Onion Juice : ಈರುಳ್ಳಿ ರಸ ತಲೆಗೆ ಹಚ್ಚುವ ಮೊದಲು ಖಂಡಿತಾ ಈ ಮಾಹಿತಿ ತಿಳಿಯಿರಿ!!

Onion Juice : ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಈರುಳ್ಳಿ ರಸದ (Onion Juice)ಪ್ರಯೋಜನದ ಬಗ್ಗೆ ನಿಮಗೆಷ್ಟು ಗೊತ್ತಿದೆಯೋ ಅದರ ಹೊರತು ನಿಮಗೊಂದು ಮಾಹಿತಿ ಇಲ್ಲಿ ತಿಳಿಸಲಾಗಿದೆ. ಹೌದು, ಈರುಳ್ಳಿ ರಸ ತಲೆಗೆ ಹಚ್ಚುವುದರಿಂದ ಕೂದಲು ಉದುರುವಿಕೆ ನಿಲ್ಲುತ್ತದೆ ಅಥವಾ ಕೂದಲು ಉದುರುವಿಕೆ ನಿಲ್ಲುವುದಿಲ್ಲ ಎಂಬ ಗೊಂದಲಕ್ಕೆ ಉತ್ತರ ನೀಡಲಾಗಿದೆ.

ಮುಖ್ಯವಾಗಿ ಹೊಳೆಯುವ ಮತ್ತು ಬಲವಾದ ಕೂದಲನ್ನು ಪಡೆಯಲು ಈರುಳ್ಳಿ ರಸವನ್ನು ನೆತ್ತಿಯ ಮೇಲೆ ಹಾಕುವುದು ಅನಾದಿ ಕಾಲದಿಂದಲೂ ಜನರು ಅನುಸರಿಕೊಂಡು ಬರುತ್ತಿರುವ ಮನೆಮದ್ದಾಗಿದೆ. ಯಾವುದೇ ಕೆಮಿಕಲ್ ಬಳಸದೆ ನೈಸರ್ಗಿಕವಾಗಿ ಈರುಳ್ಳಿಯ ಹೇರ್ ಮಾಸ್ಕ್​ನ್ನ ತಯಾರಿಸುವ ಕಾರಣ ಹೆಚ್ಚಿನವರು ತಮ್ಮ ಕೂದಲ ಸೌಂದರ್ಯಕ್ಕಾಗಿ ಇದನ್ನು ತಲೆಗೆ ಹಚ್ಚಿಕೊಳ್ಳುತ್ತಾರೆ ಈ ನೈಸರ್ಗಿಕ ಹೇರ್ ಮಾಸ್ಕ್​​ನಿಂದ ಧನಾತ್ಮಕ ಪ್ರಯೋಜನವನ್ನು ಪಡೆಯಬಹುದಾಗಿದೆ.

ಮುಖ್ಯವಾಗಿ ಈರುಳ್ಳಿಯ ಉರಿಯೂತ ನಿವಾರಕ ಹಾಗೂ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಕೂದಲಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಇನ್ನು ಪೌಷ್ಟಿಕಾಂಶದ ದೃಷ್ಟಿಯಿಂದ ನೋಡುವುದಾದರೆ ಈರುಳ್ಳಿಯು ಸಲ್ಪರ್‌ನಿಂದ ಸಮೃದ್ಧವಾಗಿದೆ ಮತ್ತು ಇದು ಒಡೆಯುವಿಕೆ ಹಾಗೂ ತೆಳುವಾಗುವುದನ್ನು ತಡೆಯುತ್ತದೆ, ಸಲ್ಪರ್ ಕೂದಲು ಕಿರುಚೀಲಗಳ ಪುನರುತ್ಪಾದನೆಗೆ ಸಹಾಯ ಮಾಡುತ್ತದೆ.

ಆದರೆ, ಒಂದು ವೇಳೆ ಈರುಳ್ಳಿ ರಸವು ನಿಜವಾಗಿಯೂ ಕೂದಲಿನ ಬೆಳವಣಿಗೆಗೆ ಒಳ್ಳೆಯದಾಗಿದ್ದರೆ, ಬೋಳು ತಲೆಯ ಜನರೇ ಇರುತ್ತಿರಲಿಲ್ಲ. ಆಗ ಎಲ್ಲರೂ ನೆತ್ತಿಯ ಮೇಲೆ ಈರುಳ್ಳಿಯ ರಸವನ್ನು ಉಜ್ಜುತ್ತಿದ್ದರು ಹಾಗೂ ಹೇರಳವಾಗಿ ಅವರಿಗೆ ಕೂದಲು ಬೆಳೆಯುತ್ತಿತ್ತು. ಈರುಳ್ಳಿ ರಸವು ಪುರುಷರಲ್ಲಿ ಕೂದಲು ಮತ್ತೆ ಬೆಳೆಯಲು ಕಾರಣವಾಗಬಹುದು ಅಥವಾ ಸ್ತ್ರೀಯರಲ್ಲಿ ಕೂದಲು ಉದುರುವಿಕೆಯನ್ನು ತಡೆಯುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಡಾ. ಶರದ್ ಹೇಳುತ್ತಾರೆ.

ಈರುಳ್ಳಿ ರಸವನ್ನು ಬಳಸುವುದರಿಂದ ನೆತ್ತಿಯ ಮೇಲೆ ಕೇವಲ 2 ವಾರಗಳಲ್ಲಿ ಕೂದಲು ಮತ್ತೆ ಬೆಳೆಯುತ್ತದೆ ಎಂದು ನಂಬಲಾಗಿದೆ. ಆದರೆ, ಮೊದಲು ಚರ್ಮರೋಗ ವೈದ್ಯರನ್ನು ಸಂಪರ್ಕಿಸಿ ನಂತರ ಅದನ್ನು ಕೂದಲಿಗೆ ಬಳಸುವುದು ಉತ್ತಮ. ಈರುಳ್ಳಿ ರಸವನ್ನು ತಲೆಗೆ ಹಚ್ಚುವುದರಿಂದ ಎಲ್ಲರಿಗೂ ಪ್ರಯೋಜನವಾಗುವುದಿಲ್ಲ. ಇದು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ.

ಕೂದಲು ಬೆಳೆಯಲು ಸಹಾಯ ಮಾಡುತ್ತದೆ ಅಥವಾ ಇತರ ಕೂದಲ ಸಮಸ್ಯೆಯನ್ನು ಈರುಳ್ಳಿ ರಸವು ತ್ವರಿತವಾಗಿ ಸರಿಪಡಿಸಲು ಸಹಾಯ ಮಾಡುತ್ತದೆ ಎನ್ನುವ ಸಾಮಾಜಿಕ ಮಾಧ್ಯಮದಲ್ಲಿ ತೋರಿಸುವ ಯಾವುದೇ ವದಂತಿಗಳಿಗೆ ಗಮನ ಕೊಡಬೇಡಿ. ಈರುಳ್ಳಿ ರಸವು ನೆತ್ತಿಯಲ್ಲಿ ಸುಡುವಿಕೆ ಮತ್ತು ತುರಿಕೆಗೆ ಕಾರಣವಾಗಬಹುದು ಮತ್ತು ಇದು ಕೂದಲು ಉದುರುವಿಕೆಯನ್ನು ಉಂಟುಮಾಡಬಹುದು. ಆದ್ದರಿಂದ ನೆತ್ತಿಯ ಮೇಲೆ ಈರುಳ್ಳಿ ರಸವನ್ನು ಹಚ್ಚಿಕೊಳ್ಳುವುದನ್ನು ತಪ್ಪಿಸುವುದು ಉತ್ತಮ ಎಂದು ಡಾ. ರಿಂಕಿ ಕಪೂರ್ ಅವರ ಅಭಿಪ್ರಾಯ ಆಗಿದೆ.

ದಿ ಎಸ್ತೆಟಿಕ್ ಕ್ಲಿನಿಕ್ಸ್​​ನ ಕನ್ಸಲ್ಟೆಂಟ್ ಡರ್ಮಟಾಲಜಿಸ್ಟ್, ಕಾಸ್ಮೆಟಿಕ್ ಡರ್ಮಟಾಲಜಿಸ್ಟ್ ಹಾಗೂ ಡರ್ಮಟೊ ಸರ್ಜನ್ ಆದ ಡಾ. ರಿಂಕಿ ಕಪೂರ್ ಪ್ರಕಾರ ಈರುಳ್ಳಿ ರಸವನ್ನು ತಲೆಗೆ ಹಚ್ಚುವುದರಿಂದ ಪ್ರತಿಯೊಬ್ಬರೂ ಒಂದೇ ರೀತಿಯ ಪ್ರಯೋಜನವನ್ನು ಪಡೆಯುವುದಿಲ್ಲ ಮತ್ತು ಕೆಲವರು ಕೆಟ್ಟ ಪರಿಣಾಮವನ್ನು ಎದುರಿಸಬಹುದು ಎಂದು ತಿಳಿಸಿದ್ದಾರೆ .

ಇದನ್ನೂ ಓದಿ: Thick Curd : ಚಪ್ಪರಿಸಿ ತಿನ್ನುವ ರುಚಿಯಾದ ದಪ್ಪ ಮೊಸರನ್ನು ಈ ರೀತಿ ತಯಾರಿಸಿ

 

Leave A Reply

Your email address will not be published.