Watermelon: ಕಲ್ಲಂಗಡಿ ಹಣ್ಣು ಖರೀದಿಸುವ ಮುನ್ನ ಈ ವಿಷಯಗಳು ತಿಳಿದಿರಲಿ!!
Watermelon: ಬೇಸಿಗೆಯಲ್ಲಿ ಉಷ್ಣತೆಯು ಹೆಚ್ಚಾಗುತ್ತಿದ್ದು, ಬಾಯಾರಿಕೆ, ಬಳಲಿಕೆಯು ಈ ಸಮಯದಲ್ಲಿ ಸಾಮಾನ್ಯವಾಗಿರುವುದು. ಎಷ್ಟು ನೀರು (water) ಕುಡಿದರೂ ಸಾಕಾಗದು. ಇಂತಹ ಸಮಯದಲ್ಲಿ ಸಾಮಾನ್ಯವಾಗಿ ಪ್ರಕೃತಿಯು ನೀಡಿರುವಂತಹ ನೀರಿನಾಂಶ ಅಧಿಕವಾಗಿ ಇರುವ ಹಣ್ಣುಗಳನ್ನು ಸೇವಿಸಬೇಕು. ಇಂತಹ ಹಣ್ಣುಗಳಲ್ಲಿ ಕಲ್ಲಂಗಡಿ (Watermelon) ಕೂಡ ಒಂದು. ಇದು ದೇಹದ ಬಾಯಾರಿಕೆ ತಣಿಸುವುದು ಮಾತ್ರವಲ್ಲದೆ, ಹಸಿವು ಕೂಡ ಕಡಿಮೆ ಮಾಡುವಂತಹ ಸಾಮಾರ್ಥ್ಯ ಹೊಂದಿದೆ. ಯಾಕೆಂದರೆ ಇದರಲ್ಲಿ ನೀರಿನಾಂಶವು ಹೆಚ್ಚಾಗಿರುವ ಕಾರಣದಿಂದಾಗಿ ಹಸಿವು ತಾನಾಗಿಯೇ ಕಡಿಮೆ ಆಗುತ್ತದೆ.
ಕಲ್ಲಂಗಡಿ ಹಣ್ಣಿನಲ್ಲಿ ಶೇ.92ರಷ್ಟು ನೀರಿನಾಂಶವಿದೆ ಮತ್ತು ಶೇ.6ರಷ್ಟು ಸಕ್ಕರೆ ಅಂಶವಿದೆ. ಅಧಿಕ ನಾರಿನಾಂಶ ಕೂಡ ಹೊಂದಿರುವಂತಹ ಕಲ್ಲಂಗಡಿ ಹಣ್ಣು ಬೇಸಗೆ ಸಮಯದಲ್ಲಿ ಸೇವಿಸುವುದು ತುಂಬಾ ಲಾಭಕಾರಿ ಎಂದು ಪರಿಗಣಿಸಲಾಗಿದೆ. ಆದರೆ, ಕಲ್ಲಂಗಡಿ ಖರೀದಿಸುವ ಮುನ್ನ ಎಚ್ಚರಿಕೆಯಿಂದ ಖರೀದಿಸಿ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಕತ್ತರಿಸದೆ ಕಲ್ಲಂಗಡಿ ಹಣ್ಣನ್ನು ಹಾಳಾಗಿಲ್ಲ, ಚೆನ್ನಾಗಿದೆ ಎಂದು ಗುರುತಿಸೋದು ಹೇಗೆ? ಅಲ್ಲದೆ, ಕಲ್ಲಂಗಡಿ ಖರೀದಿಸುವ ಮುನ್ನ ಈ ವಿಷಯಗಳು ನಿಮಗೆ ತಿಳಿದಿರಲಿ.
ಮೊದಲು ಗಮನಿಸಬೇಕಾದ ವಿಷಯ ಕಲ್ಲಂಗಡಿ ಹಣ್ಣಿನ ತೂಕ. ಹೌದು, ಕನಿಷ್ಠ 2 ಕೆಜಿ ಅಥವಾ ಅದಕ್ಕಿಂತ ಹೆಚ್ಚಿನ ತೂಕದ ಕಲ್ಲಂಗಡಿಯನ್ನು ಆರಿಸಿ. ಆದರೆ ಕಲ್ಲಂಗಡಿ ಯಾವ ಬಣ್ಣದ್ದಾಗಿದೆ? ಮೇಲೆ ಪಟ್ಟಿಗಳಿವೆಯೋ? ಇಲ್ಲವೋ? ಎಂಬುದು ಮುಖ್ಯವಲ್ಲ, ಕಲ್ಲಂಗಡಿಯ ಸಿಪ್ಪೆ ಒಣಗಿರಬೇಕು. ಹಾಗೂ ಕಲ್ಲಂಗಡಿ ಹಣ್ಣು ಭಾರವಾಗಿರಬೇಕು. ಒಂದು ವೇಳೆ ಅದು ಮೃದುವಾಗಿದ್ದರೆ, ಒಳಗೆ ಹಾಳಾಗಿದೆ ಎಂಬುದು ಗೊತ್ತಿರಲಿ.
ಕೆಲವು ಕಲ್ಲಂಗಡಿಗಳು ಕಂದು ಅಥವಾ ಹಳದಿ ಬಣ್ಣದ ಚುಕ್ಕೆಗಳನ್ನು ಹೊಂದಿರುತ್ತವೆ. ಹೆಚ್ಚು ಕಲೆಗಳು ಇರುತ್ತದೆ, ಕಲ್ಲಂಗಡಿ ಒಳಗೆ ಕೆಂಪು ಬಣ್ಣದ್ದಾಗಿರುತ್ತದೆ. ಆದರೆ, ನೀವು ಕತ್ತರಿಸದೆ ಕಲ್ಲಂಗಡಿ ಹಣ್ಣನ್ನು ಕೆಂಪಾಗಿದೆಯೇ ಎಂದು ತಿಳಿಯಬಹುದು. ಹೌದು, ಕಲ್ಲಂಗಡಿ ಮೇಲಿನ ಸಿಪ್ಪೆ ಒಣಗಿದ್ದರೆ ಅದರ ಒಳಭಾಗ ಕೆಂಪಾಗಿಯೇ ಇರುತ್ತದೆಯಂತೆ ಹಾಗಂತ ತಜ್ಞರು ಹೇಳುತ್ತಾರೆ. ಕತ್ತರಿಸಿದ ಕಲ್ಲಂಗಡಿ ರೆಫ್ರಿಜರೇಟರ್ ಅಥವಾ ನೇರ ಸೂರ್ಯನ ಬೆಳಕು (sun) ಬೀಳದ ಸ್ಥಳದಲ್ಲಿ ಇರಿಸಿದರೆ ಅದು ಹಾಳಾಗುವುದಿಲ್ಲ. ಸದ್ಯ ಕಲ್ಲಂಗಡಿ ಖರೀದಿಸುವ ಮುನ್ನ ಈ ವಿಷಯಗಳು ನೆನಪಿರಲಿ.