Snake Video: ಅಬ್ಬಬ್ಬಾ ಅಳೆದಷ್ಟೂ ಮುಗಿಯದ ದೈತ್ಯ ಹಾವು!! ಹುಷಾರು ಹೃದಯ ಗಟ್ಟಿಯಿದ್ದರೆ ಈ ವಿಡಿಯೋ ನೋಡಿ
Largest Snake video: ಪ್ರಪಂಚದಲ್ಲಿ ಸಾವಿರಾರು ಬಗೆಗಳ ಹಾವುಗಳಿದ್ದು ಕೆಲವೊಂದು ಹಾವುಗಳು ಕಚ್ಚಿದರೆ ಮನುಷ್ಯ ಜೀವಂತ ಉಳಿಯಲು ಕಷ್ಟಕರ. ಇನ್ನು ಹಾವುಗಳ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಇದೆ. ಪ್ರದೇಶದಿಂದ ಪ್ರದೇಶಕ್ಕೆ, ದೇಶದಿಂದ ದೇಶಕ್ಕೆ ಹಾವುಗಳ ಬಗ್ಗೆ ವಿಶ್ಲೇಷಿಸುವುದಾದರೆ ತಿಳಿದುಕೊಳ್ಳುವ ವಿಚಾರ ಬಹಳ ಇದೆ.
ಹಾವುಗಳು ಅಂದರೆ ಹೆಚ್ಚಿನವರಿಗೆ ಎಲ್ಲಿಲ್ಲದ ಭಯ. ದೈತ್ಯ ಹಾವುಗಳನ್ನು ಚಲನಚಿತ್ರಗಳಲ್ಲಿ ಕಂಡು ಭಯ ಬೀಳುವ ನಾವು, ದೈತ್ಯ ಹಾವು (Largest Snake)ಕಣ್ಣೆದುರು ಕಾಣಿಸಿಕೊಂಡರೆ ಏನಾಗಬಹುದು ಎಂದು ಊಹಿಸಲು ಸಾಧ್ಯವಿಲ್ಲ.
ಹೌದು, ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಭೂಮಿಯ ಮೇಲಿನ ಅತಿ ಉದ್ದವಾದ ಮತ್ತು ಗಾತ್ರದಲ್ಲೂ ಅತ್ಯಂತ ದೊಡ್ಡದಾಗಿರುವ ದೈತ್ಯ ( Largest Snake Video) ಹೆಬ್ಬಾವನ್ನು ಬಾಲದಿಂದ ತಲೆಯವರೆಗೆ ತೋರಿಸಲಾಗಿದೆ.
ಸದ್ಯ ಐಎಫ್‌ಎಸ್ ಸುಶಾಂತ್ ನಂದಾ ಅವರು ಹಂಚಿಕೊಂಡ ವೀಡಿಯೊವನ್ನು 44 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.
ಇದು ಮ್ಯಾನ್ಮಾರ್‌ನ ವಿಡಿಯೋ ಆಗಿದ್ದು, “ಭೂಮಿ ಮೇಲಿನ ಅತಿ ಉದ್ದದ ಮತ್ತು ಭಾರವಾದ ಹಾವುಗಳಲ್ಲಿ ಇದು ಒಂದಾಗಿದೆ ಎಂದು ಈ ವಿಡಿಯೋವನ್ನು ಶೇರ್ ಮಾಡಿರುವ ಐಎಫ್‌ಎಸ್ ಸುಶಾಂತ್ ನಂದಾ ಅವರು ಬರೆದಿದ್ದಾರೆ.
ಇಲ್ಲಿ ಕಾಣಿಸಿಕೊಂಡಿರುವ ರೆಟಿಕ್ಯುಲೇಟೆಡ್ ಹೆಬ್ಬಾವು, ಪೈಥಾನ್ ಪ್ರಭೇದಗಳು ದಕ್ಷಿಣ ಮತ್ತು ಆಗ್ನೇಯ ಏಷ್ಯಾ ಮೂಲದ್ದಾಗಿವೆ. ಈ ಹೆಬ್ಬಾವು ಜಾತಿಯ ಹಾವುಗಳಲ್ಲಿಯೇ ಅತಿ ಉದ್ದ ಮತ್ತು ಅತಿ ಹೆಚ್ಚು ಗಾತ್ರದ್ದಾಗಿದೆ. ಇದು ತನ್ನ ಬೇಟೆಯನ್ನು ಅರಸುತ್ತಾ ಬಂದಿದೆ. ಹೆಬ್ಬಾವು ಉಸಿರುಗಟ್ಟಿಸುವ ಮೂಲಕ ತಮ್ಮ ಬೇಟೆಯನ್ನು ಕೊಲ್ಲುತ್ತವೆ. ಹೆಬ್ಬಾವಿನ ಉಸಿರುಕಟ್ಟಿಸುವ ಶಕ್ತಿಯು ಸುಮಾರು 14 PSI ಆಗಿದ್ದು ಮನುಷ್ಯರನ್ನು ಕೊಲ್ಲುವುದಕ್ಕೂ ಇದು ಸಾಕಾಗುತ್ತದೆ.
ಈ ಹಾವುಗಳು ವಿಷಕಾರಿಯಲ್ಲದಿದ್ದರೂ, ಅವು ಜೀವಂತ ಜೀವಿಗಳಿಗೆ ಅಪಾಯವನ್ನುಂಟುಮಾಡುತ್ತವೆ. ಈ ಹಾವುಗಳು ಜೀವಿಗಳ ಮೇಲೆ ದಾಳಿ ಮಾಡಿ ಅವುಗಳನ್ನು ಕೊಲ್ಲುತ್ತವೆ. ಈ ಹಾವು ಅತ್ಯುತ್ತಮ ವೇಗವಾಗಿ ಈಜಬಲ್ಲದು. ಇದು ಸಾಮಾನ್ಯವಾಗಿ ಸಮುದ್ರ ಪ್ರದೇಶದಿಂದ ದೂರವಿರುತ್ತದೆ. ಈ ಪ್ರಭೇದಗಳು ತಮ್ಮ ವ್ಯಾಪ್ತಿಯಲ್ಲಿರುವ ಸಣ್ಣ ದ್ವೀಪಗಳಲ್ಲಿ ವಾಸಿಸುತ್ತವೆ.
ರೆಟಿಕ್ಯುಲೇಟೆಡ್ ಹೆಬ್ಬಾವುಗಳನ್ನು ಅವುಗಳ ಚರ್ಮಕ್ಕಾಗಿ ಬೇಟೆಯಾಡಲಾಗುತ್ತದೆ. ಇದಲ್ಲದೆ, ಅವುಗಳನ್ನು ಕೆಲವು ಸಾಂಪ್ರದಾಯಿಕ ಔಷಧಗಳನ್ನು ತಯಾರಿಸಲು ಬಳಸಲಾಗುತ್ತದೆ.
ಒಟ್ಟಿನಲ್ಲಿ ಈ ವಿಡಿಯೋ ದಲ್ಲಿ ಹಾವು ನೋಡುವಾಗ ಮೈ ಜುಮ್ ಎನ್ನುವುದು ಖಂಡಿತಾ.
The longest & one of the heaviest snakes of planet. A Reticulated Python climbs the wall to reach out for its prey in Myanmar.
Reticulated Python are constrictors and kill prey by squeezing them to death. The python's squeezing force is about 14 PSI enough to kill human beings. pic.twitter.com/ruRFVNIFiP
— Susanta Nanda (@susantananda3) March 29, 2023