Sandalwood : ನಟ ಚೇತನ್ ಗೆ ಎಚ್ಚರಿಕೆ ನೀಡಿದ ಚಲನಚಿತ್ರ ವಾಣಿಜ್ಯ ಮಂಡಳಿ!
Sandalwood : ಕನ್ನಡ ಚಿತ್ರರಂಗದ ಕಲಾವಿದರಾದ ನಟ ಚೇತನ್ ( Actor chetan) ಚಿತ್ರರಂಗದ ( Sandalwood) ದ ಕುರಿತು ಮತ್ತೆ ಮಾತುಗಳನ್ನು ಆಡಿದ್ದಾರೆ. ಚೇತನ್ ಅವರ ಈ ಮಾತುಗಳು ಚಿತ್ರರಂಗಕ್ಕೆ ಮುಜುಗರವನ್ನು ಉಂಟು ಮಾಡಿದೆ. ಇದರಿಂದ ಚಲನಚಿತ್ರ ವಾಣಿಜ್ಯ ಮಂಡಳಿ (film chamber of commerce) ಚೇತನ್ ನ (chetan) ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಅಂಬರೀಶ್ ಅವರ ಸ್ಮಾರಕ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಆದರೆ ಈ ಸ್ಮಾರಕ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ನಟ ಚೇತನ್. ಕಲಾವಿದ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸ (Chetan Ahimsa) ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka film chamber of Commerce) ಮುಂದಾಗಿದೆ. ಈ ಬಗ್ಗೆ ಇಂದು ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷರಾದ (president) ಬಾ.ಮಾ.ಹರೀಶ್. ಚಿತ್ರರಂಗದಲ್ಲಿಯೃ ಇದ್ದುಕೊಂಡು ಚಿತ್ರರಂಗಕ್ಕೆ ಮುಜುಗರ ಉಂಟುಮಾಡುವಂಥಹಾ ಮಾತುಗಳನ್ನು ಚೇತನ್ ಅಹಿಂಸ ಹೇಳುತ್ತಿದ್ದಾರೆ. ಆದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಈಗಾಗಲೇ ಚರ್ಚೆ ನಡೆಸಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ ಭಾ.ಮ.ಹರೀಶ್ ಅವರು ಇದೇ 27 ರಂದು ಅಂಬರೀಶ್ (Ambareesh) ಸ್ಮಾರಕ ಉದ್ಘಾಟನೆ ಮಾಡಿ, ನಂತರ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಅವರ ಹೆಸರನ್ನು ಇಟ್ಟಿದ್ದೀವಿ. ಆದರೆ ಈ ಬಗ್ಗೆ ನಟ ಚೇತನ್ ಅವರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ನಾವು ಸುಮಲತಾ ಅವರ ಒತ್ತಯದ ಮೇಲೆ ಆಗಲಿ ಅಥವಾ ಬೇರೆ ಯಾರ ಒತ್ತಾಯದ ಮೇಲೆ ಅಂಬರೀಶ್ ಸ್ಮಾರಕ (Ambareesh) ನಿರ್ಮಾಣ ಮತ್ತು ರೇಸ್ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡಲಿಲ್ಲ. ಇದು ನಮ್ಮ ಇಡೀ ಚಿತ್ರರಂಗದ ಒತ್ತಾಯ ಆಗಿದೆ.
ಅಂಬರೀಶ್ (Ambareesh) ಅವರ ಬಗ್ಗೆ ಮತ್ತು ಚೇತನ್ ಅವರ ಬಗ್ಗೆ ಮಾತನಾಡಿದ ಹರೀಶ್,’ ಅಂಬರೀಶ್ ಅವರು ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಇಡೀ ಚಿತ್ರರಂಗ ಸೇರಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ ಆದ್ದರಿಂದ ಸ್ಮಾರಕ ನಿರ್ಮಾಣ ಆಗಿದೆ. ಈ ಬಗ್ಗೆ ಚೇತನ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದು ಚಿತ್ರರಂಗಕ್ಕೆ ಮುಜುಗರ ಉಂಟು ಮಾಡಿದೆ. ಚೇತನ್ ಅವರು ಮತ್ತೆ ಮತ್ತೆ ಚಿತ್ರರಂಗದ ಅಭಿಪ್ರಾಯದ ವಿರುದ್ಧ ಆಕ್ಷೇಪ ವ್ಯಕ್ತಪಡಿಸುವುದು ತಪ್ಪು, ಇದು ಅಕ್ಷಮ್ಯ ಅಪರಾಧವಾಗಿದೆ. ನಾವು ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ, ಹೀಗೆಯೇ ಚಿತ್ರರಂಗದ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಸರಿಯಾದ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
ಈ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ಶೃತಿ ಹರಿಹರನ್ ಅನ್ನು ಉದಾಹರಣೆ ತೆಗೆದು ಕೊಂಡು ಮಾತನಾಡಿದರು. ಅರ್ಜುನ್ ಸರ್ಜಾ ವಿರುದ್ಧ ಶೃತಿ ತಪ್ಪು ಹೇಳಿಕೆ ನೀಡಿ ಕೊನೆಗೆ ಅವರೇ ಕ್ಷಮಾಪಣೆ ಕೇಳಿದರು. ಚೇತನ್ ಅವರ ಮಾತುಗಳು ಹೀಗೆ ಮುಂದುವರಿದಲ್ಲಿ ನಾವು ವಿರುದ್ಧ ಕ್ರಮ ಕೈಗೋಳ್ಳೊದು ಖಂಡಿತ. ನಮ್ಮ ಚಿತ್ರರಂಗದ ಯಾವುದೇ ಅಂಗ ಸಂಸ್ಥೆಗಳು ಅವರ ಸಿನಿಮಾಕ್ಕೆ ಕೆಲಸ ಮಾಡುವುದಿಲ್ಲ. ಮತ್ತು ಅಸಹಕಾರ ಕ್ರಮ ತೆಗೆದುಕೊಳ್ಳುವ ಮುನ್ನ ಮತ್ತೊಂದು ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತೀವಿ ಎಂದರು.
ಸ್ಮಾರಕ ಉದ್ಘಾಟನೆ ನಂತರ ಸಾಮಾಜಿಕ ಜಾಲತಾಣ (social media) ದಲ್ಲಿ ಸ್ಮಾರಕ ಪ್ರಶಸ್ತಿಯನ್ನು ಕುರಿತು ಪೋಸ್ಟ್ ಮಾಡಿದ್ದ ಚೇತನ್, ಪೋಸ್ಟ್ (post) ನಲ್ಲಿ ಚೇತನ್ ಅವರು ‘ ಅಂಬರೀಶ್ ಅವರು ಯಾರ ಬಳಿಯೂ ಕೈ ಚಾಚಿಲ್ಲ. ಆದರೆ ಸುಮಲತಾ ಅವರು ಸ್ಮಾರಕಕ್ಕೆ ಸರ್ಕಾರದ ಮುಂದೆ ಕೈಚಾಚಿದ್ದಾರೆ. ಮತ್ತು ಎರಡು ಎಕರೆ ಜಾಗ ಹಾಗೂ 12 ಕೋಟಿ ರೂಪಾಯಿ ಹಣವನ್ನು ಪಡೆದುಕೊಂಡಿದ್ದಾರೆ’ ಎಂದು ಹೇಳಿಕೆ ನೀಡಿದ್ದಾರೆ. ಚೇತನ್ ಅವರ ಈ ಹೇಳಿಕೆಗೆ ಚಿತ್ರರಂಗಕ್ಕೆ ಮುಜರಗ ತಂದಿದೆ. ಮುಂದೆ ಮಾತನಾಡುವಾಗ ಚೇತನ್ ಅವರು ಈ ರೀತಿಯ ಹೇಳಿಕೆ ನೀಡಬಾರದು ಎಂದು ವಾಣಿಜ್ಯ ಮಂಡಳಿ (film chamber of commerce) ತಿಳಿಸಿದೆ.