ಮಂಗಳೂರು ಪೊಲೀಸರ ಭರ್ಜರಿ ಬೇಟೆ; ದಕ್ಷಿಣ ಕನ್ನಡ ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರ ದಾಳಿ..! ಸಿಕ್ಕಿದ್ದೇನು ಗೊತ್ತಾ?

Dakshina kannada jail : ಮಂಗಳೂರು: ಬೆಳ್ಳಂಬೆಳಗ್ಗೆ ಮಂಗಳೂರು ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರಾಗೃಹದ (Dakshina kannada jail) ಮೇಲೆ ಪೊಲೀಸರ ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ. ಅಕ್ರಮ ಚಟುಟಿಕೆ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಕಾರಾಗೃಹದಲ್ಲಿ ಬೀಡಿ, ಸಿಗರೇಟ್​​, ಪಾನ್​​ ಮಸಾಲ, ಗುಟ್ಕಾ ಪತ್ತೆಯಾಗಿದೆ. ಸುಮಾರು 300 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸತತ 1 ಗಂಟೆ 15 ನಿಮಿಷಗಳ ಕಾಲ ಕಾರಾಗೃಹ ತಪಾಸಣೆ ನಡೆಸಿದ್ದಾರೆ. ದಾಳಿಯ ಮಾಹಿತಿ ಕೈದಿಗಳಿಗೆ ಮೊದಲೇ ತಲುಪಿರುವ ಶಂಕೆ ವ್ಯಕ್ತವಾಗಿದೆ. ಜೈಲಿನಲ್ಲಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ನಿರ್ಧರಿಸಿರುವ ಪೊಲೀಸರು, ಮುಂದಿನ ದಿನಗಳಲ್ಲಿ ಮತ್ತೆ ದಾಳಿ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಮಂಗಳೂರು ನಗರ ಪೊಲೀಸ್‌ ಕಮೀಷನರ್‌ ಕುಲದೀಪ್ ಕುಮಾರ್ ಆರ್.ಜೈನ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಡಿಸಿಪಿ, ಎಸಿಪಿ, ಇನ್​ಸ್ಪೆಕ್ಟರ್, ಪಿಎಸ್​ಐ ಸೇರಿದಂತೆ 300ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ ಸಿಬ್ಬಂದಿ ದಾಳಿ ನಡೆಸಿದ್ದಾರೆ. ನಂತರ ಮಾತನಾಡಿದ ಪೊಲೀಸ್ ಆಯುಕ್ತ ಕುಲದೀಪ್​​​ ಜೈನ್, ಅಕ್ರಮ ಚಟುವಟಿಕೆ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಕಾರಾಗೃಹಕ್ಕೆ ಭೇಟಿ ನೀಡಲಾಗಿತ್ತು. ,ಈ ವೇಳೆ ತಪಸಾಣೆ ನಡೆಸಿದಾಗ ಬೀಡಿ, ಸಿಗರೇಟ್​​, ತಂಬಾಕು ಬಿಟ್ಟು ಬೇರೇನು ಸಿಕ್ಕಿಲ್ಲ. ಮುಂದಿನ ದಿನಗಳಲ್ಲೂ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತ ಎಂದರು.

ಇನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಒಟ್ಟು 300 ಮಂದಿ ಪ್ಲ್ಯಾನ್ ಮಾಡಿ ದಾಳಿ ನಡೆಸಿದ್ದೇವೆ. ಜೈಲು ಅಧಿಕಾರಿಗಳು ಜೈಲಿಗೆ ಎಂಟ್ರಿಯಾಗುವ ಪ್ರತಿಯೊಬ್ಬರನ್ನೂ ತಪಾಸಣೆ ನಡೆಸುತ್ತಿದ್ದಾರೆ. ತಪಾಸಣೆ ನಡೆಸುವಾಗ ಬೀಡಿ ಸಿಗರೇಟ್ ತಂಬಾಕು ಬಿಟ್ಟು ಬೇರೆನೂ ಸಿಕ್ಕಿಲ್ಲ. ವಿಚಾರಾಧೀನ ಕೈದಿಗಳನ್ನು ಭೇಟಿ ಮಾಡಲು ಬರುವ ವೇಳೆ ಕೆಲವರು ಬೀಡಿ ಸಿಗರೇಟ್ ಕೊಡುತ್ತಾರೆ. ಆದರೆ ಆ ಮಾಹಿತಿ ತಿಳಿದುಬಂದ ಅಕ್ರಮ ಚಟುವಟಿಕೆ ಮಾಹಿತಿ ಸಂಬಂಧ ಯಾವುದೇ ಪೂರಕ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ಸ್ಪಷ್ಟನೆ ನೀಡಿದ್ದೆ. ಒಟ್ಟಾರೆಯಾಗಿ ಕಾರಾಗೃಹಕ್ಕೆ ಬೆಳ್ಳಂಬೆಳಗ್ಗೆ ದಿಢೀರ್ ಪೊಲೀಸರು ಬಂದು ದಾಳಿ ನಡೆಸಿದ್ದು, ಕೈದಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಚಳಿ ಬಿಡಿಸಿದ್ದಾರೆ. ಇನ್ನೂ ಮುಂದೆ ಯಾವ ದಿನಗಳಲ್ಲಿ ಮತ್ತೆ ಪೊಲೀಸರು ಭೇಟಿ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Leave A Reply

Your email address will not be published.