Health Tips For Woman : ಕಾಮ ಕಸ್ತೂರಿಯ ಗುಣ ಲಕ್ಷಣದ ಬಗ್ಗೆ ನಿಮಗೆಷ್ಟು ಗೊತ್ತು?

Benefits Of Basil Seeds : ಸಬ್ಜ ಸೀಡ್ಸ್‌ ಅಥವಾ ತುಳಸಿ ಬೀಜಗಳು ಅಥವಾ ಕಾಮ ಕಸ್ತೂರಿ ಬೀಜಗಳು ಎಂದು ಕರೆಯಲ್ಪಡುವ ಇವು ಕಪ್ಪು ಬಣ್ಣವನ್ನು ಹೊಂದಿರುತ್ತವೆ. ಅಲ್ಲದೆ ಸೌಮ್ಯವಾದ ತುಳಸಿ ಪರಿಮಳವನ್ನು ಹೊಂದಿದ್ದು ಔಷಧೀಯ ಗುಣಗಳನ್ನು ಹೊಂದಿದೆ (Benefits Of Basil Seeds). ಮುಖ್ಯವಾಗಿ ಕಾಮ ಕಸ್ತೂರಿಯ ಬೀಜಗಳು ಎ, ಇ, ವಿಟಮಿನ್, ಖನಿಜಗಳು, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ ಅಂಶಗಳನ್ನು ಒಳಗೊಂಡಿದ್ದು ಹಲವಾರು ರೀತಿ ದೇಹದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಕಾಮ ಕಸ್ತೂರಿಯ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಇದೊಂದು ಆರೋಗ್ಯಕರವಾದ ಪಾನೀಯವಾಗಿದೆ. ಹಾಗಿದ್ದರೆ ಬನ್ನಿ ಇದರ ಉಪಯೋಗದ ಬಗ್ಗೆ ತಿಳಿಯೋಣ.

 

ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ :
ಬೇಸಿಗೆಯಲ್ಲಿ ಹೆಚ್ಚು ಬೆವರುವ ಕಾರಣ ನಾವು ಹೆಚ್ಚು ನೀರು ಕುಡಿಯಬೇಕಾದ ಅಗತ್ಯವಿದೆ. ನೀವು ನಿಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಲು ಈ ಕಾಮ ಕಸ್ತೂರಿ ಬೀಜಗಳನ್ನು ಸೇವನೆ ಮಾಡಬಹುದು. ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳಲ್ಲಿ ಕಾಮ ಕಸ್ತೂರಿ ಬೀಜಗಳನ್ನು ಬೆರಸಿರುವ ಜ್ಯೂಸ್‌, ಮಿಲ್ಕ್‌ ಶೇಕ್‌, ಫಾಲುಡಾದಂತಹ ದ್ರವ ಪದಾರ್ಥಗಳ ರುಚಿಯನ್ನು ನೀವು ಸವಿದಿರಬಹುದು. ಈ ಬೀಜಗಳು ಅತ್ಯುತ್ತಮವಾದ ಶೀತಕಗಳಲ್ಲಿ ಒಂದಾಗಿದ್ದು, ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ .

ಜೀರ್ಣಕ್ರಿಯೆ ಚೆನ್ನಾಗಿರುತ್ತದೆ :
ನಿಮಗೆ ಮಲಬದ್ಧತೆ, ಅಸಿಡಿಟಿ ಗ್ಯಾಸ್ ಸಮಸ್ಯೆ ಇದ್ದರೆ ಇದಕ್ಕಾಗಿ ಕಾಮ ಕಸ್ತೂರಿ ಬೀಜಗಳನ್ನು ನೀರಿನಲ್ಲಿ ಹಾಕಿ ಸ್ವಲ್ಪ ಸಮಯ ನೆನೆಸಿಟ್ಟು, ಬಳಿಕ ಕುಡಿಯಿರಿ. ಬೀಜ ಸಮೇತ ಈ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ : ರೋಗನಿರೋಧಕ ಶಕ್ತಿ ಯಾವಾಗಲೂ ಮುಖ್ಯವಾಗಿದೆ. ಏಕೆಂದರೆ ಇದು ಅನೇಕ ರೋಗಗಳು ಮತ್ತು ಸೋಂಕುಗಳಿಂದ ರಕ್ಷಿಸಲು ನಮಗೆ ಸಹಾಯ ಮಾಡುತ್ತದೆ. ಇದಕ್ಕೆ ಕಾಮ ಕಸ್ತೂರಿ ಬೀಜದ ಕಷಾಯ ಮಾಡಿ ಕುಡಿಯಬಹುದು.

ತೂಕವನ್ನು ಕಳೆದುಕೊಳ್ಳಿ :
ಇದು ತುಂಬಾ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ಫೈಬರ್‌ನಲ್ಲಿ ಸಮೃದ್ಧವಾಗಿದೆ. ಈ ಬೀಜಗಳನ್ನು ತಿನ್ನುವುದರಿಂದ, ಒಬ್ಬ ವ್ಯಕ್ತಿಯು ದೀರ್ಘಕಾಲದವರೆಗೆ ಹಸಿವನ್ನು ಅನುಭವಿಸುವುದಿಲ್ಲ. ಇದರಿಂದಾಗಿ ತೂಕವು ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ.

ಉದ್ವೇಗ ದೂರವಾಗುತ್ತದೆ :
ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಕಾಮ ಕಸ್ತೂರಿ ಬೀಜಗಳನ್ನು ಸಹ ಬಳಸಬಹುದು . ನೀವು ಖಿನ್ನತೆ ಅಥವಾ ಒತ್ತಡವನ್ನು ಎದುರಿಸುತ್ತಿದ್ದರೆ, ಖಂಡಿತವಾಗಿಯೂ ಕಾಮ ಕಸ್ತೂರಿ ಬೀಜಗಳನ್ನು ತಿನ್ನಿರಿ, ಹೀಗೆ ಮಾಡುವುದರಿಂದ ಆತಂಕ ದೂರವಾಗುತ್ತದೆ.

ಪದೇ ಪದೇ ಆಗುವ ಹಸಿವನ್ನು ನಿಯಂತ್ರಿಸುತ್ತದೆ :
ಕೆಲವೊಂದು ಬಾರಿ ಯಾವುದಾರು ಔಷಧಿಗೆ ಒಳಗಾಗಿದ್ದರೇ ಅಂತಹ ಸಂದರ್ಭದಲ್ಲಿ ಊಟ ಮಾಡಿದ ಕೆಲವೇ ಹೊತ್ತಿಗೆ ಮತ್ತೆ ಹಸಿವು ಆಗುತ್ತದೆ. ಅದನ್ನು ನಿಯಂತ್ರಿಸಲು ಕಾಮ ಕಸ್ತೂರಿ ನೀರಿನಲ್ಲಿ ಬೆರಸಿ ಕುಡಿದರೆ ಹಸಿವನ್ನು ನೀಗಿಸುತ್ತದೆ.

​ಮಧುಮೇಹ ನಿಯಂತ್ರಣ:
ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಕಾಮ ಕಸ್ತೂರಿಯು ಸಹಕರಿಸುತ್ತದೆ.

ಮಲಬದ್ಧತೆ ಶಮನ :
ಮಲಬದ್ಧತೆಗೆ ಒಳಗಾಗಿ ಹೊಟ್ಟೆ ನೋವು, ಎದೆಯಲ್ಲಿ ಉರಿಯಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತಹ ಸಂದರ್ಭದಲ್ಲಿ ತಂಪುಪಾನೀಯ ಸಹಕರಿಸುತ್ತವೆ.

ಚರ್ಮದ ಕಾಂತಿ ಹೆಚ್ಚಳ :
ಕಾಮ ಕಸ್ತೂರಿ ಬೀಜಗಳನ್ನು ಪುಡಿ ಮಾಡಿ, ತೆಂಗಿನ ಎಣ್ಣೆಯಲ್ಲಿ ಸೇರಿಸಿ ಪೀಡಿತ ಚರ್ಮ ಪ್ರದೇಶಗಳಿಗೆ ಅನ್ವಯಿಸುವುದರಿಂದ ಎಗ್ಜಿಮಾ ಮತ್ತು ಸೋರಿಯಾಸಿಸ್‌ನಂತಹ ಹಲವಾರು ಚರ್ಮದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಇನ್ನು ನಿಯಮಿತವಾಗಿ ತಿನ್ನುವುದರಿಂದ ದೇಹವು ಕಾಲಜನ್‌ ಅನ್ನು ಸ್ರವಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಅಂಶಗಳು ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ.

ಒಟ್ಟಿನಲ್ಲಿ ಕಾಮ ಕಸ್ತೂರಿ ಯ ನಿಯಮಿತ ಸೇವನೆ ಆರೋಗ್ಯ ಸುಧಾರಣೆಗೆ ಬಹಳ ಉತ್ತಮ.

Leave A Reply

Your email address will not be published.