Marriage Viral News : ಮದುವೆ ಸಂದರ್ಭ ತನ್ನ ಹೆಂಡತಿಯ ಕೋಪ ತಣಿಸಲು ವರ ಈ ರೀತಿ ಮಾಡುವುದಾ?
Marriage Viral News : ಫೋಟೋ (Photo)ತೆಗೆಯುವ ಕ್ರೇಜ್ ಸಹಜವಾಗಿ ಎಲ್ಲರಿಗೂ ಇರುವಂತದ್ದೇ. ಬೇರೆ ಊರಿಗೆ ಹೋದಾಗ, ಪರಿಸರದ ನಡುವೆ, ಮದುವೆ (Marriage), ಎಂಗೇಜ್ಮೆಂಟ್(Engagement), ನಾಮಕರಣ ಹೀಗೆ ಪ್ರತಿ ಸುಮಧುರ ಕ್ಷಣವನ್ನು ನೆನಪಿನಲ್ಲಿ ಹಚ್ಚ ಹಸಿರಾಗಿ ಉಳಿಸಲು ಫೋಟೋಶೂಟ್ ಮಾಡೋದು ಕಾಮನ್.
ಪ್ರೀ – ವೆಡ್ಡಿಂಗ್(Pre -Wedding), ವೆಡ್ಡಿಂಗ್(Wedding), ಎಂಗೇಜ್ಮೆಂಟ್ ಸಮಯದಲ್ಲಿ ಫೋಟೊ ಶೂಟ್ ಮಾಡುವಾಗ ಎಲ್ಲರೂ ವಿಶೇಷ ಗಮನ ಕೊಡುವುದು ಅಲ್ಲಿನ ಪರಿಸರ, ಕಣ್ಮನ ಸೆಳೆಯುವ ಪ್ರಕೃತಿಯ ಮಡಿಲಲ್ಲಿ, ಈಜುಕೊಳ, ಇಲ್ಲವೇ ಬೀಚ್ , ರೆಸಾರ್ಟ್ , ಹೀಗೆ ವಧು – ವರರ ಅಭಿರುಚಿಗೆ ತಕ್ಕಂತೆ ಕ್ಯಾಮರಾ (Camera)ಕಣ್ಣಲ್ಲಿ ಫೋಟೋ ಕ್ಲಿಕ್ಕಿಸುವ ಟ್ರೆಂಡ್ ಈಗ ಜೋರಾಗಿ ನಡೆಯುತ್ತಿದೆ. ಮದುವೆ (Marriage)ಅನ್ನುವಂತಹದ್ದು ವಧು ವರರ ಪಾಲಿಗೆ ಸ್ಪೆಷಲ್ ಡೇ. ಆ ದಿನದ ಪ್ರತಿ ಕ್ಷಣವನ್ನು ವಧು – ವರರು ಎಂಜಾಯ್ ಮಾಡುತ್ತಾ ಪ್ರತಿ ಸುಂದರ ಸುಮಧುರ ಅನುಭವವನ್ನು ಮೆಲುಕು ಹಾಕುತ್ತಾ ಕ್ಯಾಮರಾ ಕಣ್ಣಲ್ಲಿ ಸೆರೆಯಾವುದನ್ನು ನೋಡುವುದೇ ಕಣ್ಣಿಗೆ ಹಬ್ಬ.
ಮದುವೆ ಎಂದ ಮೇಲೆ ಫೋಟೋ ಶೂಟ್ ಮಾಡದೇ ಇದ್ದರೆ ಏನು ಚೆಂದ ಹೇಳಿ!! ಆದರೆ, ಫೋಟೋಗ್ರಾಫರ್ (Photo grapher) ಇಲ್ಲದೆ ಫೋಟೋ, ವೀಡಿಯೋ(Video) ಗಳನ್ನು ಶೂಟ್ ಮಾಡೋದು ಕೊಂಚ ಕಷ್ಟ ಎಂದೆನಿಸುವುದು ಸುಳ್ಳಲ್ಲ. ಆದರೆ, ಪರಿಣಿತ ಛಾಯಾಗ್ರಾಹಕ (Photographer) ರಿದ್ದರೆ ಫೋಟೋ ವಿಡಿಯೋ ಮಾಡೋದು ಕಷ್ಟವಾಗದು. ಸದ್ಯ, ಮುನಿಸಿಕೊಂಡ ವಧುವಿನ ಮನವೊಲಿಸಲು ವರನೆ ಕ್ಯಾಮರಾಮೆನ್ ಆದ (Wedding Photographer Groom Takes Pictures Of His Own Bride)ಅಪರೂಪದ ಘಟನೆ ವರದಿಯಾಗಿದ್ದು, ಸದ್ಯ ಈ ಸುದ್ದಿಯ(Viral Post) ವೀಡಿಯೋ ತುಣುಕುಗಳು (Marriage Viral News)ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಮದುವೆ ಸಮಾರಂಭದಲ್ಲಿ ಮುಳುಗಿದ್ದ ನವ ಜೋಡಿಯ ಮುಖದಲ್ಲಿ ಖುಷಿ, ಸಂತೋಷ ದುಪ್ಪಟ್ಟಾಗೋದು ಸಹಜ. ಆದರೆ, ಮದುವೆ ಸಮಾರಂಭದಲ್ಲಿ ಫೋಟೋಗ್ರಾಫರ್ ಒಬ್ಬ ವಧುವಿನ ಫೋಟೋ ಶೂಟ್ ಚೆನ್ನಾಗಿ ಮಾಡುತ್ತಿಲ್ಲ ಎಂದು ವಧು(Bride) ಕೋಪ ಮಾಡ್ಕೊಂಡು ಕೂತಿದ್ದನ್ನು ನೋಡಿ ವರ(Groom) ತಾನೇ ಕ್ಯಾಮೆರಾ ಹಿಡಿದು ವಧುವಿನ ಫೋಟೊ ಕ್ಲಿಕ್ಕಿಸಲು ತೊಡಗುತ್ತಾನೆ. ಸದ್ಯ, ಈ ವೀಡಿಯೋ(Video) ಇನ್ಸ್ತಾ ಗ್ರಾಂ (Instagram) ನಲ್ಲಿ ವೈರಲ್ ಆಗಿ ಸಂಚಲನ ಮೂಡಿಸಿದೆ.
ಈ ವೀಡಿಯೋ ಮಾಡಿದ ವರನ ಹೆಸರು ಅಯಾನ್ ಸೇನ್ ಎಂದಾಗಿದ್ದು, ಇನ್ನೂ ವಧುನಿನ ಹೆಸರು ಪ್ರಿಯಾ ಎಂದು ತಿಳಿದುಬಂದಿದೆ. ಒಂದು ಕೈನಲ್ಲಿ ಮೊಬೈಲ್ ಹಿಡಿದು, ಇನ್ನೊಂದು ಕೈನಲ್ಲಿ ಕ್ಯಾಮರಾ ಹಿಡಿದುಕೊಂಡು ವರ, ಫೋಟೋ ಕ್ಲಿಕ್ಕಿಸುವ ಪ್ರಯತ್ನ ಮಾಡಿದ್ದಾನೆ. ಮೊಬೈಲ್ ನಿಂದ ಟಾರ್ಚ್ ಬಿಟ್ಟು, ವಧುವಿನ ಸೆರಗನ್ನು ಸರಿ ಮಾಡುತ್ತಾ ಫೋಟೋ, ವೀಡಿಯೋ ತೆಗೆಯುತ್ತಾ ಇದ್ದಂತೆ ವಧುವಿನ ಮೊಗದಲ್ಲಿ ಮಂದಹಾಸ ಬೀರುತ್ತಾಳೆ. ಅಲ್ಲಿಗೆ ವರನ ಸಾಹಸಕ್ಕೊಂದು ಬೆಲೆ ಸಿಗುತ್ತದೆ. ನೀವು ಫೋಟೋ ಗ್ರಾಫರ್ ರನ್ನು ಮದುವೆಯಾದಾಗ ಎಂಬ ಶೀರ್ಷಿಕೆಯ ಮೂಲಕ ವಿಡಿಯೋವನ್ನ ಹಂಚಿಕೊಳ್ಳಲಾಗಿದೆ.
ಕ್ಯಾಮರಾಮೆನ್ ಸರಿಯಾಗಿ ವಧುವಿನ ಫೋಟೊ ತೆಗೆದಿಲ್ಲ ಎಂದು ಕೋಪ ಮಾಡಿಕೊಂಡ ವಧುವಿನ ಮುಖದಲ್ಲಿ ನಗು ಕಾಣಲು ವರ ಕ್ಯಾಮರಾ ಮೆನ್ ನಿಂದ ಕ್ಯಾಮರಾ ಪಡೆದು, ತಾನೇ ವಧುವಿನ ಫೋಟೋ ಕ್ಲಿಕ್ಕಿಸಲು ಶುರು ಮಾಡಿದ್ದು ಮಾತ್ರವಲ್ಲ, ವರ ಫೋಟೋ ಕ್ಲಿಕ್ಕಿಸಲು ಶುರು ಮಾಡಿದ ಮೇಲೆ ವಧು ಕೂಡ ವಿವಿಧ ಭಂಗಿಗಳನ್ನು ಫೋಟೋಕ್ಕೆ ಫೋಸ್ ನೀಡಿದ್ದಾಳೆ. ಸದ್ಯ, ವಧು-ವರರ ಈ ವಿಡಿಯೋ ಇನ್ಸ್ಟಾಗ್ರಾಮ್ ನೆಟ್ಟಿಗರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.ಈ ವೀಡಿಯೋ ನೋಡಿದ ನೆಟ್ಟಿಗರು ತರಹೇವಾರಿ(Marrige Viral News) ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ, ವಿಡಿಯೋವನ್ನು 3 ಮಿಲಿಯನ್ ಬಾರಿ ವೀಕ್ಷಣೆ ಆಗಿದ್ದು, 271 ಸಾವಿರ ಲೈಕ್ಸ್ ಪಡೆದಿದೆ. 2 ಸಾವಿರ ಕಮೆಂಟ್ ಕೂಡ ಬಂದಿದೆ. ನೆಟ್ಟಿಗರು ಇನ್ಸ್ಟಾಗ್ರಾಮ್ ನಲ್ಲಿ ನವಜೋಡಿಗೆ ಶುಭಾಶಯ ಕೋರುತ್ತಿದ್ದಾರೆ.