EPFO Higher Pension: ಹೆಚ್ಚಿನ ಪಿಂಚಣಿ ಪಡೆಯಲು ಇವರು ಕೂಡಾ ಅರ್ಹರು!

EPFO Higher Pension : ಪಿಂಚಣಿ ಯೋಜನೆಯಾಗಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಯನ್ನು (Employees provident fund organisation-EPFO) 1995 ರಲ್ಲಿ ಆರಂಭಿಸಲಾಗಿದ್ದು ಇದರ ಅಡಿಯಲ್ಲಿ ಪಿಎಫ್ ಹೊಂದಿರುವವರಿಗೆ ಪಿಂಚಣಿ ಪಡೆಯುವ ಅವಕಾಶ ನೀಡಲಾಗಿದೆ. ಅದಲ್ಲದೆ ಪಿಎಫ್ ಖಾತೆಯನ್ನ ಮೇಲ್ವಿಚಾರಣೆ ಮಾಡುವ ಸಂಸ್ಥೆಯಾದ ಇಪಿಎಫ್‌ಒ (EPFO Higher Pension), ಅಗತ್ಯವಿದ್ದರೆ ಹಣವನ್ನ ಹಿಂಪಡೆಯಲು ಉದ್ಯೋಗಿಗಳಿಗೆ ಸೌಲಭ್ಯವನ್ನ ಒದಗಿಸುತ್ತದೆ.

 

ಅದಲ್ಲದೆ ನೌಕರರ ಭವಿಷ್ಯನಿಧಿ ಸಂಘಟನೆಯು (ಇಪಿಎಫ್‌ಒ) ತನ್ನ ಸದಸ್ಯರಿಗೆ ನೀಡುವ ಪಿಂಚಣಿಯನ್ನು 58 ವರ್ಷ ವಯಸ್ಸು ಪೂರ್ಣಗೊಂಡ ತಕ್ಷಣವೇ ಪಡೆಯಬೇಕು ಕಡ್ಡಾಯ ಇಲ್ಲ. ಬದಲಿಗೆ, ಸದಸ್ಯರು 59 ವರ್ಷ ವಯಸ್ಸು ಪೂರ್ಣಗೊಂಡ ನಂತರದಲ್ಲಿ ಅಥವಾ 60 ವರ್ಷ ಪೂರ್ಣಗೊಂಡ ನಂತರದಲ್ಲಿಯೂ ಅದನ್ನು ಪಡೆಯಬಹುದು.

ಆದರೆ 59 ವರ್ಷ ವಯಸ್ಸು ಪೂರ್ಣಗೊಂಡ ನಂತರದಲ್ಲಿ ಪಿಂಚಣಿ ಪಡೆಯುವವರಿಗೆ ಸಿಗುವ ಮೊತ್ತವು ಮೂಲ ಪಿಂಚಣಿ ಮೊತ್ತಕ್ಕಿಂತ ಶೇಕಡ 4ರಷ್ಟು ಹೆಚ್ಚಿರುತ್ತದೆ. 60 ವರ್ಷ ಪೂರ್ಣಗೊಂಡ ನಂತರ ಪಿಂಚಣಿ ಪಡೆಯಲು ತೀರ್ಮಾನಿಸಿದರೆ ಸಿಗುವ ಮೊತ್ತವು ಮೂಲ ಪಿಂಚಣಿ ಮೊತ್ತಕ್ಕಿಂತ ಶೇ 8.16ರಷ್ಟು ಹೆಚ್ಚಾಗಿರುತ್ತದೆ. ಈ ವಿಚಾರವಾಗಿ ಇಪಿಎಫ್‌ಒ 2016ರಲ್ಲಿಯೇ ಆದೇಶ ಹೊರಡಿಸಿದೆ.

2016ರ ಆದೇಶದ ಅನ್ವಯ, 58 ವರ್ಷ ಪೂರ್ಣಗೊಂಡ ಹಾಗೂ ಪಿಂಚಣಿಗೆ ಅರ್ಹವಾಗಿರುವ ಪಿ.ಎಫ್. ಸದಸ್ಯರು ತಮಗೆ ಪಿಂಚಣಿಯು ಒಂದು ವರ್ಷ ಅಥವಾ ಎರಡು ವರ್ಷಗಳ ನಂತರವೇ ಸಿಗಲಿ (ಅಂದರೆ, 59 ವರ್ಷ ವಯಸ್ಸಾದಾಗ) ಎಂದು ಬಯಸಿದರೆ,
ಅದಕ್ಕೆ ಸಂಬಂಧಿಸಿದಂತೆ ನಿಗದಿತ ನಮೂನೆಯಲ್ಲಿ ಪಿ.ಎಫ್. ಕಚೇರಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈಗಾಗಲೇ ಹೆಚ್ಚಿನ ಪಿಂಚಣಿ ಆಯ್ಕೆ ಬಯಸಿ ಅರ್ಜಿ ಸಲ್ಲಿಸುತ್ತಿರುವವರಲ್ಲಿ ಈಗಷ್ಟೇ 58 ವರ್ಷ ವಯಸ್ಸು ಪೂರ್ಣಗೊಂಡವರು ಕೂಡ ಇದ್ದಾರೆ.

ಸದ್ಯ ಸುಪ್ರೀಂ ಕೋರ್ಟ್ 2022ರಲ್ಲಿ ನೀಡಿದ ತೀರ್ಪಿಗೆ ಅನುಗುಣವಾಗಿ ಇಪಿಎಫ್‌ಒ ತನ್ನ ಸದಸ್ಯರಿಗೆ ಹೆಚ್ಚಿನ ಪಿಂಚಣಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಹೆಚ್ಚಿನ ಪಿಂಚಣಿಗೆ ಅರ್ಜಿ ಸಲ್ಲಿಸಲು ಮೇ 3ರವರೆಗೆ ಅವಕಾಶ ನೀಡಲಾಗಿದೆ.

Leave A Reply

Your email address will not be published.