H D Kumaraswamy : ಯಶವಂತಪುರ ಪಂಚರತ್ನ ಯಾತ್ರೆಯಲ್ಲೇ ಕುಮಾರಸ್ವಾಮಿಗೆ ಮುತ್ತಿಟ್ಟ ಮಹಿಳೆ

Share the Article

H D Kumaraswamy : ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ʻಪಂಚರತ್ನ ಯಾತ್ರೆ ವೇಳೆ ಹೆಚ್‌.ಡಿ. ಕುಮಾರಸ್ವಾಮಿಗೆ (H D Kumaraswamy )ಮಹಿಳೆಯೊಬ್ಬರು ಕಿಸ್‌ ಮಾಡಿದ ಘಟನೆಯೊಂದು ಬೆಳಕಿಗೆ ಬಂದಿದೆ.

ಯಶವಂತಪುರ ಕ್ಷೇತ್ರದ ಮಾರುತಿ ನಗರದಲ್ಲಿ ಜೆಡಿಎಸ್‌ ಪಂಚರತ್ನ ಯಾತ್ರೆಯಲ್ಲಿ ವೇಳೆ ತೆರೆದ ವಾಹನದಲ್ಲಿ ಮಾಜಿ ಸಿಎಂ ಹೆಚ್‌ಡಿ ಕುಮಾರ ಸ್ವಾಮಿಯನ್ನು ನೋಡಿ ಅಭಿಮಾನದಿಂದ ಮಹಿಳೆಯೊಬ್ಬಳು ಬಂದು ಸಿಹಿ ಮುತ್ತುಕೊಟ್ಟಿದ್ದಾಳೆ.

ಮುಂದಿನ ಚುನಾವಣೆಗೆ ಮತದಾರರ ಸೆಳಯೋದರ ನಿಟ್ಟಿನಲ್ಲಿ ಯಶವಂತಪುರ ಕ್ಷೇತ್ರದ ಮಾರುತಿ ನಗರದಲ್ಲಿ ಜೆಡಿಎಸ್‌ ಪಂಚರತ್ನ ಯಾತ್ರೆ ನಡೆಸಲಾಗಿತ್ತು, ಈ ವೇಳೆ ತೆರೆದ ವಾಹನದಲ್ಲಿ ಇದ್ದ ಹೆಚ್‌ಡಿಕೆ ನಿಂತಿದ್ದು. ಆಗ ಏಕಾಏಕಿ ಕುಮಾರಸ್ವಾಮಿ ನೋಡಲು ಬಂದ ತೆನೆ ಕಾರ್ಯಕರ್ತೆ ಮುತ್ತುಕೊಟ್ಟ ಹಾರ ಹಾಕಿ ಹೋಗಿದ್ದಾಳೆ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಭಾರೀ ಸದ್ದು ಮಾಡುತ್ತಿದೆ ಇದೀಗ ಬಂದ ಸುದ್ದಿಯಾಗಿದ್ದು ಪಂಚರತ್ನ ರಾತ್ರೆಯಲ್ಲಿ ಭಾಗಿಯಾಗಿದ್ದ ಜನರಿಗೆ ಶಾಕ್‌ ಆಗಿದೆ. ಅಷ್ಟೇ ಅಲ್ಲದೇ ಆಕೆ ಕುಮಾರಣ್ಣನನ್ನು ನೋಡಿ ಖುಷಿಗೆ ಚುಂಬಿಸಿದ್ದಾಳೆ ಎಂದು ಹೇಳಲಾಗುತ್ತಿದೆ. ಆಕೆಯ ಧೈರ್ಯಕ್ಕೆ ಮೆಚ್ಚಬೇಕೆಂದು ಅಲ್ಲಿ ಸೇರಿದ್ದ ಜನರೆಲ್ಲ ಮಾತನಾಡುವಂತಾಗಿದೆ.

Leave A Reply