WhatsApp Updates : ಇನ್ನೊಂದು ಹೊಸ ಫೀಚರ್ ಪರಿಚಯಿಸಿದ ವಾಟ್ಸಾಪ್‌!!

WhatsApp Updates : ವಿಶ್ವಾದ್ಯಂತ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್‌ಫಾರ್ಮ್ (Messaging Platform) ವಾಟ್ಸಪ್ ಪ್ರತಿ ಬಾರಿ ನೂತನ ಫೀಚರ್ (whatsapp features) ಗಳನ್ನು ಪರಿಚಯಿಸುತ್ತಲೇ ಇದೆ. ಬಳಕೆದಾರರನ್ನು ಅಚ್ಚರಿ ಮೂಡಿಸುವಂತಹ ಅದ್ಭುತ ಫೀಚರ್ ಗಳನ್ನು ಪರಿಚಯಿಸುತ್ತಿದೆ.
ವಾಟ್ಸಾಪ್ ಕಳೆದ ವರ್ಷದಲ್ಲಿ ತನ್ನ ಬಳಕೆದಾರರಿಗೆ ಅನುಕೂಲವಾಗುವಂತಹ ಸಾಕಷ್ಟು ಫೀಚರ್ಸ್​​ಗಳನ್ನು ಬಿಡುಗಡೆ ಮಾಡಿದೆ (WhatsApp Updates). ಇದೀಗ ಹೊಸ ಆಡಿಯೋ ಚಾಟ್ (Audio Chat) ಎಂಬ ಫೀಚರ್ ಪರಿಚಯಿಸಿದೆ.

 

ವಾಟ್ಸಾಪ್‌ ಆಡಿಯೋ ಚಾಟ್ ಫೀಚರ್‌ ಆಡಿಯೋ ಚಾಟ್ ಫೀಚರ್‌ನೊಂದಿಗೆ WhatsApp ಬಳಕೆದಾರರು ವಿಶುವಲೈಸೆಷನ್ ನೊಂದಿಗೆ ರಿಯಲ್-ಟೈಮ್ ಧ್ವನಿ ಚಾಟ್ ಅನ್ನು ಕೇಳಲು ಸಾಧ್ಯವಾಗುತ್ತದೆ. ಸದ್ಯ ಈ ಫೀಚರ್‌ ಅಭಿವೃದ್ಧಿ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಇದು ಬಿಡುಗಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

WaBetaInfo ವರದಿ ಪ್ರಕಾರ, WhatsApp ಆಡಿಯೋ ಚಾಟ್ ಫೀಚರ್‌ ಇತ್ತೀಚಿನ WhatsApp ಬೀಟಾ Android 2.23.7.12 ಅಪ್‌ಡೇಟ್‌ನ ಮೂಲಕ Google Play Store ನಲ್ಲಿ ಲಭ್ಯವಿದೆ. ವಾಟ್ಸಾಪ್‌ ವೇವ್‌ಫಾರ್ಮ್ ಐಕಾನ್ ರಿಯಲ್-ಟೈಮ್ ಆಡಿಯೊWhatsApp ಬಳಕೆದಾರರು ಹೊಸ ಐಕಾನ್ ಅನ್ನು ಬಳಸಿಕೊಂಡು ಆಡಿಯೋ ಚಾಟ್‌ಗಳನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ. ವೇವ್‌ಫಾರ್ಮ್ ಐಕಾನ್ ರಿಯಲ್-ಟೈಮ್ ಆಡಿಯೊವನ್ನು ವಿಶುವಲೈಸೆಷನ್ ಮಾಡುವ ಸಾಮರ್ಥ್ಯವನ್ನು ಸೂಚಿಸುತ್ತದೆ. ಚಾಟ್ ಹೆಡರ್‌ನ ಮೇಲಿನ ಜಾಗವನ್ನು ಆಡಿಯೊ ವೇವ್‌ಫಾರ್ಮ್ ಗಳ ಮೂಲಕ ಡಿಸ್ಪ್ಲೇಗಾಗಿ ಇರುವುದು ಎನ್ನಲಾಗಿದೆ. ಇದು ಕನಿಷ್ಠ ಇಂಟರ್ಫೇಸ್ ಅನ್ನು ಒದಗಿಸುತ್ತದೆ. ಅಲ್ಲದೆ ಬಳಕೆದಾರರು ತಮ್ಮ ಚಾಟ್‌ಗಳ ನಡುವೆ ನ್ಯಾವಿಗೇಟ್ ಮಾಡುವಾಗ ಆಡಿಯೊ ವೇವ್‌ಫಾರ್ಮ್ ಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.

WhatsApp ಬಳಕೆದಾರರಿಗೆ ಅಧಿಕೃತ ಚಾಟ್ ಅನ್ನು ಪ್ರಾರಂಭಿಸಿದ್ದು, ಈ ಮೂಲಕ ಬಳಕೆದಾರರು ಅದರ ಅಪ್‌ಡೇಟ್‌ಗಳು ಮತ್ತು ಅದನ್ನು ಹೇಗೆ ಬಳಸುವುದು ಎಂಬುದರ ಬಗ್ಗೆ ಮಾಹಿತಿ ಪಡೆಯಬಹುದು. iOS ಮತ್ತು Android ನಲ್ಲಿ ಕೆಲವು ಬಳಕೆದಾರರು ಚಾಟ್‌ನಲ್ಲಿ ತಮ್ಮ ಮೊದಲ ಮೆಸೇಜ್ ಅನ್ನು ಸ್ವೀಕರಿಸಿದ ನಂತರ ಮೆಸೇಜ್ಗಳು ಡಿಲೀಟ್ ಆಗುವ ಬಗ್ಗೆ ಮಾಹಿತಿ ತಿಳಿಸುತ್ತದೆ. WhatsApp ಅಧಿಕೃತ ಚಾಟ್ ಸಮಯದಿಂದ ಅಭಿವೃದ್ಧಿಯಲ್ಲಿದೆ ಎಂದು ವರದಿ ತಿಳಿಸಿದೆ.

Leave A Reply

Your email address will not be published.