Post Office Scheme: ಅಂಚೆಕಚೇರಿಯ ಈ ಯೋಜನೆಯಿಂದ ಪಡೆಯಿರಿ ತೆರಿಗೆ ವಿನಾಯಿತಿಯ ಜೊತೆಗೆ ಹೆಚ್ಚು ಲಾಭ!!

post office scheme 2023: ಸರ್ಕಾರದ ಹಲವು ಯೋಜನೆಗಳಲ್ಲಿ ಅಂಚೆ ಕಚೇರಿಯ ಯೋಜನೆಯು (post office scheme 2023) ಒಂದು. ಈ ಯೋಜನೆ ಜನರ ಹಿತದೃಷ್ಟಿಗಾಗಿ ಸರ್ಕಾರ (government) ನಡೆಸುವ ದೊಡ್ಡಮಟ್ಟದ ಉಳಿತಾಯ ಯೋಜನೆ (Post Office saving schemes) ಎಂದೇ ಹೇಳಬಹುದು. ಇದು ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ನೆರವಾಗುತ್ತದೆ. ಅಷ್ಟೇ ಅಲ್ಲದೆ, ವೃದ್ಧಾಪ್ಯದಲ್ಲಿ ಹಣಕಾಸಿನ (Finance) ಅಗತ್ಯತೆಯನ್ನು ಪೂರೈಸಲು ಕೂಡ ಉಳಿತಾಯ (Savings) ನೆರವಾಗುತ್ತದೆ.

 

ಅಂಚೆ ಕಚೇರಿಯು ಇತರ ಸಂಸ್ಥೆಗಳಂತೆ ಹಲವಾರು ಯೋಜನೆಗಳನ್ನು ಹೊಂದಿದೆ. ಅಂಚೆ ಕಚೇರಿಯ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನೂ ಪಡೆಯಬಹುದು. ಅಂಚೆ ಕಚೇರಿ ಯೋಜನೆಗಳಲ್ಲಿ ಸಿಗುವ ಬಡ್ಡಿಯ (intrest) ಪ್ರಮಾಣವು ಜನರು ಅವುಗಳಲ್ಲಿ ಹೂಡಿಕೆ ಮಾಡಲು ಆದ್ಯತೆ ನೀಡುತ್ತದೆ. ಹಾಗೇ ಇದರಲ್ಲಿ ನಿಮ್ಮ ಹೂಡಿಕೆಯೂ ಸುರಕ್ಷಿತವಾಗಿರುತ್ತದೆ.

ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS) : 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ, ಹಿರಿಯ ನಾಗರಿಕ ಉಳಿತಾಯ ಯೋಜನೆ ಖಾತೆಯನ್ನು ತೆರೆಯಬಹುದು. ಇದು ಹಿರಿಯ ನಾಗರಿಕರಿಗಾಗಿ ಸರ್ಕಾರ ಖಾತರಿಪಡಿಸಿರುವ ಹೂಡಿಕೆ ಯೋಜನೆಯಾಗಿದೆ. ಈ ಯೋಜನೆಯಡಿ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಪಿಂಚಣಿ ಪಡೆಯಬಹುದಾಗಿದೆ. ಅಲ್ಲದೆ, SCSS ಐದು ವರ್ಷಗಳ ಮೆಚುರಿಟಿ ಅವಧಿಯನ್ನು ಹೊಂದಿದ್ದು, ವಾರ್ಷಿಕ 8 ಶೇಕಡಾ ಬಡ್ಡಿದರವನ್ನು ನೀಡುತ್ತದೆ. ಐದು ವರ್ಷಗಳ ನಂತರ ಇದನ್ನು ಮತ್ತೆ ನವೀಕರಿಸಬಹುದಾಗಿದೆ. ಈ ಮೇಲಿನಂತೆ ಹಿರಿಯರಿಗೆ ಕೇಂದ್ರ ಸರ್ಕಾರದಿಂದ ಜಾರಿ ತಂದಿರುವ ಉಳಿತಾಯ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬಹುದು.

ಸುಕನ್ಯಾ ಸಮೃದ್ಧಿ ಯೋಜನೆ : ಸುಕನ್ಯಾ ಸಮೃದ್ಧಿ ಯೋಜನೆಯು (Sukanya Samriddhi Account) ಹೆಣ್ಣುಮಕ್ಕಳಿಗಾಗಿ ಜಾರಿಗೆ ತಂದ ಯೋಜನೆಯಾಗಿದ್ದು, ಹೆಣ್ಣು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಈ ಯೋಜನೆಯನ್ನು ನಡೆಸಲಾಗುತ್ತಿದೆ. ಇದು ಹೆಣ್ಣು ಮಗುವಿನ ಅನುಕೂಲಕ್ಕಾಗಿ ಸರ್ಕಾರದ ಬೆಂಬಲಿತ ಸಣ್ಣ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. ಹೆಣ್ಣು ಮಗುವಿಗೆ 18 ವರ್ಷ ವಯಸ್ಸಾದಾಗ ಖಾತೆಯ ಮಾಲೀಕತ್ವವನ್ನು ತೆಗೆದುಕೊಳ್ಳಬಹುದು. ಸುಕನ್ಯಾ ಸಮೃದ್ಧಿ ಖಾತೆಯಲ್ಲಿ ಮಾಡುವ ಹೂಡಿಕೆ ಮೇಲೆ ಪ್ರಸ್ತುತ 7.6 ಶೇಕಡಾ ಬದಿ ದರ ನೀಡಲಾಗುತ್ತದೆ. ಆರ್ಥಿಕ ವರ್ಷದಲ್ಲಿ ಕನಿಷ್ಠ 250 ರೂ ಮತ್ತು ಗರಿಷ್ಠ 1.5 ಲಕ್ಷ ರೂ ವರೆಗೆ ಆರಂಭಿಕ ಠೇವಣಿ ಮಾಡಬಹುದು. ಈ ಯೋಜನೆಯು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಒದಗಿಸುತ್ತದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) : ಅಂಚೆ ಕಚೇರಿಯ ಪ್ರಮುಖ ಯೋಜನೆಗಳಲ್ಲಿ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಅಥವಾ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಒಂದಾಗಿದ್ದು, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಯೋಜನೆಯು ಉಳಿತಾಯಕ್ಕೆ ಉತ್ತಮ ಮಾರ್ಗವಾಗಿದೆ. ಈ ಯೋಜನೆಯಲ್ಲಿ ವ್ಯಕ್ತಿಗಳಿಗೆ ಉಳಿತಾಯದ ಜತೆಗೆ ತೆರಿಗೆ ವಿನಾಯಿತಿ ಸೌಲಭ್ಯ ಕೂಡ ಲಭ್ಯವಾಗುತ್ತದೆ. ಇದಲ್ಲದೆ, ಬೇರೆ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ, ಇದು ಅತ್ಯಂತ ಕಡಿಮೆ ಅಪಾಯ (ರಿಸ್ಕ್‌) ಹೊಂದಿದ್ದು, ಸ್ಥಿರ ಆದಾಯ ನೀಡುತ್ತದೆ. NSC ಯೋಜನೆಯಲ್ಲಿ ಕನಿಷ್ಠ 1,000 ರೂ. ಮತ್ತು 100 ರೂಪಾಯಿ ಗುಣಕಗಳಲ್ಲಿ ಹೂಡಿಕೆ ಮಾಡಬಹುದು. ಇಲ್ಲಿ ಹೂಡಿಕೆ ಮೇಲೆ ಯಾವುದೇ ಮಿತಿ ಇಲ್ಲ. NSC ಯೋಜನೆಯ ಮುಕ್ತಾಯ ಅವಧಿಯು ಐದು ವರ್ಷಗಳು. ಹೂಡಿಕೆ ಮೇಲೆ ಸಿಗುವ ಬಡ್ಡಿ ದರವು 7 ಪ್ರತಿಶತ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು.

ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ಅಕೌಂಟ್ (post office fixed deposite account): ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಅನ್ನು ಇಂಡಿಯಾ ಪೋಸ್ಟ್ ಮೂಲಕ ನೀಡಲಾಗುತ್ತದೆ. ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಬಡ್ಡಿದರಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ. ಈ ಯೋಜನೆಯ ಪ್ಲಸ್ ಪಾಯಿಂಟ್ ಎಂದರೆ ಕನಿಷ್ಠ ಹೂಡಿಕೆ 1,000 ರೂ. ಆಗಿದ್ದರೆ, ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. 5 ವರ್ಷಗಳ ನಿಶ್ಚಿತ ಠೇವಣಿಗೆ ಪ್ರಸ್ತುತ ನೀಡಲಾಗುವ ಬಡ್ಡಿ ದರವು ಶೇಕಡಾ 7 ಆಗಿದೆ.

Leave A Reply

Your email address will not be published.