Astro Tips: ಸೂರ್ಯಾಸ್ತದ ನಂತರ ಈ ಕೆಲಸಗಳನ್ನು ಮಾಡಲೇಬೇಡಿ, ಇಲ್ಲವಾದರೆ ಕೆಡುಕು ಖಂಡಿತ!!

Astro-Tips: ಮನುಷ್ಯ ಸ್ನೇಹ ಜೀವಿ. ಅಕ್ಕಪಕ್ಕದವರು, ನೆಂಟರಿಷ್ಟರ ನಡುವೆ ಕೊಡು, ಕೊಳ್ಳುವಿಕೆ ಬದುಕಿನ ಸಾಮಾನ್ಯ ದಿನಚರಿಯ ಭಾಗ. ಕೆಲವರು ಕಷ್ಟದಲ್ಲಿದ್ದಾಗ ಹಣ ಕೇಳುತ್ತಾರೆ, ಮತ್ತೆ ಕೆಲವರು, ಹೆಚ್ಚಾಗಿ ಅಕ್ಕಪಕ್ಕದ ಮನೆಯವರು ತಕ್ಷಣಕ್ಕೆ ಅಂಗಡಿಗೆ ಹೋಗಲಾಗದೆ ಹಾಲು, ಮೊಸರು, ಸಕ್ಕರೆ ಇತ್ಯಾದಿಗಳನ್ನು ಪಡೆಯುತ್ತಾರೆ. ಕೆಲವರು ಸಾಲವಾಗಿ ಪಡೆದರೆ ಮತ್ತೆ ಕೆಲವರು ಸ್ನೇಹವಾಗಿ ಪಡೆಯುತ್ತಾರೆ. ಅದು ಅವರವರ ನಡುವಿನ ಭಾವನಾತ್ಮಕ ಸಂಬಂಧದ ಮೇಲೆ ಹೋಗುತ್ತದೆ. ಹೀಗೆ ಕೊಡು ಕೊಳ್ಳುವಿಕೆ ಒಳ್ಳೆಯದೇ. ಆದರೆ ಕೆಲ ವಸ್ತುಗಳನ್ನು ಸೂರ್ಯಾಸ್ತದ ನಂತರ ಯಾರಿಗೂ ಕೊಡಬಾರದು ಎಂದು ಶಾಸ್ತ್ರ ಹೇಳುತ್ತದೆ (Astro-Tips).

ಹಣ (money) : ಲಕ್ಷ್ಮೀ ದೇವಿಯು ಸಂಪತ್ತಿನ ಒಡತಿಯಾಗಿದ್ದಾಳೆ. ಸಂಜೆ ದೀಪ ಹಚ್ಚುವ ಹೊತ್ತು ಲಕ್ಷ್ಮೀ ಮನೆಗೆ ಬರುತ್ತಾಳೆ ಎಂಬ ನಂಬಿಕೆ ಇದೆ. ಅಂಥದರಲ್ಲಿ ಆ ಸಮಯದಲ್ಲಿ ಹಣವನ್ನು ಯಾರಿಗಾದರೂ ಕೊಡುವುದೆಂದರೆ ಬಂದ ಲಕ್ಷ್ಮೀಯನ್ನು ಮತ್ತೊಬ್ಬರಿಗೆ ದಾಟಿಸಿದಂತಾಗುತ್ತದೆ. ಇದರಿಂದ ಆಕೆ ಮುಂದೆಂದೂ ಮನೆಗೆ ಬರದೆ ಹೋಗಬಹುದು. ಮನೆಯನ್ನು ದರಿದ್ರ ಲಕ್ಷ್ಮೀ ಆವರಿಸಬಹುದು. ಹಾಗಾಗಿ, ಸೂರ್ಯಾಸ್ತದ ಬಳಿಕ ಹಣವನ್ನು ಯಾರಿಗೂ ಕೊಡಬಾರದು. ಇದು ಖಂಡಿತವಾಗಿಯೂ ನಿಮಗೆ ಆರ್ಥಿಕವಾಗಿ ಸಮಸ್ಯೆ ಆಗುತ್ತದೆ.

ಅರಿಶಿನ (Turmeric) : ಅರಿಶಿನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಯಾವುದೇ ಶುಭ ಕಾರ್ಯದಲ್ಲಿ ಅರಿಶಿನವನ್ನು ಬಳಸಲಾಗುತ್ತದೆ. ಅರಿಶಿನ ಕೂಡಾ ಶುಕ್ರ (Venus) ಗ್ರಹಕ್ಕೆ ಸಂಬಂಧಿಸಿದೆ. ಹಾಗಾಗಿ, ಸೂರ್ಯಾಸ್ತದ ಬಳಿಕ ಅರಿಶಿನವನ್ನು ಯಾರಿಗಾದರೂ ಕೊಟ್ಟರೆ ಜಾತಕದಲ್ಲಿ ಗುರು ದುರ್ಬಲನಾಗುತ್ತಾನೆ. ಇದರಿಂದ ವ್ಯಕ್ತಿಗೆ ಹಣದ ಕೊರತೆಯಾಗುವ ಜೊತೆಗೆ, ಗುರು ಬಲ ಕಡಿಮೆಯಾಗುತ್ತದೆ. ಜೀವನದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಮೊಸರು (Curd) : ಮೊಸರು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಮನುಷ್ಯನಿಗೆ ಮೊಸರಿನಿಂದ ಸಂತೋಷ ಹಾಗೂ ಸಮೃದ್ಧಿ ಸಿಗುತ್ತದೆ. ಸೂರ್ಯಾಸ್ತದ ಬಳಿಕ ಮೊಸರನ್ನು ಬೇರೆಯವರಿಗೆ ಕೊಟ್ಟರೆ ಅದರಿಂದ ಮನೆಯಲ್ಲಿ ಸಂತೋಷದ ಕೊರತೆ ಅನುಭವಿಸಬೇಕಾಗುತ್ತದೆ. ಸೂರ್ಯಾಸ್ತದ ನಂತರ ಮೊಸರು ದಾನವಾಗಿ ನೀಡಬಾರದು. ದಾನ ಮಾಡಿದರೆ ಶುಕ್ರನಿಂದ ಸಮಸ್ಯೆ ಆಗುತ್ತದೆ.

ಹಾಲು (Milk): ಮನೆಯಲ್ಲಿ ಹಾಲು ಮೊಸರು ಯತೇಚ್ಛವಾಗಿದ್ದರೆ ಅದು ಬೆಳವಣಿಗೆಯ ಸಂಕೇತ. ಹಾಲು ಲಕ್ಷ್ಮೀದೇವಿ ಹಾಗೂ ವಿಷ್ಣುವಿಗೆ ಸಂಬಂಧಿಸಿದ್ದಾಗಿದೆ. ಲಕ್ಷ್ಮೀ ದೇವಿ ಹಾಗೂ ವಿಷ್ಣುವು ಕ್ಷೀರ ಸಾಗರದಲ್ಲಿಯೇ ಇರುತ್ತಾರೆ ಎಂಬ ನಂಬಿಕೆ ಇದೆ. ವಿಶೇಷವಾಗಿ ಸೋಮವಾರ ಮತ್ತು ಶುಕ್ರವಾರದಂದು ಹಾಲನ್ನು ದಾನ ಮಾಡುವುದು ಹೆಚ್ಚು ಫಲದಾಯಕವೆಂದು ಹೇಳಲಾಗುತ್ತದೆ. ಆದರೆ ಅಪ್ಪಿತಪ್ಪಿಯೂ ಸೂರ್ಯಾಸ್ತದ ನಂತರ ಹಾಲು ದಾನ ಮಾಡಬೇಡಿ.
ಸಂಜೆಯ ಹೊತ್ತು ಹಾಲನ್ನು ಮನೆಯಿಂದ ಹೊರಗೆ ಕಳುಹಿಸುವುದರಿಂದ ಲಕ್ಷ್ಮೀ ಹಾಗೂ ವಿಷ್ಣು ಮುನಿಸಿಕೊಳ್ಳುತ್ತಾರೆ. ಇದರಿಂದ ಮನೆಯ ಬೆಳವಣಿಗೆ ಕುಗ್ಗುತ್ತದೆ ಎಂದು ಹೇಳಲಾಗುತ್ತದೆ.

ಈರುಳ್ಳಿ ಹಾಗೂ ಬೆಳ್ಳುಳ್ಳಿ (Garlic and Onions) : ಈರುಳ್ಳಿ ಹಾಗೂ ಬೆಳ್ಳುಳ್ಳಿಯು ಕೇತುವಿಗೆ ಸಂಬಂಧಿಸಿದ್ದಾಗಿದೆ. ಈ ಗ್ರಹವು ವಾಮಾಚಾರ ವಿಚಾರಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ ಸಂಜೆ ಬಳಿಕ ಈರುಳ್ಳಿ ಬೆಳ್ಳುಳ್ಳಿ ಕೊಡುವುದರಿಂದ ಮನೆಗೆ ಕೆಟ್ಟದಾಗುತ್ತದೆ. ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತೆ ಎಂದು ಹೇಳಲಾಗುತ್ತದೆ.

ತುಳಸಿ ಗಿಡ : ತುಳಸಿ ಗಿಡದ ದಾನವನ್ನು ಸೂರ್ಯಾಸ್ತದ ನಂತರ ಮಾಡಬಾರದು. ವಾಸ್ತವವಾಗಿ ಶಾಸ್ತ್ರದ ಪ್ರಕಾರ ಸೂರ್ಯಾಸ್ತದ ನಂತರ ತುಳಸಿಯನ್ನು ಮುಟ್ಟಬಾರದು. ಸೂರ್ಯಾಸ್ತದ ನಂತರ ತುಳಸಿಗೆ ನೀರು ಹಾಕಬಾರದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Thick Curd : ಚಪ್ಪರಿಸಿ ತಿನ್ನುವ ರುಚಿಯಾದ ದಪ್ಪ ಮೊಸರನ್ನು ಈ ರೀತಿ ತಯಾರಿಸಿ

Leave A Reply

Your email address will not be published.