Electric Scooters: ಎಲೆಕ್ಟ್ರಿಕ್ ಸ್ಕೂಟರ್ ಕೊಳ್ಳುವ ಮುನ್ನ ಈ ಟಿಪ್ಸ್ ಫಾಲೋ ಮಾಡಿ!
Electric Scooter :ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು (EV) ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಜನಪ್ರಿಯತೆಯನ್ನು ಪಡೆಯುತ್ತಿದೆ. ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್(Electric Scooters) ಹಾಗೂ ಬೈಕ್ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದ್ದು, ಜನರ ನಿರೀಕ್ಷೆಗೆ ತಕ್ಕಂತೆ ವಿಭಿನ್ನ ವಿಶೇಷತೆ ಮೂಲಕ ವಾಹನಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಡುತ್ತಿವೆ. ಆದರೆ, ಬಜೆಟ್ ಬೆಲೆಯಲ್ಲಿ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ ಕೊಂಡುಕೊಳ್ಳಲು ಬಯಸುವ ಮಂದಿಗೆ ಮುಖ್ಯ ಮಾಹಿತಿ ಇಲ್ಲಿದೆ ನೋಡಿ.
ಸುಜುಕಿ ಆಕ್ಸೆಸ್ 125 ಸ್ಕೂಟರ್(Suzuki Access 125) ಸಣ್ಣ ಸವಾರಿಗಳಿಗೆ ಸೂಕ್ತವಾದ ಇಲೆಕ್ಟ್ರಿಕ್ ಸ್ಕೂಟರ್ ಎಂದೆನಿಸಿದ್ದು ಸ್ಕೂಟರ್ ಮಾಸಿಕ ಬಳಕೆ ಗರಿಷ್ಠ 500 ಕಿ.ಮೀ ಆಗಿದ್ದು 4.ಕಿ.ಮೀನೊಳಗಿನ ಸವಾರಿಗಳಿಗೆ ನೆರವಾಗುತ್ತದೆ. ಸಣ್ಣ ಪ್ರಯಾಣಗಳಿಗೆ ಸೂಕ್ತವಾಗಿರುವ ಈ ಸ್ಕೂಟರ್ ಇಂಧನ ದಕ್ಷತೆ (32 kmpl) ಕಡಿಮೆ ಆಗಿದ್ದು, ದೀರ್ಘ ಪ್ರಯಾಣಕ್ಕೂ ಈ ಸ್ಕೂಟರ್ ಉತ್ತಮವಾಗಿದ್ದರೂ ಅದನ್ನು ಬಳಸುವ ಸಾಮರ್ಥ್ಯವನ್ನು ಅವಲಂಬಿತವಾಗಿರುತ್ತದೆ. ಈ ಸ್ಕೂಟರ್ 4 ಕಿ.ಮೀ ನೊಳಗಿನ ಪ್ರಯಾಣಕ್ಕೆ ಮಾತ್ರವೇ ಸೂಕ್ತವಾಗಿದೆ.
ಇಲೆಕ್ಟ್ರಿಕ್ ಸ್ಕೂಟರ್ ಪ್ರತಿ ತಿಂಗಳಿಗೆ 500 ಕಿಮೀ ಪ್ರಯಾಣಕ್ಕೆ ಮಾತ್ರ ಸೂಕ್ತವಾಗಿದೆ. ಟಿವಿಎಸ್ ಐ ಕ್ಯೂಬ್ (TVS iQube)ಸ್ಕೂಟರ್ ಎಲ್ಲಾ ಆಕ್ಟೀವಾ(Activa), ಜ್ಯುಪಿಟರ್ಸ್ ಹಾಗೂ ಆಕ್ಸೆಸ್ ಸ್ಕೂಟರ್ಗಳಿಗಿಂತ ಉತ್ತಮ ಆಯ್ಕೆಯಾಗಿದ್ದು, ಟಿವಿಎಸ್ ಐಕ್ಯೂಬ್ ಇತರೆ ಸ್ಕೂಟರ್ಗಳಿಗಿಂತ ಉತ್ತಮ ವೇಗವರ್ಧನೆಯನ್ನು ಒಳಗೊಂಡಿದೆ. ಇದೇ ರೀತಿ, ಅಥರ್ಸ್ ಅಥವಾ ಓಲಾಸ್ಗಿಂತ ಕಡಿಮೆ ಬೆಲೆಯಲ್ಲಿ ಉತ್ತಮ, ಆರಾಮದಾಯಕ ಮತ್ತು ವಿಶ್ವಾಸಾರ್ಹ ಸವಾರಿಯನ್ನು ನೀಡುತ್ತದೆ ಎಂದು ಬಳಕೆದಾರರ ಸಲಹೆಯಾಗಿದೆ.
ಅಂಕಿಅಂಶಗಳ ಅನುಸಾರ, ಇದುವರೆಗೆ ಈ ಸ್ಕೂಟರ್ 45,000 ಕಿಮೀ ಸವಾರಿ ಮಾಡಿದ್ದು, ಪ್ರತಿನಿತ್ಯ 25 ರಿಂದ 40 ಕಿ.ಮೀ ಪ್ರಯಾಣಿಸುತ್ತಿರುವವರಿಗೆ ಎಲೆಕ್ಟ್ರಿಕ್ ಸ್ಕೂಟರ್ ವ್ಯರ್ಥವಾಗುತ್ತದೆ ಎಂಬುದು ಬಲ್ಲವರ ಸಲಹೆಯಾಗಿದೆ. ಏಕೆಂದರೆ ಇಂಧನ ದಕ್ಷತೆ ಕಡಿಮೆ ಇರುವ ಹಿನ್ನೆಲೆ ನೀವು ಹೆಚ್ಚುವರಿ ಪ್ರಯಾಣ ಮಾಡಬಹುದು ಎಂಬ ಲೆಕ್ಕಾಚಾರ ಇಲ್ಲಿ ತಪ್ಪಾಗುತ್ತದೆ ಎಂಬುದು ಕೆಲವರ ಸಲಹೆಯಾಗಿದೆ. ಬಳಕೆಯ ಮಾದರಿಗೆ ಅನ್ವಯಿಸಿಕೊಂಡು ಎಲೆಕ್ಟ್ರಿಕ್ ಸ್ಕೂಟರ್ಗೆ ಮಾರ್ಪಡಿಸಿಕೊಳ್ಳುವುದು ಉತ್ತಮ. ಯಾವುದೇ ವಾಹನ ಖರೀದಿಸುವುದಕ್ಕಿಂತ ಮುನ್ನ ಇಂಧನ ಪ್ರಮಾಣ, ಮೈಲೇಜ್ ಹಾಗೂ ಸವಾರಿಯ ವಿವರವನ್ನು ಅರಿತುಕೊಂಡಿರುವುದು ಉತ್ತಮ.