Yash 19: ಲೇಡಿ ಡೈರೆಕ್ಟರ್‌ ಸಿನಿಮಾದಲ್ಲಿ ಮಿಂಚಲಿರುವ ರಾಕಿಂಗ್‌ ಸ್ಟಾರ್‌ ! ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ

Rocking star yash : ಅಭಿಮಾನಿಗಳೆಲ್ಲರು ರಾಕಿಂಗ್ ಸ್ಟಾರ್ ಯಶ್(Rocking star yash) ಅವರ ಮುಂದಿನ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಹಾಗೂ ರಾಕಿಭಾಯ್ ಎಲ್ಲೇ ಹೋದರು ಅಲ್ಲಿ ಅಭಿಮಾನಿಗಳು ನಿಮ್ಮ ಮುಂದಿನ ಚಿತ್ರದ ಬಗ್ಗೆ ಅಪ್ಡೇಟ್ ಮಾಡಿ ಎಂದು ಕೇಳುತ್ತಿದ್ದಾರೆ. ಯಶ್ ಅವರಿಗೆ ಮಾತ್ರವಲ್ಲದೆ ಪತ್ನಿ ರಾಧಿಕಾ ಅವರಿಗೂ ಕೂಡ ಅಭಿಮಾನಿಗಳು ‘ ಅಣ್ಣನ ಮುಂದಿನ ಚಿತ್ರದ ಬಗ್ಗೆ ಅಪ್ಡೇಟ್ ಮಾಡಿ ‘ ಎಂದು ಕೇಳುತ್ತಿದ್ದಾರೆ.

 

ಇದಲ್ಲದೆ ಅಭಿಮಾನಿಗಳು ಸಿನೆಮಾ ಘೋಷಣೆಗಾಗಿ ಯಶ್ ಅವರ ಮನೆ ಮುಂದೆ ಧರಣಿ ಕೂರುವುದಾಗಿ ತಿಳಿಸಿದ್ದಾರೆ. ಇದೀಗ ರಾಕಿಂಗ್ ಸ್ಟಾರ್ ಅವರ ಚಿತ್ರದ ಬಗ್ಗೆ ಹೊಸ ವಿಷಯವೊಂದು ಅಭಿಮಾನಿಗಳಿಗೆ ದೊರಕಿದೆ. ರಾಕಿಭಾಯ್ ಅವರ 19ನೇ ಚಿತ್ರಕ್ಕೆ ಲೇಡಿ ನಿರ್ದೇಶಕಿ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಯಶ್ ಅವರ ಸಿನೆಮಾಗೆ ಯಾವ ಲೇಡಿಯು ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ವಿಷಯದ ಬಗ್ಗೆ ಈಗಾಗಲೇ ಚರ್ಚೆ ನಡೆಯುತ್ತಿದೆ. ಇದಲ್ಲದೆ ಹಲವಾರು ನಿರ್ದೇಶಕರ ಹೆಸರು ಕೂಡ ಕೇಳಿ ಬಂದಿತ್ತು. ಮಪ್ತಿ ಖ್ಯಾತ ನಿರ್ದೇಶಕರಾದ ನರ್ತನ್, ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಸೇರಿದಂತೆ
ಹಲವಾರ ನಿರ್ದೇಶಕರ ಹೆಸರು ಕೇಳಿ ಬಂದಿತ್ತು. ಆದರೆ ಇದೀಗ ಲೇಡಿ ನಿರ್ದೇಶಕಿ ಅವರ ಹೆಸರು ಕೇಳಿ ಬರುತ್ತಿದ್ದು, ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. ಡಿಸೆಂಬರ್ ನಲ್ಲಿ ಸಿನಿಮಾ ಆರಂಭವಾಗಲಿದೆ. ಆದರೆ ಇನ್ನೂ ಕೂಡ ಲೇಡಿ ನಿರ್ದೇಶಕಿ ಯಾರೂ ಎಂದು ಬಹಿರಂಗವಾಗಿಲ್ಲ.

ಯಶ್ 19 ನೇ ಚಿತ್ರದ ಬಗ್ಗೆ ಇದೇ ಏಪ್ರಿಲ್ 14 ರಂದು ಮಾಹಿತಿ ಸಿಗಲಿದೆ ಎಂದು ಹೇಳಲಾಗುತ್ತಿದೆ. ಅದಲ್ಲದೆ ಏಪ್ರಿಲ್ 14 ಕೂ ಯಶ್ ಅವರಿಗೆ ವಿಶೇಷವಾದ ದಿನವಾಗಿದೆ. ಆದ್ದರಿಂದ ಅಂದೇ ಹೊಸ ಸಿನೆಮಾದ ಬಗ್ಗೆ ರಿವಿಲ್ ಮಾಡಲಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ದಿನಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಏಪ್ರಿಲ್ 14 ಕ್ಕೆ ನಿರ್ದೇಶಕಿಯ ಬಗ್ಗೆ ಹೊಸ ವಿಚಾರ ತಿಳಿಸಬಹುದು ಎಂದು ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ : Actress Janhvi Kapoor : ತನ್ನ ಪ್ರಿಯಕರನ ಜೊತೆ ಕಂಡು ಬಂದ ಶ್ರೀದೇವಿ ಮಗಳು ಜಾನ್ವಿ ಕಪೂರ್‌!

Leave A Reply

Your email address will not be published.