UPI: ಯುಪಿಐ ಬಳಕೆದಾರರಿಗೆ ಉಚಿತವಾದರೂ ಈ ವಿಷಯಗಳ ಅರಿವು ನಿಮಗಿರಬೇಕು!
UPI users : ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ಹೆಚ್ಚಿನ ಬಳಕೆಯಲ್ಲಿದ್ದು, ಭಾರತದ ಎಲ್ಲೆಡೆ ಸ್ಮಾರ್ಟ್ ಫೋನ್ ನಲ್ಲಿಯೇ UPI ಮೂಲಕ ಹಣ ಪಾವತಿ ಮಾಡಲಾಗುತ್ತಿದೆ. ಇದು ಬ್ಯಾಂಕ್ (bank) ವ್ಯವಹಾರಗಳನ್ನು ಸರಳವಾಗಿ ಸುಲಭವಾಗಿ ಮಾಡಲು ಅನುವು ಮಾಡಿಕೊಟ್ಟಿದೆ. UPI ಪಾವತಿಯು ಅತ್ಯಂತ ಸರಳವಾದ ವಿಧಾನವಾಗಿದ್ದರಿಂದ ಭಾರತದ (India) ಎಲ್ಲ ವ್ಯಾಪಾರಿಗಳು, ಜನರು ಡಿಜಿಟಲ್ ಪಾವತಿಯನ್ನು ಬಳಸುತ್ತಿದ್ದಾರೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI)
ಇತ್ತೀಚೆಗೆ ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ಏಪ್ರಿಲ್ 1 ರಿಂದ (ನಾಳೆ) ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್‌ನಲ್ಲಿ (UPI) ಬ್ಯುಸಿನೆಸ್ ಟ್ರಾನ್ಸಾಕ್ಷನ್‌ಗಳ ಅಥವಾ ವ್ಯಾಪಾರಿ ವಹಿವಾಟುಗಳ ಮೇಲೆ ಪ್ರೀಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಸ್ (PPI) ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ತಿಳಿಸಿತ್ತು. ₹ 2,000 ಕ್ಕಿಂತ ಹೆಚ್ಚಿನ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ವಹಿವಾಟುಗಳಿಗೆ ಶೇ 1.1 ಶುಲ್ಕ ವಿಧಿಸಿತ್ತು. ಇದಾದ ಬಳಿಕ ಗೊಂದಲಗಳು ಸೃಷ್ಟಿಯಾಗಿದ್ದು,
ನಂತರ ಗೊಂದಲಗಳಿಗೆ ತೆರೆ ಎಳೆದ ಪೇಟಿಎಂ ಮತ್ತು ಎನ್‌ಪಿಸಿಐ, ಇಂಟರ್‌ಚೇಂಜ್ ಶುಲ್ಕಗಳು ಪ್ರೀಪೇಯ್ಡ್ ಪೇಮೆಂಟ್ ಇನ್‌ಸ್ಟ್ರುಮೆಂಟ್ಸ್ (PPI) ಮೂಲಕ ಮಾಡಿದ ವಹಿವಾಟಿಗೆ ಮಾತ್ರ ಅನ್ವಯಿಸುತ್ತವೆ. ಮತ್ತು ಗ್ರಾಹಕರಿಗೆ ಯಾವುದೇ ಶುಲ್ಕವಿರುವುದಿಲ್ಲ, ಮತ್ತು ಬ್ಯಾಂಕ್ ಖಾತೆ ಆಧಾರಿತ UPI ಪಾವತಿಗಳಿಗೆ ಅಂದ್ರೆ, ಬ್ಯಾಂಕ್ ಅಕೌಂಟ್‌ನಿಂದ ಬ್ಯಾಂಕ್ ಅಕೌಂಟ್‌ಗೆ ಮಾಡಲಾಗುವ ಯುಪಿಐ ಪಾವತಿಗೆ ಯಾವುದೇ ಶುಲ್ಕವಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇದರಿಂದ ಗೂಗಲ್ ಪೇ, ಪೇಟಿಎಂ ಮತ್ತಿತರ ಅಪ್ಲಿಕೇಷನ್ ಗಳನ್ನು ಬಳಸುವ ಗ್ರಾಹಕರು ನಿರಾಳಾಗಿದ್ದರೂ ಕೂಡ ಈ ವಿಷಯಗಳು ನಿಮಗೆ ತಿಳಿದಿರಲಿ!
ಶುಲ್ಕ ವಹಿವಾಟುಗಳಿಗಾಗಿ ಕ್ಯೂಆರ್ ಕೋಡ್ (QR code) ಅಥವಾ ಯುಪಿಐ ಮೋಡ್ ಬಳಸುವ ವ್ಯಾಪಾರಿಗಳಿಗೆ ಮಾತ್ರ ಅನ್ವಯಿಸುತ್ತದೆ. ಯಾವುದೇ ಬ್ಯಾಂಕ್ ಖಾತೆಯಿಂದ ಪಾವತಿಗಳನ್ನು ಮಾಡಲು ಗ್ರಾಹಕರಿಗೆ ಹಾಗೂ ವ್ಯಾಪಾರಿಗಳಿಗೆ ಯುಪಿಐ ಉಚಿತವಾಗಿದೆ. ಆದರೆ, ಬ್ಯಾಂಕ್ ಖಾತೆಗಳಿಂದ ಮಾಡುವ ಯುಪಿಐ ಪಾವತಿಗಳ ಮೇಲಿನ ಯಾವುದೇ ಶುಲ್ಕಗಳಲ್ಲಿ ಬದಲಾವಣೆಯಿಲ್ಲ. ಸಾಮಾನ್ಯ ಯುಪಿಐ ಹಣ ವರ್ಗಾವಣೆ ಮಿತಿ ಪ್ರತಿ ವಹಿವಾಟಿಗೆ 1ಲಕ್ಷ ರೂ. ಎಂದು ಎನ್ ಪಿಸಿಐ ತಿಳಿಸಿದೆ. ಯುಪಿಐನಲ್ಲಿ ಕ್ಯಾಪಿಟಲ್ ಮಾರ್ಕೆಟ್ಸ್, ಕಲೆಕ್ಷನ್ಸ್, ವಿಮೆ, ಫಾರಿನ್ ಇನ್ ವರ್ಡ್ ರಿಮಿಟೆನ್ಸ್ ವಹಿವಾಟಿನ ಮಿತಿ 2ಲಕ್ಷ ರೂ. ತನಕ ಇದೆ. ಇನ್ಯಿಯಲ್ ಪಬ್ಲಿಕ್ ಆಫರಿಂಗ್ ಅಥವಾ ಐಪಿಒ ಹಾಗೂ ರಿಟೇಲ್ ಡೈರೆಕ್ಟ್ ಯೋಜನೆಗೆ ಪ್ರತಿ ವಹಿವಾಟಿನ ಮೇಲಿನ ಮಿತಿ 5ಲಕ್ಷ ರೂ. ಇದೆ.
ಯುಪಿಐ (UPI users) ಬಳಸಿ ಹಣ ವರ್ಗಾವಣೆ ಮಾಡುವ ವಿವಿಧ ಚಾನಲ್ ಗಳು-ವರ್ಚುವಲ್ ಐಡಿ ಮೂಲಕ ಸೆಂಡ್/ಕಲೆಕ್ಟ್, ಖಾತೆ ಸಂಖ್ಯೆ ಐಎಫ್ ಎಸ್ ಸಿ ಹಾಗೂ ಆಧಾರ್ ಸಂಖ್ಯೆ. ಈ ಹಿಂದೆ ಗ್ರಾಹಕರು ಬ್ಯಾಂಕ್ ಖಾತೆಗಳನ್ನು ಮಾತ್ರ ಲಿಂಕ್ ಮಾಡಲು ಅವಕಾಶ ಇತ್ತು. ಆದರೆ, ಇದೀಗ ಗ್ರಾಹಕರು ಪಿಪಿಐ ವ್ಯಾಲೆಟ್ಸ್ ಹಾಗೂ ಯುಪಿಐ ಲಿಂಕ್ ಮಾಡಬಹುದು. ಆದರೆ, ಈ ಪಿಪಿಐ ವ್ಯಾಲೆಟ್ಸ್ ವಹಿವಾಟಿನ ಮೇಲೆ ಶುಲ್ಕ ವಿಧಿಸಲಾಗುತ್ತದೆ. ಯುಪಿಐ ಪ್ಲಾಟ್ ಫಾರ್ಮ್ ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಆಗಿರುವ ಖಾತೆಗಳ ಮಾಹಿತಿ, ಯುಪಿಐ ಅಪ್ಲಿಕೇಷನ್ ನಲ್ಲಿ ಕಾಣಿಸುವುದಿಲ್ಲ.