Car Sales: ಕಾರು ಮಾರಾಟದಲ್ಲಿ ಯಾರಿಗೆಷ್ಟು ಲಾಭ? ಇಲ್ಲಿದೆ ಮಾಹಿತಿ

Car Sale profits: ಕಂಪನಿ (company) ಬಿಡುಗಡೆ ಮಾಡಿದ ಕಾರು (car) ಕೊಳ್ಳಲು ಜನರು ಮುಗಿಬೀಳುತ್ತಾರೆ. ಕೆಲವೊಂದು ಕಂಪನಿಯ ಕಾರುಗಳು ಭರ್ಜರಿ ಮಾರಾಟ ಕಾಣುತ್ತದೆ. ಹಾಗಾದ್ರೆ ಹೊಸ ಕಾರು ಮಾರಾಟದಲ್ಲಿ (Car Sale profits) ಯಾರಿಗೆಷ್ಟು ಲಾಭ? ಹೆಚ್ಚಿನ ಲಾಭ ಯಾರಿಗೆ ಸಿಗುತ್ತದೆ? ಗ್ರಾಹಕರು ವಾಹನ ಖರೀದಿಗೆ ಎಷ್ಟು ಮೊತ್ತ ಪಾವತಿಸುತ್ತಾರೆ? ಆ ಹಣ (money) ಎಲ್ಲೆಲ್ಲಿ ಹಂಚಿಕೆಯಾಗುತ್ತದೆ? ಮಾಹಿತಿ ಇಲ್ಲಿದೆ.

 

ಗ್ರಾಹಕರು ವಾಹನ ಖರೀದಿಸಿ, ನೀಡುವ ಮೊತ್ತವನ್ನು ತಯಾರಕರು, ಅಧಿಕೃತ ಡೀಲರ್ ಮತ್ತು ಸರ್ಕಾರ (government) ಹೀಗೆ ಮೂರು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. ನೀವು ಟೊಯೊಟಾ ಫಾರ್ಚುನರ್ (Toyota fortunar) ಅನ್ನು ಖರೀದಿಸಿದರೆ, ಇದರ ಎಕ್ಸ್ ಶೋ ರೂಂ ಬೆಲೆ 39.28 ಲಕ್ಷ ರೂ. ಇದೆ. ಇಲ್ಲಿ ಗ್ರಾಹಕರು ಎಲ್ಲಾ ತೆರಿಗೆಗಳು ಮತ್ತು ವಿಮಾ ವೆಚ್ಚಗಳನ್ನು ಒಳಗೊಂಡಂತೆ ಟೊಯೊಟಾ ಫಾರ್ಚುನರ್‌ಗಾಗಿ ರೂ. 47.35 ಲಕ್ಷದ ಆನ್-ರೋಡ್ ಬೆಲೆಯನ್ನು ಪಾವತಿಸುತ್ತಾರೆ. ಆದರೆ ವಾಹನವನ್ನು ತಯಾರಿಸಿದ ಟೊಯೊಟಾ ಕಂಪನಿ ಕೇವಲ 35,000 ದಿಂದ 40,000 ರೂ. ನಷ್ಟು ಲಾಭ ಮಾತ್ರ ಪಡೆಯುತ್ತದೆ. ಟೊಯೊಟಾ ಕಾರು ತಯಾರಕರು, ಡೀಲರ್‌ಶಿಪ್‌ನಿಂದ ಮಾರಾಟವಾದ ಕಾರಿನ ಮೇಲೆ ಶೇ 2 ರಿಂದ 2.5 ರಷ್ಟು ಮಾರ್ಜಿನ್ ಗಳಿಸುತ್ತದೆ.

ಫಾರ್ಚುನರ್ ಕಾರಿಗೆ ಯಾವುದೇ ರಿಯಾಯಿತಿಗಳನ್ನು ನೀಡದಿದ್ದರೆ ಡೀಲರ್ ಔಟ್‌ಲೆಟ್ ರೂ. 1 ಲಕ್ಷದವರೆಗೆ ಮಾರ್ಜಿನ್ ಗಳಿಸಬಹುದು. ಇದರ ಮಾರಾಟದಲ್ಲಿ ಹೆಚ್ಚಿನ ಮೊತ್ತವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೋಗುತ್ತದೆ. ಪ್ರತಿ ಫಾರ್ಚುನರ್ ಮಾರಾಟದ ಮೇಲೆ ಸರ್ಕಾರಗಳು ಸುಮಾರು 18 ಲಕ್ಷ ರೂ. ಗಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮೊತ್ತವು ಶೇ 28 GST ಮತ್ತು ಶೇ 22 GST ಪರಿಹಾರ ಸೆಸ್ ಎರಡು GST ಘಟಕಗಳನ್ನು ಒಳಗೊಂಡಿದೆ.

ಫಾರ್ಚುನರ್ ಕ್ರಮವಾಗಿ ರೂ. 5.72 ಲಕ್ಷ ಮತ್ತು ರೂ. 7.28 ಲಕ್ಷ ನೋಂದಣಿ, ರಸ್ತೆ ತೆರಿಗೆ (road tax), ಗ್ರೀನ್ ಸೆಸ್ ಮತ್ತು ಫಾಸ್ಟ್ ಟ್ಯಾಗ್ ಸೇರಿದಂತೆ ಸರ್ಕಾರದ ಇತರ ಹಲವು ಶುಲ್ಕಗಳನ್ನು ಪಾವತಿಸಬೇಕು. ಈ ಎಲ್ಲಾ ವೆಚ್ಚಗಳು ಸೇರಿ ಸರ್ಕಾರಕ್ಕೆ ಸುಮಾರು 18 ಲಕ್ಷ ರೂ. ಬರುತ್ತದೆ. ಸದ್ಯ ಗ್ರಾಹಕರು ವಾಹನಗಳಿಗೆ ನೀಡುವ ಬೆಲೆಯ ಹೆಚ್ಚಿನ, ಮುಖ್ಯವಾದ ಪಾಲು ಡೀಲರ್ ಹಾಗೂ ಸರ್ಕಾರಗಳಿಗೆ ಹೋಗುತ್ತದೆ ಎಂದು ಹೇಳಲಾಗಿದೆ.

Leave A Reply

Your email address will not be published.