಕಲೆಯನ್ನು ಬೇಗನೆ ಎದ್ದು ಬರುವಂತೆ ಮಾಡುವುದು.
ವೈನ್ :
ನೀವು ವೈನ್ ಪ್ರಿಯರಾಗಿದ್ದರೆ, ನಿಮ್ಮ ಮನೆಯಲ್ಲಿ ಉತ್ತಮವಾದ ಹಳೆಯ ವೈನ್ ಬಾಟಲಿಯನ್ನು ನೀವು ಹೊಂದಿರುತ್ತೀರಿ. ಅದರಲ್ಲಿ ಸ್ವಲ್ಪವನ್ನು ಸುಟ್ಟ ಬಾಣಲೆಯ ಮೇಲೆ ಸುರಿಯಿರಿ, ಅದನ್ನು ಕೆಲವು ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ ಮತ್ತು ನೀವು ಅವುಗಳನ್ನು ತೊಳೆದರೆ ಎಷ್ಟು ಸುಲಭವಾಗಿ ಕಲೆಗಳು ಹೊರಬರುತ್ತವೆ ಎಂದು ನೀವು ಆಶ್ಚರ್ಯ ಪಡುತ್ತೀರಿ.
ವಿನೆಗರ್ ಮತ್ತು ಬೇಕಿಂಗ್ ಸೋಡಾ :
ವಿನೆಗರ್ ಮತ್ತು ಬೇಕಿಂಗ್ ಸೋಡಾ ಸಂಯೋಜನೆ ನಿಮಗೆ ಯಾವುದೇ ಕಲೆ ಹೋಗಲಾಡಿಸಲು ಸಹ ಸಹಾಯ ಮಾಡುತ್ತದೆ. ಇದನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ, ಅದರಲ್ಲಿ ನೀವು ಪಾತ್ರೆಗಳನ್ನು ತೊಳೆಯಬಹುದು. ವಿನೆಗರ್ ಮಾತ್ರ ಬಳಕೆ ಮಾಡುವುದು ಸಹ ಗಟ್ಟಿಯಾದ ಕಲೆ ತೆಗೆಯಲು ಉತ್ತಮ ಪರಿಹಾರ ಎನ್ನಬಹುದು. ಕಾಲು ಭಾಗ ವಿನೆಗರ್ ಮತ್ತು ಮುಕ್ಕಾಲು ಭಾಗ ನೀರು ಎರಡನ್ನು ಮಿಶ್ರಣ ಮಾಡಿಕೊಂಡು ಪಾತ್ರೆಯನ್ನು ಅದರಲ್ಲಿ ಸ್ವಲ್ಪ ಹೊತ್ತು ಹಾಗೆ ಬಿಡಿ. ನಂತರ ಅದನ್ನು ಲಿಕ್ವಿಡ್ ಅತವಾ ಸೋಪು ಬಳಸಿ ತೊಳೆಯಿರಿ ಸಾಕು
ಆಕ್ಸಾಲಿಕ್ ಆಸಿಡ್ :
ಸ್ಟೀಲ್ ಪಾತ್ರೆಗಳನ್ನು ಸ್ವಚ್ಛ ಮಾಡಲು ರಾಸಾಯನಿಕ ಅಂಶ ಹೆಚ್ಚಾಗಿರುವ ಆಕ್ಸಾಲಿಕ್ ಆಸಿಡ್ ಅನ್ನು ಕೂಡ ಬಳಸಬಹುದು.
ಇದರಲ್ಲಿ ಕಂಡು ಬರುವ ಪ್ರಬಲ ರಾಸಾಯನಿಕ ಆಮ್ಲಗಳು ಸ್ಟೀಲ್ ಪಾತ್ರೆಗಳಲ್ಲಿ ಅಂಟಿಕೊಂಡಿರುವ ಕಲೆಗಳನ್ನು ತಾತ್ಕಾಲಿಕವಾಗಿ ತೆಗೆದು ಹಾಕುತ್ತದೆ. ಆದರೆ ಇದನ್ನು ಪದೇ ಪದೇ ಬಳಸಲು ಹೋಗಬೇಡಿ. ಯಾಕೆಂದ್ರೆ ಸ್ಟೀಲ್ ಪಾತ್ರೆಗಳು ಹಾಳಾಗುತ್ತದೆ.
ಒಟ್ಟಿನಲ್ಲಿ ಪಾತ್ರೆಯಲ್ಲಿರುವ ಕಲೆಗಳನ್ನು ಸುಲಭವಾಗಿ ತೆಗೆಯಲು ಸರಳ ಮಾರ್ಗ ಏನೆಂದ್ರೆ ಕಲೆ ಕಂಡುಬರುವ ಪಾತ್ರೆಯಲ್ಲಿ ಶುದ್ಧವಾದ ನೀರು ತುಂಬಿಕೊಂಡು, ಇದನ್ನು ಸರಿಯಾಗಿ ಕುದಿಯಲು ಬಿಡಿ.
ಒಮ್ಮೆ ಈ ನೀರು ಸರಿಯಾಗಿ ಕುದಿಬಂದ ಬಳಿಕ, ಗ್ಯಾಸ್ ಸ್ಟೌವ್ ಆಫ್ ಮಾಡಿ, ಈ ಕುದಿ ಬಂದಿರುವ ನೀರನ್ನು ತಣ್ಣಗೆ ಆಗಲು ಬಿಡಿ. ಆ ಬಳಿಕ ಹೊರಗೆ ಚೆಲ್ಲಿ. ಇಷ್ಟೆಲ್ಲಾ ಆದ ಬಳಿಕ ಪಾತ್ರೆಯನ್ನು ಸೋಪಿನ ನೀರಿನಲ್ಲಿ ಚೆನ್ನಾಗಿ ಸ್ವಚ್ಛಗೊಳಿಸಿ. ಇಲ್ಲಿ ಪಾತ್ರೆಗೆ ಹಾಕಿ ಕುದಿಸಿದ ಬಿಸಿನೀರು, ಸ್ಟೀಲ್ ಪಾತ್ರೆಗಳಲ್ಲಿ ಅಂಟಿರುವ ಗಾಢವಾದ ಕಲೆಗಳನ್ನು, ಬೇಗನೇ ಲೂಸ್ ಆಗುವಂತೆ ಮಾಡುತ್ತದೆ. ಇದರಿಂದಾಗಿ ಸೋಪ್ ಹಾಕಿದ ಕೂಡಲೇ ಕೆಲಗಳು ಬಹಳ ಬೇಗನೇ ಹೋಗುತ್ತದೆ.
ಈ ರೀತಿಯಾಗಿ ಪಾತ್ರೆಗಳಿಗೆ ಹಿಡಿದ ಗಾಢವಾದ ತುಕ್ಕನ್ನು ತೆಗೆದು ಹಾಕಬಹುದು.
ಇದನ್ನೂ ಓದಿ: Electric Cooker : ಮಹಿಳೆಯರೇ ಗ್ಯಾಸ್ ಚಿಂತೆ ಬಿಡಿ! ಬಂತು ನೋಡಿ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಕುಕ್ಕರ್