Karnataka 1st PUC Result : ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ! ರಿಸಲ್ಟ್‌ ನೋಡೋ ಲಿಂಕ್‌ ಇಲ್ಲಿದೆ!

Karnataka 1st PUC Result: ಪ್ರಥಮ ಪಿಯುಸಿ (First Puc) ವಿದ್ಯಾರ್ಥಿಗಳಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ. ಈಗಾಗಲೇ ಪರೀಕ್ಷೆ ಮುಗಿಸಿ ಫಲಿತಾಂಶಕ್ಕಾಗಿ ಎದುರು ನೋಡುತ್ತಿರುವ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಇಂದು ಬಿಡುಗಡೆ ಮಾಡಲಾಗಿದೆ.

 

2022-23ನೇ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ದಿನಾಂಕ 20-02-2023 ರಿಂದ 04-03-2023 ರವರೆಗೆ ನಡೆದಿತ್ತು. ಪ್ರಥಮ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು, ಪ್ರಥಮ ಪಿಯುಸಿ ತಾತ್ವಿಕ ಪರೀಕ್ಷೆಗೂ ಮೊದಲು ಕಾಲೇಜು ಹಂತದಲ್ಲಿ ನಡೆದಿದ್ದು, ಸದ್ಯ, ಈ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಇಂದು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು(Karnataka 1st PUC Result) ಬಿಡುಗಡೆ ಮಾಡಿದ್ದು, ಪ್ರಥಮ ಪಿಯುಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು(Students) ತಮ್ಮ ಫಲಿತಾಂಶವನ್ನು(Exam Result) ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲನೆ ಮಾಡಬಹುದು.

ಪ್ರಥಮ ಪಿಯುಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ result.dkpucpa.com ಗೆ ಭೇಟಿ ನೀಡಿ ಫಲಿತಾಂಶವನ್ನು ನೋಡಬಹುದಾಗಿದ್ದು, ಈ ವಿದ್ಯಾರ್ಥಿಗಳು ಫಲಿತಾಂಶವನ್ನು ತಿಳಿಯಲು ಪರೀಕ್ಷೆಯ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಬೇಕಾಗುತ್ತದೆ. ಹಾಗಿದ್ದರೆ, ಪಿಯುಸಿ ಫಲಿತಾಂಶ ಚೆಕ್ ಮಾಡುವ ವಿಧಾನ ಹೇಗೆ? ಎಂಬ ಅನುಮಾನ ನಿಮ್ಮನ್ನು ಕಾಡುತ್ತಿದೆಯೇ? ಈ ವಿಧಾನ ಅನುಸರಿಸಿ ಫಲಿತಾಂಶ ಪರಿಶೀಲನೆ ಮಾಡಬಹುದು.

ಪ್ರಥಮ ಪಿಯುಸಿ ಫಲಿತಾಂಶ ಚೆಕ್ ಮಾಡುವ ವಿಧಾನ ಹೀಗಿದೆ:
1.ಮೊದಲು, ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ result.dkpucpa.com ಗೆ ಭೇಟಿ ನೀಡಬೇಕು.

2. ಆ ಬಳಿಕ, 1st PUC result link‌ನಲ್ಲಿ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಬೇಕು.
3. ಈ ಪ್ರಕ್ರಿಯೆ ಬಳಿಕ ವಿವರಗಳನ್ನು ಸಲ್ಲಿಸಲು ‘Go’ ಬಟನ್ ಕ್ಲಿಕ್ ಮಾಡಿಕೊಳ್ಳಿ.
4.ಆಗ ನಿಮಗೆ Karnataka 1st PUC result 2023 ಸ್ಕ್ರೀನ್ ಮೇಲೆ ಕಂಡುಬರುತ್ತದೆ.
5.ಆ ಬಳಿಕ ವಿಷಯವಾರು ಅಂಕಗಳು ಮತ್ತು ಇತರ ವಿವರಗಳನ್ನು ಪರಿಶೀಲನೆ ಮಾಡಬಹುದು.
6.ಕೊನೆಗೆ, ಮುಂದಿನ ದಿನಗಳ ಉಪಯೋಗಕ್ಕಾಗಿ ಇದನ್ನೂ ಪ್ರಿಂಟ್ ತೆಗೆದುಕೊಳ್ಳುವುದು ಒಳ್ಳೆಯದು.

Leave A Reply

Your email address will not be published.