New Rules from 1st April: ಸರ್ಕಾರದ ಬಹುಮುಖ್ಯ ನಿರ್ಧಾರ! ಬದಲಾಗಲಿದೆ ಈ ನಿಯಮಗಳು

New Rules from 1st April : ಏಪ್ರಿಲ್ 1, 2023 ರಿಂದ ಹೊಸ ಆರ್ಥಿಕ ವರ್ಷ ಆರಂಭ (New Rules from 1st April) ಆಗಲಿದ್ದು, ಈಗಾಗಲೇ 2022-23ರ ಆರ್ಥಿಕ ವರ್ಷ ಮುಕ್ತಾಯಗೊಂಡಿದೆ. ಸದ್ಯ ಹೊಸ ಹಣಕಾಸು ವರ್ಷದಿಂದ ಮತ್ತು ಏಪ್ರಿಲ್ ತಿಂಗಳಿಂದಲೇ ಹಲವು ಹೊಸ ನಿಯಮಗಳು ಸಹ ಅನ್ವಯವಾಗುತ್ತವೆ. ಪ್ರತಿ ತಿಂಗಳ ಮೊದಲನೆಯ ದಿನದಲ್ಲಿ ಕೆಲವು ನಿಯಮಗಳನ್ನು ಪರಿಷ್ಕರಿಸಲಾಗುತ್ತದೆ. ಈ ನಿಯಮಗಳು ಸಾಮಾನ್ಯ ಜನರ ಮೇಲೂ ಪರಿಣಾಮ ಬೀರಲಿವೆ.

ಏಪ್ರಿಲ್ ತಿಂಗಳಲ್ಲಿ ಹಲವು ಪ್ರಮುಖ ವಿಷಯಗಳು ಬದಲಾಗಲಿವೆ, ಈ ನಿಯಮಗಳನ್ನು ತಿಳಿದಿರುವುದು ಬಹಳ ಮುಖ್ಯ. ಯಾಕೆಂದರೆ ಇದು ನಿಮ್ಮ ಮತ್ತು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಮೇಲೆ ಪರಿಣಾಮ ಬೀರುತ್ತದೆ.

ಷೇರು ಮಾರುಕಟ್ಟೆ, ಹೂಡಿಕೆ, ಆದಾಯ ತೆರಿಗೆ ಸೇರಿದಂತೆ ನಿಮ್ಮ ಇತರ ವೆಚ್ಚಗಳಿಗೆ ಸಂಬಂಧಿಸಿದ ಹಲವು ನಿಯಮಗಳು ಬದಲಾಗುತ್ತಿವೆ. ಎಲ್‌ಪಿಜಿ ಸಿಲಿಂಡರ್ ಬೆಲೆಗಳ ಪರಿಷ್ಕರಣೆ ಮತ್ತು ಬ್ಯಾಂಕ್ ರಜಾದಿನಗಳ ಪಟ್ಟಿಯಂತಹ ಬದಲಾವಣೆಗಳಾಗಿವೆ.

ಸದ್ಯ Income Tax ಕಾನೂನುಗಳಲ್ಲಿ ಹಲವು ಬದಲಾವಣೆಗಳಾಗಿದ್ದು, ಈ ಹಣಕಾಸು ವರ್ಷದಿಂದ ಈ ಕೆಳಗಿನ ನಿಯಮಗಳು 1 ಏಪ್ರಿಲ್ 2023 ರಿಂದ ಜಾರಿಗೆ ಬರಲಿವೆ.

ತೆರಿಗೆ ವಿನಾಯಿತಿ ಮಿತಿ ಹೆಚ್ಚಳ :
ಈ ಆರ್ಥಿಕ ವರ್ಷದಲ್ಲಿ ತೆರಿಗೆ ವಿನಾಯಿತಿ ಮಿತಿ ಹೆಚ್ಚಾಗಲಿದ್ದು, 5 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಿಸಲಾಗುವುದು. ಅಂದರೆ 7 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ವ್ಯಕ್ತಿಗಳು ತೆರಿಗೆಯಿಂದ ವಿನಾಯಿತಿ ಪಡೆಯುತ್ತಾರೆ. ಎಷ್ಟೇ ಹೂಡಿಕೆ ಮಾಡಿದರೂ ಅವರ ಆದಾಯ ಸಂಪೂರ್ಣ ತೆರಿಗೆ ಮುಕ್ತ.

ಹೊಸ ಆದಾಯ ತೆರಿಗೆ ಪದ್ಧತಿ :
ಆದಾಯ ತೆರಿಗೆಯಲ್ಲಿ ಬಹುದೊಡ್ಡ ಬದಲಾವಣೆಯಾಗಲಿದ್ದು, ಈ ಹೊಸ ಪದ್ಧತಿಯು ಡೀಫಾಲ್ಟ್ ವ್ಯವಸ್ಥೆಯನ್ನು ಹೊಂದಿರಲಿದೆ. ಹೊಸ ಆದಾಯ ತೆರಿಗೆ ಪದ್ಧತಿಯು ಏಪ್ರಿಲ್ 1, 2023 ರಂದು ಪ್ರಾಥಮಿಕ ತೆರಿಗೆ ಪದ್ಧತಿಯಾಗಿ ಜಾರಿಯಾಗಲಿದೆ. ಆದರೆ ಹಳೆ ಆದಾಯ ತೆರಿಗೆ ವ್ಯವಸ್ಥೆ ಬಳಸುವ ಆಯ್ಕೆ ಈಗಲೂ ಜಾರಿ ಇರುತ್ತದೆ.

ವಾಹನಗಳು ದುಬಾರಿಯಾಗಲಿವೆ :
ಏಪ್ರಿಲ್ 1 ರಿಂದ, ಹೋಂಡಾ, ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಹೀರೋ ಮೋಟೋಕಾರ್ಪ್‌ನ ವಿವಿಧ ರೂಪಾಂತರಗಳ ವಾಹನಗಳ ಬೆಲೆಗಳು ಹೆಚ್ಚಾಗಲಿವೆ. BS-VI ಎರಡನೇ ಹಂತಕ್ಕೆ ಪರಿವರ್ತನೆ ಮತ್ತು ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು, ಕಂಪನಿಗಳು ವಾಹನಗಳ ಬೆಲೆಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿವೆ.

ಲೀವ್ ಎನ್‌ಕ್ಯಾಶ್‌ಮೆಂಟ್ :
ಸರ್ಕಾರೇತರ ಉದ್ಯೋಗಿಗಳಿಗೆ ಅಂದರೆ ಖಾಸಗಿ ಕಂಪನಿಗಳ ಉದ್ಯೋಗಿಗಳು ನಿರ್ದಿಷ್ಟ ಮೊತ್ತದವರೆಗೆ ಲೀವ್ ಎನ್‌ಕ್ಯಾಶ್‌ಮೆಂಟ್‌ನಿಂದ ವಿನಾಯಿತಿ ನೀಡಲಾಗುವುದು. ಈ ಮಿತಿಯು ಇಂದಿನಿಂದ 25 ಲಕ್ಷ ರೂ.ಗಳಾಗಿರಲಿದೆ.

ಇಂಧನ ಬೆಲೆಗಳು :
ಪ್ರತಿ ತಿಂಗಳ ಮೊದಲ ದಿನ, ಪೆಟ್ರೋಲ್-ಡೀಸೆಲ್ ಮತ್ತು ಗ್ಯಾಸ್‌ನ ಹೊಸ ಬೆಲೆಗಳನ್ನು ಸರ್ಕಾರಿ ತೈಲ ಕಂಪನಿಗಳು ಬಿಡುಗಡೆ ಮಾಡುತ್ತವೆ. ಮಾರ್ಚ್ ತಿಂಗಳಲ್ಲೇ LPG ಬೆಲೆಯನ್ನು ಹೆಚ್ಚಿಸಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಈ ಬಾರಿಯೂ ಏಪ್ರಿಲ್ 1ರಂದು ಇಂಧನ ಬೆಲೆಯಲ್ಲಿ ಬದಲಾವಣೆ ಕಾಣುವ ಸಾಧ್ಯತೆ ಇದೆ.

ಮಾರ್ಕೆಟ್ ಲಿಂಕ್ಡ್ ಡಿಬೆಂಚರ್‌ :
ಮಾರ್ಕೆಟ್ ಲಿಂಕ್ಡ್ ಡಿಬೆಂಚರ್‌ಗಳಲ್ಲಿನ (ಎಂಎಲ್‌ಡಿ) ಹೂಡಿಕೆಗಳನ್ನು ಅಲ್ಪಾವಧಿಯ ಹಣಕಾಸು ಆಸ್ತಿಗಳಾಗಿ ಪರಿಗಣಿಸಲಾಗುವುದು. ಇದರೊಂದಿಗೆ ಹಿಂದಿನ ಹೂಡಿಕೆಗಳ ಗ್ರ್ಯಾಂಡ್ ಫಾದರಿಂಗ್ ಮುಕ್ತಾಯವಾಗಲಿದೆ. ಇದು ಮ್ಯೂಚುವಲ್ ಫಂಡ್ ವಲಯದ ಮೇಲೆ ಕೊಂಚ ನೆಗೆಟಿವ್‌ ಎಫೆಕ್ಟ್‌ ಬೀಳಲಿದೆ.

ಜೀವ ವಿಮಾ ಪಾಲಿಸಿ:
ಇಂದಿನಿಂದ ವಾರ್ಷಿಕವಾಗಿ 5 ಲಕ್ಷ ರೂ. ಜೀವ ವಿಮಾ ಪ್ರಿಮಿಯಮ್ ತೆರಿಗೆ ವ್ಯಾಪ್ತಿಗೆ ಒಳಪಡಲಿದೆ. 2023 ರ ಬಜೆಟ್ ಮಂಡನೆಯ ವೇಳೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯುನಿಟ್ ಲಿಂಕ್ಡ್ ಇನ್ಶುರೆನ್ಸ್ ಪ್ಲಾನ್ ಹೊಸ ಆದಾಯ ತೆರಿಗೆ ನಿಯಂತ್ರಣಕ್ಕೆ ಒಳಪಡುವುದಿಲ್ಲ ಎಂದು ಮಾಹಿತಿ ನೀಡಿದ್ದರು.

ಚಿನ್ನಾಭರಣಗಳ ಮಾರಾಟ :
ಗ್ರಾಹಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು, ಮಾರ್ಚ್ 31, 2023 ರ ನಂತರ HUID ಹಾಲ್‌ಮಾರ್ಕ್ ಇಲ್ಲದ ಚಿನ್ನದ ಆಭರಣಗಳು ಮತ್ತು ಚಿನ್ನದ ಕಲಾಕೃತಿಗಳ ಮಾರಾಟವನ್ನು ಅನುಮತಿಸಲಾಗುವುದಿಲ್ಲ ಎಂದು ಸರ್ಕಾರ ನಿರ್ಧರಿಸಿದೆ.

ಯುಡಿಐಡಿ ಸಂಖ್ಯೆ ಕಡ್ಡಾಯ :
ಅಂಗವಿಕಲರು ವಿಶಿಷ್ಟ ಗುರುತಿನ ಚೀಟಿ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ. ಏಪ್ರಿಲ್ 1 ರಿಂದ, ಸರ್ಕಾರಿ ಯೋಜನೆಗಳ ಲಾಭ ಪಡೆಯಲು ವಿಕಲಚೇತನರು ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ಸಂಖ್ಯೆಯನ್ನು ನಮೂದಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಯುಡಿಐಡಿ ಕಾರ್ಡ್ ಇಲ್ಲದವರಿಗೆ ವಿಕಲಚೇತನ ಪ್ರಮಾಣಪತ್ರದೊಂದಿಗೆ ಯುಡಿಐಡಿ ನೋಂದಣಿ ಸಂಖ್ಯೆಯನ್ನು ನೀಡಲಾಗುತ್ತದೆ. ಈ UDID ಅನ್ನು ಪೋರ್ಟಲ್‌ನಿಂದ ರಚಿಸಲಾಗುತ್ತದೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆ :
ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಗರಿಷ್ಠ ಠೇವಣಿ ಮಿತಿಯನ್ನು ಹೆಚ್ಚಿಸಲಾಗಿದೆ. 15 ಲಕ್ಷ ರೂ.ಗಳಿಂದ 30 ಲಕ್ಷ ರೂ.ಗಳಿಗೆ ಇದು ಏರಿಕೆಯಾಗಲಿದೆ. ಮಾಸಿಕ ಆದಾಯ ಯೋಜನೆಯ ಗರಿಷ್ಠ ಠೇವಣಿ ಮಿತಿಯನ್ನು ಸಿಂಗಲ್ ಖಾತೆಗಳಿಗೆ 4.5 ಲಕ್ಷದಿಂದ 9 ಲಕ್ಷಕ್ಕೆ ಮತ್ತು ಜಂಟಿ ಖಾತೆಗಳಿಗೆ 7.5 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಒಟ್ಟಿನಲ್ಲಿ ಇಂದಿನಿಂದ ಜಾರಿಯಾಗಲಿರುವ ಕೆಲವು ಪ್ರಮುಖ ಬದಲಾವಣೆಗಳಲ್ಲಿ ತೆರಿಗೆ ವಿನಾಯಿತಿ ಮಿತಿಯಲ್ಲಿನ ಹೆಚ್ಚಳ, ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿನ ಬದಲಾವಣೆ ಮತ್ತು ಕೆಲವು ಡೆಟ್ ಮ್ಯೂಚುಯಲ್ ಫಂಡ್‌ಗಳ ಮೇಲಿನ LTCG ತೆರಿಗೆ ಪ್ರಯೋಜನ ರದ್ದಾಗುವಿಕೆಗಳು ಸಹ ಸೇರಿವೆ.

ಇದನ್ನೂ ಓದಿ: Small Saving Scheme : ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಜನರಿಗೆ ಶುಭ ಸುದ್ದಿ ನೀಡಿದ ಸರಕಾರ! 

Leave A Reply

Your email address will not be published.