Open hotel room : ಅಬ್ಬಾಬ್ಬಾ ಇದೆಂತಾ ಹೋಟೆಲ್! ರೂಮ್​ ಗಳಿಗೆ ಗೋಡೆ, ಬಾಗಿಲುಗಳೇನೂ ಇಲ್ಲ. ಬಿಲ್ ಕೇಳಿದ್ರೆ ಶಾಕ್ ಆಗುತ್ತೆ, ಏನಿದರ ವಿಶೇಷ!

Open hotel room : ಹೊರಗಡೆ ಎಲ್ಲಾದರೂ ಹೋದಂತ ಸಂದರ್ಭದಲ್ಲಿ ಉಳಿದುಕೊಳ್ಳಲು ಹೋಟೆಲ್(Hotel) ಮೊರೆ ಹೋಗೋದು ಸಾಮಾನ್ಯ. ಈಗಂತೂ ಎಲ್ಲೆಂದರಲ್ಲಿ ಹೋಟೆಲ್ ಗಳು ಸಿಗುತ್ತವೆ. ಅದೂ ಕೂಡ 100ರೂ ಗಳಿಂದ ಆರಂಭವಾಗಿ ಸಾವಿರ, ಲಕ್ಷ ರೂಪಾಯಿಗಳಷ್ಟು ಪಾವತಿಸುವ 5ಸ್ಟಾರ್, 7ಸ್ಟಾರ್ ಹೋಟೆಲ್ ಗಳು ಇಂದು ಎಲ್ಲೆಂದರಲ್ಲಿ ತಲೆ ಎತ್ತಿವೆ. ನಾವು ಎಂತಾ ಹೋಟೆಲಿಗೆ ಹೋದರೂ ಮೊದಲು ಒಳಗಡೆ ಎಲ್ಲಾ ಸೌಲಭ್ಯಗಳು ವ್ಯವಸ್ಥಿತವಾಗಿವೆಯಾ? ಕಿಟಕಿ, ಬಾಗಿಲು ಸರಿ ಇದ್ಯಾ? ನೀರು ಸರಿ ಬರ್ತಾ ಇದ್ಯಾ ಅಂತೆಲ್ಲಾ ಹಲವಾರು ಬಾರಿ ಚೆಕ್​ ಮಾಡುತ್ತೇವೆ. ಆದರೆ ಇಲ್ಲೊಂದು ಐಷಾರಾಮಿ ಹೋಟೆಲಿಗೇನಾದರೂ ನೀವು ಹೋದರೆ ಹೀಗೆಲ್ಲಾ ಚೆಕ್ ಮಾಡುವ ಪ್ರಮೇಯವೇ (Open hotel room) ಬರುವುದಿಲ್ಲ. ಯಾಕೆಂದರೆ ಈ ಹೋಟೆಲ್ ಗೆ ಕಿಟಕಿ, ಬಾಗಿಲು ಬಿಡಿ ಗೋಡೆ ಕೂಡ ಇಲ್ಲ.

ಹೌದು, ಜಗತ್ತಿನಲ್ಲಿ ಅದೆಷ್ಟೋ ಒಂದನ್ನೊಂದು ಮೀರಿಸುವ ಪಂಚತಾರಾ ಹೋಟೆಲ್‌ಗಳಿವೆ, ತ್ರಿ ಸ್ಟಾರ್ ಹೋಟೆಲ್‌ಗಳಿವೆ ಆದರೆ ಪ್ರಕೃತಿಯ ನಡುವೆಯೇ ಯಾವುದೇ ಕಟ್ಟಡಗಳ ಬಂಧನವಿಲ್ಲದೆ ಮುಕ್ತವಾಗಿರುವ ಹೋಟೆಲ್ ಕೊಠಡಿಗಳನ್ನೆಲ್ಲಾದರೂ ನೋಡಿರುವಿರಾ? ಓಪನ್ ಏರ್ ಹೋಟೆಲ್ ಎಂದೇ ಕರೆಯಲಾದ ಸ್ವಿಡ್ಜರ್‌ಲ್ಯಾಂಡ್‌ನ(Switzerland) ನಲ್ ಸ್ಟರ್ನ್, ಗೋಡೆ ಹಾಗೂ ತಾರಸಿಗಳಿಂದ ಮುಕ್ತವಾಗಿರುವ ಹೋಟೆಲ್ ಕೊಠಡಿಗಳನ್ನು ತನ್ನ ಅತಿಥಿಗಳಿಗಾಗಿ ಒದಗಿಸುತ್ತಿದೆ.

ಅಂದಹಾಗೆ ಯಾವುದೇ ಛಾವಣಿ, ಗೋಡೆ ಹಾಗೂ ಸ್ನಾನ ಗೃಹ ಇಲ್ಲದಿರುವ ಈ ಹೋಟೆಲಿನಲ್ಲಿ ಒಂದು ಮಂಚ, ಹಾಸಿಗೆ ಮಾತ್ರ ಇಡಲಾಗಿದೆ. ಹಾಗೂ ಪಕ್ಕದಲ್ಲಿ ಎರಡು ದೀಪಗಳಿರುತ್ತವೆ. ಸಾರ್ವಜನಿಕ ಶೌಚಾಲಯ ಪರ್ವತದ ಕೆಳಗೆ ಐದು ನಿಮಿಷಗಳ ಕಾಲು ದಾರಿಯಲ್ಲಿ ಸಿಗುತ್ತದೆ. ಯಾವುದೇ ತಾರಸಿ, ಗೋಡೆಗಳ ಬಂಧನವಿಲ್ಲದೆ ಪ್ರಕೃತಿಯ ನಡುವೆ ಮುಕ್ತವಾಗಿರುವ ಈ ಹೋಟೆಲ್ ಗಳಿಗೆ ಸುತ್ತಲಿನ ಪರ್ವತಗಳೇ ರಕ್ಷಣೆಗಳು. ಪ್ರಕೃತಿಯ ನಡುವಿನ ಈ ಹೋಟೆಲ್ ಗೆ ಅತಿಥಿಗಳ ದಂಡೇ ಬರುತ್ತಿದೆ. ಸಮುದ್ರ ಮಟ್ಟದಿಂದ 6,463 ಅಡಿ ಎತ್ತರದಲ್ಲಿರುವ ನಲ್ ಸ್ಟರ್ನ್, ಸ್ವಿಸ್ ಆಲ್ಪ್ಸ್ ಮಧ್ಯದಲ್ಲಿದೆ. ಇಲ್ಲಿ ಒಂದು ರಾತ್ರಿಗೆ ತಗುಲುವ ವೆಚ್ಚ ಬರೋಬ್ಬರಿ 210 ಡಾಲರ್ ಗಳು. ಅಂದರೆ ಬರೋಬ್ಬರಿ 17ಸಾವಿರ!

ಇನ್ನು ಹೋಟೆಲ್‌ನ ಸಹ ಸ್ಥಾಪಕರಾದ ಡೇನಿಯಲ್ ಚಾರ್‌ಬೊನಿರ್ ಈ ಹೋಟೆಲ್‌ನ ವಿಶೇಷತೆಯ ಬಗ್ಗೆ ತಿಳಿಸಿದ್ದು, ಇಲ್ಲಿ ತಂಗುವವರು ಹಾಗೂ ಅವರ ಅನುಭವ ನಮ್ಮ ಹೋಟೆಲ್‌ನ ಸ್ಟಾರ್ ಕೌಂಟ್‌ಗಳಾಗಿವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. 2016 ರಲ್ಲಿ ನಲ್ ಸ್ಟರ್ನ್ ಹೋಟೆಲ್ ರೂಪುಗೊಂಡಿತು. ಅಂತೆಯೇ 2017 ರ ಕೊನೆಯಲ್ಲಿ ಬುಕಿಂಗ್‌ ಮಾಡುವುದನ್ನೂ ಪ್ರಾರಂಭಿಸಲಾಯಿತು ಎಂದಿದ್ದಾರೆ.

ಅಲ್ಲದೆ ಈ ಹೋಟೆಲ್‌ಗೆ ಎಷ್ಟು ಬೇಡಿಕೆ ಇದೆ ಎಂದರೆ ಹೋಟೆಲ್ ಸಿಬ್ಬಂದಿ ವರ್ಗ ಸ್ವಿಡ್ಜರ್‌ಲ್ಯಾಂಡ್‌ನ ಬೇರೆ ಬೇರೆ ಜನಪ್ರಿಯ ಪ್ರದೇಶಗಳಲ್ಲಿ ಹೋಟೆಲ್‌ನ ಮುಕ್ತ ಕೊಠಡಿಗಳನ್ನು ನಿರ್ಮಿಸಲು ಟೂರಿಸ್ಟ್ ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅಂದಹಾಗೆ ಇತರ ಹೋಟೆಲ್‌ಗಳಂತೆಯೇ ಇಲ್ಲಿ ಕೂಡ ರೂಮ್ ಸರ್ವೀಸ್ ಇರುತ್ತದೆ. ರೂಮ್ ಸರ್ವೀಸ್‌ಗಾಗಿ ಸಿಬ್ಬಂದಿ ಕೂಡ ಇದ್ದು ಹತ್ತಿರದಲ್ಲಿರುವ ಕ್ಯಾಬಿನ್‌ನಲ್ಲಿಯೇ ಅವರಿರುತ್ತಾರೆ. ಅಥಿಗಳಿಗೆ ಬೇಕಾಗುವ ರಾತ್ರಿಯೂಟ, ಉಪಹಾರ ಮಧ್ಯಾಹ್ನದೂಟ ಸ್ನ್ಯಾಕ್ಸ್ ಎಲ್ಲವನ್ನೂ ಇವರು ಸಿದ್ಧಪಡಿಸುತ್ತಾರೆ. ಇನ್ನು ವಾತಾವರಣ ಕೆಟ್ಟದಾಗಿದ್ದರೆ ಅತಿಥಿಗಳು ಕೊನೆಯ ನಿಮಷಗಳಲ್ಲಿ ತಮ್ಮ ರಿಸರ್ವೇಶನ್ ಕ್ಯಾನ್ಸಲ್ ಮಾಡಿಕೊಳ್ಳುವ ಅವಕಾಶ ಕೂಡ ಇದೆ ಎಂದು ಚಾರ್ಬೊನಿಯರ್ ತಿಳಿಸುತ್ತಾರೆ.

ಇದರೊಂದಿಗೆ ಹೋಟೆಲ್ ಛಾವಣಿ ರಹಿತವಾಗಿರುವುದರಿಂದ ಇಲ್ಲಿ ತಂಗಿರುವವರು ಮಲಗಿಕೊಂಡೇ ಆಗಸದ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು ಹಾಗೆಯೇ ಪರ್ವತಗಳ ಸುಂದರ ದೃಶ್ಯಾವಳಿ ಆಕಾಶದಲ್ಲಿ ಹೊಳೆಯುವ ನಕ್ಷತ್ರಗಳ ಸುಂದರತೆಯ ಆಹ್ಲಾದತೆಯನ್ನು ಪಡೆದುಕೊಳ್ಳಬಹುದು ಒಟ್ಟಿನಲ್ಲಿ ಈ ಹೋಟೆಲ್‌ನಲ್ಲಿ ತಂಗುವವರಿಗೆ ಸ್ವಿಟ್ಜರ್ಲೆಂಡೇ ಹೋಟೆಲ್‌ ಆಗುತ್ತದೆ ಎಂದು ಚಾರ್ಬೊನಿಯರ್ ತಿಳಿಸುತ್ತಾರೆ.

ಇದನ್ನೂ ಓದಿ: Born in April : ಏಪ್ರಿಲ್​ನಲ್ಲಿ ಹುಟ್ಟಿದವರ ರಹಸ್ಯ ಹೀಗಂತೆ! ಜ್ಯೋತಿಷ್ಯ ಹೀಗೆ ಹೇಳುತ್ತೆ

Leave A Reply

Your email address will not be published.