Mahendra Singh Dhoni: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ ಎಸ್ ದೋನಿ ರಾಜಕೀಯಕ್ಕೆ ಎಂಟ್ರಿ? ಯಾವ ಪಕ್ಷದಿಂದ?
Mahendra Singh Dhoni : ಇತ್ತೀಚೆಗೆ ರಾಜಕೀಯ ರಂಗವು ಅರ್ಧಕ್ಕರ್ಧ ಸಿನಿಮಾ ನಟ-ನಟಿಯರಿಂದ, ಬೇರೆ ಬೇರೆ ಕ್ರೀಡೆಯಲ್ಲಿ ಸಾಧನೆಗೈದ ಸಾಧಕರಿಂದ ತುಂಬಿ ಹೋಗಿದೆ. ಅದರಲ್ಲೂ ಕ್ರಿಕೆಟಿಗರೇ ತುಸು ಹೆಚ್ಚೆನ್ನಬಹುದು. ಅಂತೆಯೇ ಇದೀಗ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಅವರು ರಾಜಕೀಯಕ್ಕೆ ದುಮುಕುತ್ತಾರಾ? ಎನ್ನುವ ಪ್ರಶ್ನೆ ಶುರುವಾಗಿದೆ. ದೋನಿಯವರೇ ಈ ಕುರಿತು ನೀಡಿದ ಸುಳಿವೊಂದು ಈ ಪ್ರಶ್ನೆ ಉದ್ಭವಿಸಲು ಕಾರಣ. ಹಾಗಿದ್ದರೆ ದೋನಿ ಯಾವ ಪಕ್ಷದಿಂದ ಅಖಾಡಕ್ಕಿಳಿಯಬಹುದು ಗೊತ್ತಾ?
ಮೋಸ್ಟ್ ಅಡ್ಮಿರ್ಡ್ ಮ್ಯಾನ್ ಇನ್ ಇಂಡಿಯಾ ಜನರಿಗೆ ಯಾರು ಹೆಚ್ಚು ಪ್ರೀತಿ ಪಾತ್ರರು ಎಂದು ಸಮೀಕ್ಷೆ ನಡೆಸಿದಾಗ ಮೊದಲ ಸ್ಥಾನ ಪ್ರಧಾನಿ ನರೇಂದ್ರ ಮೋದಿ (PM Modi) ಯವರಿದ್ದರೆ, ಧೋನಿ ಎರಡನೇ ಸ್ಥಾನದಲ್ಲಿದ್ದರು. ಈ ಕುರಿತು ಸಂದರ್ಶನವೊಂದರಲ್ಲಿ ಎಂಎಸ್ ಧೋನಿ ಮಾತನಾಡುವಾಗ, ನನ್ನೊಂದಿಗೆ ತುಂಬಾ ಅನುಭವಿ ತಂಡವಿದೆ, ಅದು ನನಗೆ ಸಹಾಯ ಮಾಡಿದೆ. ಪ್ರಧಾನಿ ನಂತರ ಜನರು ನನ್ನನ್ನು ಹೆಚ್ಚು ಇಷ್ಟಪಟ್ಟಿದ್ದರೆ ಅದು ನನಗೆ ಹೆಮ್ಮೆಯ ವಿಷಯ ಎಂದು ಹೇಳಿದ್ದರು.
ಬಳಿಕ ಅವರಿಗೆ ರಾಜಕೀಯ ಕುರಿತು, ಚುನಾವಣೆಯಲ್ಲಿ ಸ್ಪರ್ಧಿಸುವ ಯೋಚನೆ, ಯೋಜನೆಗಳೇನಾದರೂ ಇವೆಯೇ ಎಂದು ಕೇಳಿದಾಗ ‘ನಾನು ಚುನಾವಣೆಯಲ್ಲಿ ಬರಬಹುದು ಎಂದು ಅನಿಸುತ್ತಿದೆಯೇ’ ಎಂದು ಧೋನಿ ತಮಾಷೆಯಾಗಿ ಕೇಳಿದ್ದಾರೆ. ನಂತರ ಮಾತನಾಡಿದ ಅವರು ರಾಜಕೀಯ ತುಂಬಾ ಕಷ್ಟದ ಕೆಲಸ, ಅದು ನನಗೆ ಅಲ್ಲ ಎಂದು ಹೇಳಿದರು. ನಾನು ಸೇನಾ ಸಿಬ್ಬಂದಿ ಮತ್ತು ಸೈನಿಕರೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತೇನೆ. ನಾನು ರಾಜಕೀಯಕ್ಕೆ ಬಂದರೂ ಸಾಕಷ್ಟು ಅಧ್ಯಯನ ಮಾಡಬೇಕು. ನಾನು ನನ್ನನ್ನು ತುಂಬಾ ಬದಲಾಯಿಸಿಕೊಳ್ಳಬೇಕು. ಆದರೆ ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿ ಎಲ್ಲದಕ್ಕೂ ಮೀರಿದ್ದು ಎಂದು ಹೇಳಿದ್ದಾರೆ.
ಒಂದುವೇಳೆ ರಾಜಕೀಯ ಸೇರಿ ಪ್ರಧಾನಿಯಾಗಲು ಬಯಸುತ್ತೀರಾ ಎಂದದಕ್ಕೆ ದೋನಿ, ವಿಶ್ವಕಪ್ ಗೆಲ್ಲುವುದಕ್ಕಿಂತ ಇದು ಹೆಚ್ಚು ಒತ್ತಡದ ಕೆಲಸ ಎಂದು ಹೇಳಿದರು. ಧೋನಿ, ರಾಜಕೀಯವು ತುಂಬಾ ಕಷ್ಟಕರವಾಗಿದೆ ಮತ್ತು ಅದು ಎಲ್ಲರ ಸಾಮರ್ಥ್ಯದಲ್ಲಿಲ್ಲ. ಜನರು ರಾಜಕಾರಣಿಗಳನ್ನು ಟೀಕಿಸುವುದನ್ನು ಆನಂದಿಸುತ್ತಾರೆ, ಆದರೆ ಇದು ತುಂಬಾ ಕಷ್ಟಕರವಾದ ಕೆಲಸವಾಗಿದೆ. ಎಲ್ಲರೂ ಬದಲಾವಣೆ ಮಾಡುವವರಾಗಲು ಸಾಧ್ಯವಿಲ್ಲ‘ ಎಂದು ಹೇಳಿದ್ದಾರೆ.
ಇನ್ನು, ಮಹೇಂದ್ರ ಸಿಂಗ್ ಧೋನಿ ಈ ಬಾರಿ ಐಪಿಎಲ್ಗಾಗಿ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಅಲ್ಲದೇ ಈ ಬಾರಿಯ ಐಪಿಎಲ್ ಬಳಿಕ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ಗೂ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.