Coconut Porridge: ತೆಂಗಿನ ಗಂಜಿಯ ಸೇವನೆಯಿಂದ ಏನೆಲ್ಲ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?

Coconut Porridge: ಆರೋಗ್ಯವನ್ನು(Health) ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ನಾನಾ ರೀತಿಯ ಹರಸಾಹಸ ಪಡುವುದು ಸಹಜ. ಸೆಖೆಯ(Summer) ಝಳದಿಂದ ತಪ್ಪಿಸಿಕೊಳ್ಳಲು ಎಳನೀರು ಕುಡಿಯುವುದು ಸಾಮಾನ್ಯ. ಆದರೆ, ತೆಂಗಿನಕಾಯಿಯ ತಿರುಳು (Coconut Porridge)ಕೂಡ ಅನೇಕ ಆರೋಗ್ಯಕರ ಪ್ರಯೋಜನಗಳನ್ನು (Health Benifits) ನೀಡಬಲ್ಲದು ಎಂದು ಹೆಚ್ಚಿನವರಿಗೆ ತಿಳಿದಿಲ್ಲ

 

ತೆಂಗಿನನೀರು(Coconut Water) ರುಚಿಯ ಜೊತೆಗೆ ಆರೋಗ್ಯಕ್ಕೂ ಉತ್ತಮ ಎಂಬ ವಿಚಾರ ನಿಮಗೆ ತಿಳಿದಿರಬಹುದು. ನೈಸರ್ಗಿಕವಾಗಿ ಸಿಗುವ ತೆಂಗಿನ ನೀರು ಹೃದಯದ ಆರೋಗ್ಯವನ್ನು ಸುಧಾರಣೆ ಮಾಡಿ, ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ನೆರವಾಗುವ ಜೊತೆಗೆ ದೇಹದ ಒತ್ತಡ, ಮಾನಸಿಕ ಅಸ್ವಸ್ಥತೆ, ಹಸಿವು ಕಡಿಮೆ ಮಾಡಲು ಸಹಕಾರಿಯಾಗಿದೆ. ಎಳನೀರು ಮಾತ್ರವಲ್ಲ ಅದರ ಗಂಜಿ (Coconut Porridge)ಕೂಡ ಅನೇಕ ಪ್ರಯೋಜನವನ್ನ ಒಳಗೊಂಡಿದೆ. ಹಾಗಿದ್ರೆ, ಅದು ಯಾವುದೆಲ್ಲ ಅಂತೀರಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್:

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ:
80 ಆರೋಗ್ಯವಂತ ವ್ಯಕ್ತಿಗಳಲ್ಲಿ 100 ಗ್ರಾಂ ತಾಜಾ ತೆಂಗಿನಕಾಯಿಯ ದೈನಂದಿನ ಸೇವನೆ ಮಾಡಿದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆಯಾಗಲು ನೆರವಾಗುತ್ತದೆ. ಹೀಗಾಗಿ, ಟೈಪ್ -2 ಮಧುಮೇಹವನ್ನು ತಡೆಯುತ್ತದೆ. ಈ ಕುರಿತು, ಜರ್ನಲ್ ಆಫ್ ಕಾಂಪ್ಲಿಮೆಂಟರಿ ಅಂಡ್ ಇಂಟಿಗ್ರೇಟಿವ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿ ಮಾಡಿದೆ ಎನ್ನಲಾಗಿದೆ. ಎಳನೀರಿನ ಗಂಜಿ ಅಥವಾ ತೆಂಗಿನಕಾಯಿಯ ತಿರುಳು (Coconut malai)ಮಧ್ಯಮ ಸರಣಿ ಟ್ರೈಗ್ಲಿಸರೈಡ್‌ಗಳು, ಲಾರಿಕ್ ಆಮ್ಲ ದ ಜೊತೆಗೆ ಅನೇಕ ಸಂಯುಕ್ತಗಳನ್ನು ಒಳಗೊಂಡಿದೆ.

ಗರ್ಭಿಣಿಯರಿಗೆ ಪ್ರಯೋಜನಕಾರಿ:
ತೆಂಗಿನ ಮಲೈಯ ಪೌಷ್ಟಿಕಾಂಶದ ಸಂಯೋಜನೆಯು ಗರ್ಭಿಣಿಯರಿಗೆ ಹೆಚ್ಚಿನ ಪ್ರಯೋಜನ ಉಂಟುಮಾಡುತ್ತದೆ. ಭ್ರೂಣದ ಮೆದುಳು ಮತ್ತು ನರಮಂಡಲದ ಬೆಳವಣಿಗೆಗೆ ಸಹಕರಿಸಿ, ವಾಕರಿಕೆ ಮತ್ತು ಬೆಳಗಿನ ಬೇನೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ತಾಯಿಯ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಕಾರಿಯಾಗುತ್ತದೆ.

ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ:
ಎಳನೀರು ಅಥವಾ ತೆಂಗಿನಕಾಯಿ ಆಹಾರದ ಫೈಬರ್‌ಲ್ಲಿ ಸಮೃದ್ಧವಾಗಿರುವುದರಿಂದ ಜೀರ್ಣ ಕ್ರಿಯೆಗೆ ನೆರವಾಗುತ್ತದೆ. ತೆಂಗಿನ ಮಲೈಯಲ್ಲಿರುವ(Coconut malai Health Benefits) ಫೈಬರ್ ಕರುಳಿನ ಚಲನೆಯನ್ನು ನಿಯಂತ್ರಿಸುವುದಲ್ಲದೇ ಮಲಬದ್ಧತೆಯನ್ನು ತಡೆಯಲು ಸಹಕಾರಿಯಾಗಿದೆ. ಹೆಚ್ಚುವರಿಯಾಗಿ, ತೆಂಗಿನಕಾಯಿ (Coconut) ಮಲೈಯು ಕರುಳಿನ ಬ್ಯಾಕ್ಟೀರಿಯಾದ ಮೇಲೆ ಸಕಾರಾತ್ಮಕ ಪ್ರಭಾವ ಬೀರುವ ಸಂಯುಕ್ತಗಳನ್ನು ಒಳಗೊಂಡಿದೆ.

ತೂಕ ನಷ್ಟಕ್ಕೆ ಒಳ್ಳೆಯದು:
ತೆಂಗಿನ ಮಲೈನಲ್ಲಿರುವ ಗಂಜಿ ಹಸಿವನ್ನು ಕಡಿಮೆ ಮಾಡಲು ನೆರವಾಗುತ್ತದೆ.ತೆಂಗಿನ ಮಲೈ ಸೇವನೆ ಮಾಡುವ ಹಿನ್ನೆಲೆ ಆಗಾಗ ಹಸಿವಾಗುವುದು ತಪ್ಪುತ್ತದೆ. ಇದರಿಂದಾಗಿ, ಇತರ ರೀತಿಯ ಕೊಬ್ಬುಗಳಿಗೆ ಹೋಲಿಕೆ ಮಾಡಿದರೆ ತೆಂಗಿನಕಾಯಿ ಮಲೈ ಅನ್ನು ಆಹಾರದಲ್ಲಿ ಸೇರಿಸುವುದರಿಂದ ತೂಕ ಕಡಿಮೆ(Weight Loss) ಮಾಡಿಕೊಳ್ಳಬಹುದು.ಇದರ ಜೊತೆಗೆ ಸೊಂಟದ ಸುತ್ತಳತೆ ಕೂಡ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ಮಾಹಿತಿ ನೀಡಿವೆ.

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ:
ತೆಂಗಿನಕಾಯಿ ಗಂಜಿ ಅಂಶ ಕಡಿಮೆ ಮಟ್ಟದ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳಿಗೆ ಸಂಬಂಧಿಸಿದ್ದು, ತೆಂಗಿನಕಾಯಿ ಮಲೈನಲ್ಲಿರುವ ಲಾರಿಕ್ ಆಮ್ಲವು ರಕ್ತದೊತ್ತಡದ ಮಟ್ಟವನ್ನು ಸುಧಾರಣೆ ಮಾಡಲು ನೆರವಾಗುತ್ತದೆ. ಅಷ್ಟೇ ಅಲ್ಲದೆ, ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಸ್ಯಾಚುರೇಟೆಡ್ ಕೊಬ್ಬುಗಳಲ್ಲಿ ಅಧಿಕವಾಗಿದ್ದರೂ ಸಹಿತ, ತೆಂಗಿನಕಾಯಿ ಗಂಜಿ ಹೃದಯದ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅಧ್ಯಯನದ ಮೂಲಕ ಬಹಿರಂಗವಾಗಿದೆ.

ಇದನ್ನೂ ಓದಿ: Anti Mosquito Plants: ಈ ಸಸ್ಯಗಳನ್ನು ನೆಟ್ಟು ನೋಡಿ! ಸೊಳ್ಳೆಗಳ ಕಾಟ ಮಾಯವಾಗುವುದು ಖಂಡಿತಾ

Leave A Reply

Your email address will not be published.