Tata Altroz CNG and Racer : ಶೀಘ್ರವೇ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ ಟಾಟಾದ ಈ ಕಾರುಗಳು ; ಭಾರೀ ಅಗ್ಗದ ಬೆಲೆಗೆ ಲಭ್ಯ!!
Tata Altroz CNG and Racer : ಜನಪ್ರಿಯ ಟಾಟಾ ಮೋಟಾರ್ಸ್ (Tata Motors ) ಕಂಪನಿಯು ತನ್ನ ಹಲವು ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಈ ಹಿಂದೆ ಟಾಟಾ (Tata) ಮುಂದಿನ 2 ವರ್ಷಗಳಲ್ಲಿ ಸುಮಾರು ಐದು ಕಾರುಗಳನ್ನು ಬಿಡುಗಡೆ ಮಾಡಲಿದೆ ಎಂದು ತಿಳಿಸಿತ್ತು. ಹಾಗೆಯೇ ಇತ್ತೀಚೆಗೆ ಸ್ಟ್ರೈಡರ್ ಜೀಟಾ (TATA Stryder) ಹೆಸರಿನ ಹೊಸ ಇ-ಬೈಕ್ ಅನ್ನು ಬಿಡುಗಡೆ ಮಾಡಿದೆ. ಸದ್ಯ ಕಂಪನಿಯು Tata Altroz CNG and Racer ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ.
ಟಾಟಾ ಮೋಟಾರ್ಸ್ 2020 ರಲ್ಲಿ ತನ್ನ Altroz ಕಾರಿನೊಂದಿಗೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗವನ್ನು ಪ್ರವೇಶಿಸಿತ್ತು. ಇದೀಗ ಕಂಪನಿಯು ಈ ವರ್ಷ ಹ್ಯಾಚ್‌ಬ್ಯಾಕ್ ಕಾರಿನ ಎರಡು ಹೊಸ ರೂಪಾಂತರಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಕಂಪನಿಯು ಟಾಟಾ ಅಲ್ಟ್ರೋಜ್ ಸಿಎನ್‌ಜಿ ಮತ್ತು ಟಾಟಾ ಅಲ್ಟ್ರೊಜ್ ರೇಸರ್ ಮಾದರಿಗಳನ್ನು 2023 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದ್ದು, ಇವೆರಡೂ ಈ ವರ್ಷ ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎನ್ನಲಾಗಿದೆ.
ಟಾಟಾ ಆಲ್ಟ್ರೋಜ್ ರೇಸರ್ : ಟಾಟಾ ಆಲ್ಟ್ರೋಜ್ ರೇಸರ್ (tata Altroz Racer) 1.0L ಟರ್ಬೊ ಪೆಟ್ರೋಲ್ ಎಂಜಿನ್ ನೊಂದಿಗೆ (118bhp) ಬರಲಿದೆ. ಇದು 6-ಸ್ಪೀಡ್ iMT ಮತ್ತು 7-ಸ್ಪೀಡ್ DCT ಗೇರ್‌ಬಾಕ್ಸ್ ಆಯ್ಕೆ ಪಡೆದಿರಲಿದೆ. Ultroz ರೇಸರ್ 1.2L, 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 5,500rpm ನಲ್ಲಿ 120PS ಪವರ್ ಮತ್ತು 1,750rpm ನಿಂದ 4,000rpm ನಡುವೆ 170Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಪಡೆದಿರುತ್ತದೆ.
ಈ ಟರ್ಬೊ-ಪೆಟ್ರೋಲ್ ಘಟಕವು ನೆಕ್ಸಾನ್ ಸಬ್‌ಕಾಂಪ್ಯಾಕ್ಟ್ ಮಾದರಿಯ ಶ್ರೇಣಿಯಲ್ಲಿಯೂ ಲಭ್ಯವಿರಲಿದೆ. ಹ್ಯಾಚ್‌ಬ್ಯಾಕ್‌ನ ರೇಸರ್ ರೂಪಾಂತರವು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಟಿಎಫ್‌ಟಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಸೀಟ್‌ಗಳು, ವಾಯ್ಸ್ ಆಕ್ಟಿವೇಟೆಡ್ ಎಲೆಕ್ಟ್ರಿಕ್ ಸನ್‌ರೂಫ್ ಮತ್ತು 6 ಏರ್‌ಬ್ಯಾಗ್‌ಗಳಂತಹ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.
ಟಾಟಾ ಆಲ್ಟ್ರೋಜ್ ಸಿಎನ್‌ಜಿ (tata Altroz CNG): ಆಲ್ಟ್ರೋಝ್ 1.2ಲೀ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದೆ. CNG ಮೋಡ್‌ನಲ್ಲಿ, ಈ ಎಂಜಿನ್ 77PS ಗರಿಷ್ಠ ಶಕ್ತಿ ಮತ್ತು 95Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಪಡೆದಿರಲಿದೆ. ಸೆಟಪ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಮಾದರಿಯು ಹೊಸ ಡ್ಯುಯಲ್ ಸಿಲಿಂಡರ್ ಸೆಟಪ್ ಅನ್ನು ಹೊಂದಿದ್ದು, ಪ್ರತಿ ಸಿಲಿಂಡರ್ 30 ಲೀಟರ್ ಸಾಮರ್ಥ್ಯವನ್ನು ಪಡೆದಿರಲಿದೆ.
ಇದು ಈ ಶ್ರೇಣಿಯಲ್ಲಿ ECU (ಎಂಜಿನ್ ಕಂಟ್ರೋಲ್ ಯುನಿಟ್) ಮತ್ತು ಲೀಕೇಜ್ ಡಿಟೆಕ್ಷನ್ ಟೆಕ್ನಾಲಜಿಯೊಂದಿಗೆ ಡೈರೆಕ್ಟ್ ಸ್ಟೇಟ್ CNG ಹೊಂದಿರುವ ಮೊದಲ ಕಾರು ಆಗಿರಲಿದೆ. ಇದು ಸ್ಪೀಡ್ ಫ್ಯೂಯಲ್ ಫಿಲ್ಲಿಂಗ್, ಇಂಧನಗಳ ನಡುವೆ ಆಟೋ ಸ್ವಿಚ್ ಮತ್ತು ಮಾಡ್ಯುಲರ್ ಇಂಧನ ಫಿಲ್ಟರ್‌ನಂತಹ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ. ಮೈಲೇಜ್ ಸುಮಾರು 26 kmpl ಇರಲಿದೆ. ಈ ಕಾರು ಗ್ರಾಹಕರಿಗೆ ಭಾರೀ ಅಗ್ಗದ ಬೆಲೆಗೆ ಲಭ್ಯವಾಗಲಿದೆ ಎನ್ನಲಾಗಿದೆ.