Viral video : ಪಿಸ್ತೂಲ್ ಪ್ರೇಮಿಯ ಹುಟ್ಟುಹಬ್ಬ!! ಸ್ಪೆಷಲ್ ಗೆಸ್ಟ್ ಯಾರು ಗೊತ್ತಾ!!

Cutting cake by pistol : ಆಧುನಿಕ ಯುಗದಲ್ಲಿ ಹಬ್ಬ ಹರಿದಿನ, ಹುಟ್ಟುಹಬ್ಬ, ಮರಣ ದಿನ, ಮದುವೆ (marriage )ಮುಂತಾದ ಆಚರಣೆ ಎಲ್ಲವೂ ಡಿಫರೆಂಟ್ ಸ್ಟೈಲ್ ಆಗಿಬಿಟ್ಟಿದೆ. ಅಂದರೆ ಆಚರಣೆ ಅನ್ನುವುದು ಶೋಕಿ ರೂಪ ಪಡೆದುಕೊಂಡಿದೆ. ಹಾಗೆಯೇ ಬರ್ತಡೇ ಸೆಲೆಬ್ರೆಷನ್ (celebration) ಮಾಡಿ ಇಲ್ಲೊಬ್ಬ ಹುಟ್ಟು ಹಬ್ಬದ ದಿನದಂದೇ ಪೋಲಿಸರ ಕೈಸೆರೆ ಆಗಿದ್ದಾನೆ.

 

ವರ್ಷಕ್ಕೆ ಒಮ್ಮೆ ಬರುವ ಹುಟ್ಟು ಹಬ್ಬ (birthday )ಎಂದರೆ ಸಂಭ್ರಮವೇ ಹೌದು. ಆದರೆ ಯಾವುದೇ ಸಂಭ್ರಮವಾದರೂ ಮಿತಿ ಮೀರುವುವಂತಿರಬಾರದು. ಸಮಾಜಕ್ಕೆ ಕಾನೂನಿಗೆ ವಿರುದ್ಧವಾಗಿರಬಾರದು ಹಾಗೆಯೇ ಕಾನೂನಿಗೆ ವಿರುದ್ಧವಾಗಿರಬಾರದು ಹಾಗೆಯೇ ಆ ಸಂಭ್ರಮದಿಂದ ಜೀವಕ್ಕೆ ಅಥವಾ ಜೀವನಕ್ಕೆ ಕುತ್ತು ತರುವಂತಿರಬಾರದು .

ಸದ್ಯ ಇಲ್ಲೊಬ್ಬ ವ್ಯಕ್ತಿ ಹುಟ್ಟುಹಬ್ಬಕ್ಕೆ ಶೋಕಿ ಮಾಡುವ ಸಲುವಾಗಿ ಪಿಸ್ತೂಲಿನಿಂದ ಕೇಕ್ ಕಟ್ (Cutting cake by pistol) ಮಾಡಿ ಸಂಭ್ರಮಿಸಿದ್ದಾನೆ. ಆತ ಸಂಭ್ರಮದ ಗುಂಗಲ್ಲಿ ಕಾನೂನಿನ ಚೌಕಟ್ಟನ್ನು ಮರೆತ ಹಾಗಿದೆ . ಅನಗತ್ಯ ಪಿಸ್ತೂಲ್ ಬಳಸುವುದು ಕಾನೂನು ಬಾಹಿರ ಎಂಬ ನಿಯಮವೇ ಇರುವಾಗ ಈತ ಪೊಲೀಸರ ಅತಿಥಿ ಆಗುವುದು ತಪ್ಪೇನಲ್ಲಾ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ(Viral video).

ಈ ಹಿನ್ನೆಲೆಯಲ್ಲಿ ಪಿಸ್ತೂಲಿನಿಂದ ಕೇಕ್ ಕತ್ತರಿಸಿದ ವ್ಯಕ್ತಿಯನ್ನು ಹಾಗೂ ಸಂಗಡಿಗರನ್ನು ದೆಹಲಿ ಪೋಲಿಸ್ ಬಂಧಿಸಿದ್ದಾರೆ. ಪ್ರಕರಣ ಸಂಬಂಧ 315 ಬೋರ್ ಕಂಟ್ರಿಮೇಡ್ ಪಿಸ್ತೂಲ್ ವಶಪಡಿಸಿಕೊಂಡ ಪೋಲಿಸರು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಒಟ್ಟಿನಲ್ಲಿ ಇಂತಹ ಹುಚ್ಚು ಶೋಕಿಗಳಿಂದ ಅನಾಹುತಗಳು ಆಗುವ ಸಾಧ್ಯತೆ ಹೆಚ್ಚು. ಇನ್ನಾದರೂ ಇಂತಹ ಹುಚ್ಚು ವರ್ತನೆಗೆ ಬ್ರೇಕ್ ಬೀಳಬೇಕಿದೆ.

Leave A Reply

Your email address will not be published.