Male Infertility : ಎಚ್ಚರ!! ಪುರುಷರಲ್ಲಿ ಬಂಜೆತನ ಸಮಸ್ಯೆ ಇದೇ ಕಾರಣಕ್ಕೆ ಕಾಣಿಸಿಕೊಳ್ಳುವುದು!
Male Infertility : ಬಂಜೆತನ (Infertility) ಸಂತಾನೋತ್ಪತ್ತಿ ವ್ಯವಸ್ಥೆಯ ಒಂದು ಸಮಸ್ಯೆ. ಇದು ಮಹಿಳೆಯನ್ನು ಗರ್ಭಿಣಿಯಾಗದಂತೆ ತಡೆಯುತ್ತದೆ. ಆದರೆ ದಂಪತಿಗಳಲ್ಲಿ ಒಬ್ಬರು ಬಂಜೆತನದ ಸಮಸ್ಯೆಗಳನ್ನು ಹೊಂದಿದ್ದಾರೆ. ಈ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಪುರುಷ ಬಂಜೆತನವು ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದು ನಿಮಗೆ ತಿಳಿದಿದೆಯೇ. ಹೌದು, ಸಾಮಾನ್ಯವಾಗಿ ಬಂಜೆತನ ಸಮಸ್ಯೆ ಮಹಿಳೆಯರಿಗೆ ಮಾತ್ರವೇ ಸಂಬಂಧಿಸಿದ್ದು ಎಂಬುದಾಗಿ ಭಾವಿಸುತ್ತೇವೆ. ಆದರೆ ಪುರುಷರು ಸಹ ಬಂಜೆತನಕ್ಕೆ ಒಳಗಾಗಬಹುದು. ಹೀಗಾಗಿ ಬಂಜೆತನವು ಮಹಿಳೆಯರಿಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ ಎಂಬುದು ಸತ್ಯ. ಕೆಲವೊಂದು ಅನಾರೋಗ್ಯಕಾರಿ ಅಭ್ಯಾಸಗಳಿಂದ ಕೂಡ ಪುರುಷರಲ್ಲಿ ಬಂಜೆತನ (Male Infertility) ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.
ಪುರುಷರಲ್ಲಿ ಬಂಜೆತನಕ್ಕೆ ಮುಖ್ಯ ಕಾರಣ ಏನಿರಬಹುದು ಎಂಬುದನ್ನ ಇಲ್ಲಿ ತಿಳಿಸಲಾಗಿದೆ :
ಮದ್ಯಪಾನ :
ಮದ್ಯಪಾನ (alcohol ) ಮತ್ತು ಧೂಮಪಾನ (smoking ) ಆರೋಗ್ಯಕ್ಕೆ ಹಾನಿಕರ. ಆದರೆ ಇದು ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ದೊಡ್ಡ ಕಾರಣ ಎಂದು ಹೇಳಲಾಗುತ್ತದೆ.
ಟೀ ಕಾಫಿ ಅತಿಯಾದ ಬಳಕೆ :
ಬಹಳಷ್ಟು ಟೀ ಅಥವಾ ಕಾಫಿ ಕುಡಿಯುವ ಪುರುಷರು ಕಳಪೆ ಫಲವತ್ತತೆಯನ್ನು ಹೊಂದಿರುತ್ತಾರೆ. ಹೀಗಾಗಿ ಸಾಧ್ಯವಾದಷ್ಟು ಟೀ, ಕಾಫಿ ಸೇವನೆಯನ್ನು ಕಡಿಮೆ ಮಾಡಲು ಸಲಹೆ ನೀಡಲಾಗುತ್ತದೆ.
ಸಕ್ಕರೆಯುಕ್ತ ಪಾನೀಯ:
ಪುರುಷರು ಕೃತಕ ಸಕ್ಕರೆಯಾಂಶ ಇರುವ ಪಾನೀಯ ವನ್ನು ಪ್ರತಿ ದಿನ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಅವರಿಗೆ ದಿನಾ ಹೋದ ಹಾಗೆ ಸಂತಾನೋತ್ಪತ್ತಿ ಹೆಚ್ಚಿಸುವ ಹಾರ್ಮೋನ್ ಗಳ ಮಟ್ಟ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ಅಧ್ಯಾಯನಗಳು ತಮ್ಮ ವರದಿ ಯಲ್ಲಿ ತಿಳಿಸಿವೆ. ಅದರಲ್ಲೂ ದೇಹದ ತೂಕ ಹೆಚ್ಚಾಗಿದ್ದು ಬೊಜ್ಜಿನ ಸಮಸ್ಯೆ ಇರುವವರು, ಇಂತಹ ಪಾನೀಯವನ್ನು ಸೇವನೆ ಮಾಡಿದರೆ, ಈ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಮೊಬೈಲ್ :
ಮುಖ್ಯವಾಗಿ ಅನೇಕ ಪುರುಷರು ತಮ್ಮ ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಟ್ಟುಕೊಳ್ಳುತ್ತಾರೆ. ಆದರೆ, ಇದರಿಂದ ಹೊರಸೂಸುವ ವಿಕಿರಣವು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯಲ್ಲಿ ಇಳಿಕೆಗೆ ಕಾರಣವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಲ್ಯಾಪ್ ಟಾಪ್ ತೊಡೆಯ ಮೇಲಿಟ್ಟುಕೊಳ್ಳುವುದು :
ಲ್ಯಾಪ್ ಟಾಪ್‌ನ್ನು ತೊಡೆಯ ಮೇಲಿಟ್ಟು ಕೆಲಸ ಮಾಡು ವುದರಿಂದ ಕೆಲವೊಂದು ಆರೋಗ್ಯ ಸಮಸ್ಯೆಗಳು ಕಂಡು ಬರುವುದು. ಅದರಲ್ಲಿ ಬಂಜೆತನದ ಸಮಸ್ಯೆ ಕೂಡ ಒಂದು. ಲ್ಯಾಪ್ ಟಾಪ್ ನಿರುಪದ್ರವಿಯಾದರೂ ಇದರಿಂದ ಬಿಡುಗಡೆ ಯಾಗುವ ವಿಕಿರಣಗಳು, ಪುರುಷರ ವೀರ್ಯದ ಮೇಲೆ ಪರಿಣಾಮ ಬೀರುತ್ತವೆ.
ಬೊಜ್ಜು :
ದೇಹದ ತೂಕ ಹೆಚ್ಚಾಗಿ, ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತಾ ಹೋದರೆ, ಹಲವಾರು ರೀತಿಯ ಅನಾರೋಗ್ಯ ಕಾಯಿಲೆ ಗಳು ಕಂಡು ಬರುವ ಸಾಧ್ಯತೆ ಇರುತ್ತದೆ. ಪುರುಷರಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾದರೆ ವೀರ್ಯದ ಗಣತಿ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರು ವುದು. ಹೀಗಾಗಿ ಆರೋಗ್ಯಕಾರಿ ಆಹಾರ ಪದ್ಧತಿ ಸೇವನೆ ಮಾಡುವುದರ ಜೊತೆಗೆ ವ್ಯಾಯಾಮ ಮಾಡುವ ಅಭ್ಯಾಸ ಮಾಡಿಕೊಳ್ಳಿ.
ಒಟ್ಟಿನಲ್ಲಿ ಬಹುಪಾಲು ಜನರ ಜೀವನ ಶೈಲಿ ಜಡತ್ವದಿಂದ ತುಂಬಿದ್ದು, ಇದುವೇ ಸಂತಾನಹೀನತೆಯ ಸಮಸ್ಯೆಗೆ ಪ್ರಧಾನ ಕಾರಣ ಎನ್ನುತ್ತವೆ ಅಧ್ಯಯನ ವರದಿಗಳು. ಅತಿ ಜಿಡ್ಡಿನ ಆಹಾರ, ಕಲಬೆರಕೆ ಆಹಾರ ದೇಹವನ್ನು ಆಂತರಿಕವಾಗಿ ಸಮಸ್ಯೆಗಳ ತಾಣವಾಗಿ ಮಾಡಿದೆ. ಒತ್ತಡ ಕೂಡ ಮತ್ತೊಂದು ಕಾರಣ. ಎಡೆಬಿಡದ ಕೆಲಸ, ಅತಿಯಾದ ಕುಡಿತದ ಚಟ, ತಡವಾದ ಮದುವೆ, ಸಮಯಪಾಲನೆ ಸಮಸ್ಯೆಯು ಫಲವತ್ತತೆ ಬಿಕ್ಕಟ್ಟನ್ನು ಹೆಚ್ಚಿಸಿವೆ.
ಆದ್ದರಿಂದ ಬಂಜೆತನ ನಿವಾರಣೆಗಾಗಿ ಪುರುಷರು ಆಂಟಿ ಆಕ್ಸಿಡೆಂಟ್ ಅಂಶ ಇರುವ ಹಣ್ಣು-ತರಕಾರಿಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಪುರುಷರು ಪ್ರತಿದಿನ ಬಾಳೆಹಣ್ಣನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ಯಾಕೆಂದ್ರೆ ಈ ಹಣ್ಣಿನಲ್ಲಿ ಬ್ರೋಮೇಲೈನ್ ಎನ್ನುವ ಸಂಯುಕ್ತ ಅಂಶ ಯಥೇಚ್ಛ ವಾಗಿ ಕಂಡುಬರುವುದರಿಂದ, ಪುರುಷರ ವೀರ್ಯಾ ಣುಗಳ ಗುಣಮಟ್ಟ ಹಾಗೂ ಸಂತತಿಯನ್ನು ಕೂಡ ಹೆಚ್ಚಿಸುತ್ತದೆ. ಇನ್ನು ನೆನೆಸಿಟ್ಟ ಬಾದಾಮಿ ಬೀಜಗಳು, ವಾಲ್ನಟ್ ಬೀಜಗಳನ್ನು ಮಿತವಾಗಿ ಪ್ರತಿದಿನ ಸೇವನೆ ಮಾಡುವ ಅಭ್ಯಾಸ ಮಾಡಿ ಕೊಂಡರೆ, ಪುರುಷರ ಫಲವತ್ತತೆಯ ಸಮಸ್ಯೆ ದೂರ ವಾಗುತ್ತದೆ.
ಸಾಮಾನ್ಯವಾಗಿ ಪುರುಷರಿಗೆ ಆರೋಗ್ಯಕರವಾದ ರೋಗ ನಿರೋಧಕ ಶಕ್ತಿ ಮತ್ತು ಉತ್ತಮವಾದ ದೇಹ ಇದ್ದರಷ್ಟೇ ಸಾಕಾಗುವುದಿಲ್ಲ. ಜೊತೆಗೆ ಫಲವತ್ತತೆಗೆ ಸಂಬಂಧಪಟ್ಟಂತೆ ಯಾವುದೇ ತೊಂದರೆಗಳು ಇರದಂತೆ ನೋಡಿಕೊಳ್ಳುವುದು ಸಹ ಮುಖ್ಯ ಅಂಶವಾಗಿದೆ.
ಇದನ್ನೂ ಓದಿ: Chapati : ಅಯ್ಯಯ್ಯೋ, ಚಪಾತಿ ತಿಂದ್ರೆ ಕ್ಯಾನ್ಸರ್ ಬರುತ್ತಾ?