‘RSS ನ ಅರ್ಧ ಪ್ಯಾಂಟ್ ಮತ್ತು ಕೈಯಲ್ಲಿ ಲಾಠಿ ಹಿಡಿದ ಕೌರವರು’ ಹೇಳಿಕೆ : ರಾಹುಲ್ ಮೇಲೆ ಮತ್ತೊಂದು ಕ್ರಿಮಿನಲ್ ಮಾನನಷ್ಟ ದಾಖಲು

Rahul gandhi- RSS : ಮೊನ್ನೆ ಮಾರ್ಚ್ 23 ರಂದು, ಸೂರತ್‌ನ ನ್ಯಾಯಾಲಯವು ಮಾನನಷ್ಟ ಮೊಕದ್ದಮೆಯೊಂದರಲ್ಲಿ ಕಾಂಗ್ರೆಸ್ ಪ್ರಮುಖ ರಾಹುಲ್ ಗಾಂಧಿಯನ್ನು(Rahul Gandhi) ದೋಷಿ ಎಂದು ಘೋಷಿಸಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಅಲ್ಲದೆ ಇದು ರಾಹುಲ್ ಗೆ ಸಂಸತ್ತಿನಲ್ಲಿ ಅವರ ಅನರ್ಹತೆಗೆ ಕೂಡಾ ಕಾರಣವಾಗಿತ್ತು. ಇದೀಗ ರಾಹುಲ್ ಮೇಲೆ ಇನ್ನೊಂದು ಬಲವಾದ ಕೇಸು ದಾಖಲಾಗಿದೆ.

 

ಜನವರಿಯಲ್ಲಿ ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಅನ್ನು “21 ನೇ ಶತಮಾನದ ಕೌರವರು” ಎಂದು ಬಣ್ಣಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul gandhi- RSS) ವಿರುದ್ಧ ಹರಿದ್ವಾರದ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲಾಗಿದೆ.

RSS ಸ್ವಯಂಸೇವಕ ಎಂದು ಹೇಳಿಕೊಂಡಿರುವ ಕಮಲ್ ಭಡೋರಿಯಾ ಅವರ ಪರವಾಗಿ ದೂರು ಸಲ್ಲಿಸಿರುವುದಾಗಿ ವಕೀಲ ಅರುಣ್ ಭಡೋರಿಯಾ ಎಂಬವರು ಹೇಳಿದ್ದಾರೆ. ನ್ಯಾಯಾಲಯವು ಏಪ್ರಿಲ್ 12 ರಂದು ಈ ದೂರನ್ನು ಕೈಗೆತ್ತಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಜನವರಿಯಲ್ಲಿ ಐತಿಹಾಸಿಕ ಸ್ಥಳವಾದ ಕುರುಕ್ಷೇತ್ರದಲ್ಲಿ ರಾಹುಲ್ ಗಾಂಧಿಯವರು RSS ಅನ್ನು 21 ನೇ ಶತಮಾನದ ಕೌರವರೊಂದಿಗೆ ಹೋಲಿಸಿದ್ದಾರೆ. ‘ ಅವರು (ಕೌರವರು) ಈಗ ಖಾಕಿ ಹಾಫ್ ಪ್ಯಾಂಟ್ ಧರಿಸುತ್ತಾರೆ, ಕೈಯಲ್ಲಿ ಲಾಠಿ ಹಿಡಿದು ಶಾಖಾಗಳನ್ನು ನಡೆಸುತ್ತಿದ್ದಾರೆ. ಭಾರತದ 2-3 ಬಿಲಿಯನೇರ್‌ಗಳು ಕೌರವರ ಜೊತೆ ನಿಂತಿದ್ದಾರೆ’ ಎಂದು ರಾಹುಲ್ ಗಾಂಧಿಯವರು ಹೇಳಿದ್ದರು. ಆರ್ ಎಸ್ ಎಸ್ ಅನ್ನಿ, ಕಾಕಿ ಪ್ಯಾಂಟು ಮತ್ತು ದಂಡದ ವಿಷಯ ಎತ್ತಿಕೊಂಡು ಕೌರವರಿಗೆ ಹೋಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ದಂಡ ಪ್ರಯೋಗಿಸಲು ರೆಡಿಯಾಗಿದ್ದಾರೆ.

ಭಾರತೀಯ ದಂಡ ಸಂಹಿತೆಯ (IPC) 499 ಮತ್ತು 500 ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಿದ್ದೇವೆ. ಇಲ್ಲಿನ ಎರಡು ನಿಬಂಧನೆಗಳು ಕ್ರಿಮಿನಲ್ ಮಾನನಷ್ಟಕ್ಕೆ ಸಂಬಂಧಿಸಿವೆ ಮತ್ತು ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಪಡೆಯಲು ಅರ್ಹವಾಗುವ ಕೇಸು ಇದಾಗಿದೆ ಎಂದು ವಕೀಲರು ತಿಳಿಸಿದ್ದಾರೆ. ಜನವರಿ 11 ರಂದು ಕಮಲ್ ಭಡೋರಿಯಾ ಅವರು ರಾಹುಲ್ ಗಾಂಧಿಗೆ ಕಳುಹಿಸಿದ ಲೀಗಲ್ ನೋಟಿಸ್‌ಗೆ ಗಾಂಧಿ ಪ್ರತಿಕ್ರಿಯಿಸಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

Leave A Reply

Your email address will not be published.