Fire- Boltt Ninja Calling Pro Plus: ಫೈರ್ ಬೋಲ್ಟ್ ನಿಂಜಾ ಕಾಲಿಂಗ್ ಪ್ರೊ ಪ್ಲಸ್ ಸ್ಮಾರ್ಟ್ ವಾಚ್ ಅತೀ ಕಡಿಮೆ ಬೆಲೆಗೆ ಲಭ್ಯ! ಮಿಸ್ ಮಾಡಿಕೊಳ್ಳದಿರಿ!
Fire-Boltt Ninja Calling ProPlus : ಸ್ಮಾರ್ಟ್‌ವಾಚ್ ವಿಭಾಗದಲ್ಲಿ ಈಗಾಗಲೇ ಹಲವಾರು ಸ್ಮಾರ್ಟ್‌ವಾಚ್‌ಗಳು ಮಾರುಟ್ಟೆಯಲ್ಲಿ ತನ್ನ ಹವಾ ತೋರಿಸುತ್ತಿದೆ. ಇದೀಗ ಸ್ಮಾರ್ಟ್ ಫೋನ್ ಗಿಂತ (smartphone ) ತಾನೇನು ಕಮ್ಮಿ ಇಲ್ಲ ಎಂದು ಮತ್ತೊಂದು ಸ್ಮಾರ್ಟ್ ವಾಚ್(smartwatch ) ಮಾರುಕಟ್ಟೆಯಲ್ಲಿ ತನ್ನ ಪ್ರಭಾವ ಬೀರಿದೆ.
ಹೌದು, ಸ್ಮಾರ್ಟ್‌ವಾಚ್ ವಿಭಾಗದಲ್ಲಿ ನೀವು ಕೇವಲ 1000 ರೂ.ಗಳಿಂದ ಲಕ್ಷ ಬೆಲೆ ಬಾಳುವ ಸ್ಮಾರ್ಟ್‌ವಾಚ್‌ಗಳನ್ನು ಖರೀದಿ ಮಾಡಬಹುದು. ಸದ್ಯ, ಈ ಫೈರ್ ಫೈರ್- ಬೋಲ್ಟ್ ನಿಂಜಾ ಕಾಲಿಂಗ್ ಪ್ರೊ ಪ್ಲಸ್ (Fire-Boltt Ninja Calling ProPlus) 83%
ಡಿಸೈಂಟ್ ಘೋಷಣೆ ಮಾಡಲಾಗಿದ್ದು, ಗ್ರಾಹಕರಿಗೆ ಉತ್ತಮ ಅವಕಾಶ ಆಗಿದೆ.
ಈ ಸ್ಮಾರ್ಟ್‌ವಾಚ್ ಅತ್ಯಂತ ಹೆಚ್ಚು ಬೇಡಿಕೆ ಇರುವ ಹಾಗೂ ಅತ್ಯುತ್ತಮ ಫೀಚರ್ಸ್ ಇರುವ ಸ್ಮಾರ್ಟ್‌ವಾಚ್ ಆಗಿದ್ದು, 9,999 ರೂ. ಗಳ ಸಾಮಾನ್ಯ ಬೆಲೆ ಹೊಂದಿದೆ. ಆದರೆ ಈ ಆಫರ್ ಮೂಲಕ ನೀವು ಕೇವಲ 1,699 ರೂ.ಗಳಿಗೆ ಈ ವಾಚ್ ಖರೀದಿ ಮಾಡಬಹುದಾಗಿದೆ. ಅಂದರೆ ಈ ವಾಚ್ ಮೇಲೆ ಬರೋಬ್ಬರಿ 83% ರಷ್ಟು ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ. ಹೌದು, ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಪ್ಲಿಪ್ ಕಾರ್ಟ್‌ನಲ್ಲಿ ಇದು ಲಭ್ಯವಿದ್ದು, ಈ ಮೂಲಕ ಕೊಂಡುಕೊಳ್ಳಬಹುದಾಗಿದೆ. ಅದರಂತೆ ಕೆಲವು ಬ್ಯಾಂಕ್ ಕಾರ್ಡ್‌ಗಳ ಮೂಲಕವೂ ಇನ್ನೂ ಹೆಚ್ಚಿನ ಡಿಸ್ಕೌಂಟ್ ಪಡೆದುಕೊಳ್ಳಬಹುದು.
ಫೈರ್-ಬೋಲ್ಟ್ ನಿಂಜಾ ಕಾಲಿಂಗ್ ಪ್ರೊ
ಪ್ಲಸ್ ವಿಶೇಷತೆ :
ಈ ಅತ್ಯುತ್ತಮ ಸ್ಮಾರ್ಟ್‌ವಾಚ್ 83 ಇಂಚಿನ ಸೈರ್ ಆಕಾರದ IPS 2.5D ಕರ್ವ್ ಗ್ಲಾಸ್ ಡಿಸ್‌ಪ್ಲೇ ಹೊಂದಿದ್ದು, ಇದು 240 x 280 ಪಿಕ್ಸೆಲ್ ರೆಸಲ್ಯೂಶನ್ ನೀಡಲಿದೆ.
ಇದರೊಂದಿಗೆ ಸ್ಮಾರ್ಟ್ ವಾಚ್‌ನ ಮಲ್ಟಿ ಟಚ್ ಡಿಸ್‌ಪ್ಲೇ 217 ppi ಪಿಕ್ಸೆಲ್ ಸಾಂದ್ರತೆಯನ್ನು ಪಡೆದುಕೊಂಡಿದೆ. ಹಾಗೆಯೇ ಇದು 100+ ವಾಚ್ ಫೇಸ್‌ಗಳನ್ನು ಹೊಂದಿದೆ.
ಇದು 120 ಸ್ಪೋರ್ಟ್ಸ್ ಮೋಡ್‌ಗಳೊಂದಿಗೆ ಈ ಸ್ಮಾರ್ಟ್‌ವಾಚ್ ಪೆಡೋಮೀಟರ್, ಹೃದಯ ಬಡಿತ ಮಾನಿಟರ್, Sp02 (ರಕ್ತ ಆಮ್ಲಜನಕ) ಮಾನಿಟರ್, ಕ್ಯಾಲೋರಿ ಕೌಂಟರ್, ಸ್ಟೆಪ್ ಕೌಂಟರ್ ಹಾಗೂ ಸ್ಲಿಪ್ ಮಾನಿಟರ್ ಸೇರಿದಂತೆ ವಿವಿಧ ಸೆನ್ಸರ್ ಆಯ್ಕೆಗಳನ್ನು ಒಳಗೊಂಡಿದ್ದು, ಆಂಡ್ರಾಯ್ ಹಾಗೂ ಆಪಲ್ ಫೋನ್‌ಗಳಿಗೆ ಬೆಂಬಲ ನೀಡುತ್ತದೆ.
ಹಾಗೆಯೇ ಈ ಬ್ಲೂಟೂತ್ ಕಾಲಿಂಗ್ ಸ್ಮಾರ್ಟ್‌ವಾಚ್ ಮೂಲಕ ಪ್ರಯಾಣದಲ್ಲಿರುವಾಗ ಕರೆಗಳನ್ನು ಮಾಡಬಹುದು ಹಾಗೂ ಸ್ವೀಕಾರ ಮಾಡಬಹುದು. ಇದರೊಂದಿಗೆ ಆಪ್ ಸಂಬಂಧಿ ನೋಟಿಫಿಕೇಶನ್ ನ್ನು ಈ ವಾಚ್ ಮೂಲಕ ಪಡೆದುಕೊಳ್ಳಬಹುದು. ಹಾಗೆಯೇ ರಿಮೋಟ್ ಮೂಲಕ ಕ್ಯಾಮೆರಾವನ್ನೂ ಸಹ ಕಂಟ್ರೋಲ್ ಮಾಡಬಹುದಾಗಿದ್ದು, ಇದರೊಂದಿಗೆ ಮ್ಯೂಸಿಕ್ ಅನ್ನೂ ನಿಯಂತ್ರಿಸಬಹುದಾಗಿದೆ.
ಈ ವಾಚ್ ಲಿಥಿಯಂ ಅಯಾನ್ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, 120 ನಿಮಿಷಗಳವರೆಗೆ ಚಾರ್ಜಿಂಗ್ ಮಾಡಿದರೆ ನೀವು ಬರೋಬ್ಬರಿ 5 ದಿನಗಳವರೆಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಮೆಟಾಲಿಕ್ ಚಾರ್ಜಿಂಗ್ಪಾಯಿಂಟ್‌ಗಳೊಂದಿಗೆ ಯುಎಸ್‌ಬಿ ಕೇಬಲ್ -2 ಅನ್ನು ಹೊಂದಿದೆ. ಜೊತೆಗೆ IP67 ವಾಟರ್ ರೆಸಿಸ್ಟೆಂಟ್‌ರೇಟ್ ಹೊಂದಿದ್ದು, ಆದ್ದರಿಂದ ಎಲ್ಲಾ ಸಮಯದಲ್ಲೂ ಈ ಸ್ಮಾರ್ಟ್ ವಾಚ್ ನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ: Remove Stains From Steel Utensils: ಸ್ಟೀಲ್ ಪಾತ್ರೆಗಳು ಫಳಫಳ ಹೊಳೆಯಲು ಈ ಟಿಪ್ಸ್ ಫಾಲೋ ಮಾಡಿ ಸಾಕು!!