Electric Scooters: 1 ಲಕ್ಷದ ಒಳಗೆ ಲಭ್ಯವಿರುವ ಸೂಪರ್ ಡೂಪರ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಯಾವುದೆಲ್ಲ ಇದೆ ಗೊತ್ತಾ?
Electric Scooters: ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು (EV) ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಜನಪ್ರಿಯತೆಯನ್ನು ಪಡೆಯುತ್ತಿದೆ. ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್(Electric Scooters) ಹಾಗೂ ಬೈಕ್ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದ್ದು, ಜನರ ನಿರೀಕ್ಷೆಗೆ ತಕ್ಕಂತೆ ವಿಭಿನ್ನ ವಿಶೇಷತೆ ಮೂಲಕ ವಾಹನಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಡುತ್ತಿವೆ. ಆದರೆ, ಬಜೆಟ್ ಬೆಲೆಯಲ್ಲಿ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ ಕೊಂಡುಕೊಳ್ಳಲು ಬಯಸುವ ಮಂದಿಗೆ ಮುಖ್ಯ ಮಾಹಿತಿ ಇಲ್ಲಿದೆ ನೋಡಿ.
100 ಕಿ.ಮೀ ರೇಂಜ್ ನೀಡುವ ರೂ.1 ಲಕ್ಷದೊಳಗೆ ಸಿಗುವ ಸ್ಕೂಟರ್ಗಳು (Electric Scooters)ಯಾವುದೆಲ್ಲ? ಅನ್ನೋ ಮಾಹಿತಿ ನಿಮಗಾಗಿ.
ಓಲಾ ಎಸ್1 ಏರ್, ಒಕಿನಾವಾ, ಡ್ಯುಯಲ್ 100, ಹೀರೊ ಆಪ್ಟಿಮಾ CX, ಟಿವಿಎಸ್ ಐಕ್ಯೂಬ್ ಹಾಗೂ ಆಂಪಿಯರ್ ಮ್ಯಾಗ್ನಸ್ EX ಎಲೆಕ್ಟ್ರಿಕ್ ಸ್ಕೂಟರ್ಗಳು(Electric Scooters) ರೂ.1 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದ್ದು, ತನ್ನದೇ ಆದ ವಿಶಿಷ್ಟತೆಯನ್ನು ಒಳಗೊಂಡಿದೆ.
ಟಿವಿಎಸ್ ಐಕ್ಯೂಬ್ ರೂ.99,999 (Ex- Showroom) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 4.56 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಬಳಸಿರುವ ಐಕ್ಯೂಬ್ ST ರೂಪಾಂತರ ಸಂಪೂರ್ಣ ಚಾರ್ಜಿನಲ್ಲಿ 145 ಕಿಮೀ ರೇಂಜ್ ನೀಡಲಿದೆ. 3.04 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಎಂಟ್ರಿ ಲೆವೆಲ್ ಮತ್ತು ಮಿಡ್ ಲೆವೆಲ್ ಐಕ್ಯೂಬ್ S ರೂಪಾಂತರದಲ್ಲಿ ಉಪಯೋಗಿಸಲಾಗಿದ್ದು, ಫುಲ್ ಚಾರ್ಜಿನಲ್ಲಿ 100 ಕಿ.ಮೀ ರೇಂಜ್ ನೀಡಲಿವೆ.
ದೇಶೀಯ ಕಂಪನಿ ಟಿವಿಎಸ್ (TVs) ತಯಾರಿಸುವ ಈ ಐಕ್ಯೂಬ್ ಸ್ಕೂಟರ್ (TVS iQube) ಎಲ್ಇಡಿ ಲೈಟಿಂಗ್ ಜೊತೆಗೆ ಫುಲ್ ಕಲರ್ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ. ಇದಲ್ಲದೇ, ರೈಡಿಂಗ್ ಅಂಕಿಅಂಶಗಳು, ರಿಮೋಟ್ ಬ್ಯಾಟರಿ ರೇಂಜ್, ಜಿಯೋ ಫೆನ್ಸಿಂಗ್ನಂತಹ ಹಲವು ಮಾಹಿತಿ ಪಡೆದುಕೊಳ್ಳಲು ಬ್ಲೂಟೂತ್ ಮೂಲಕ ಸ್ಮಾರ್ಟ್ಫೋನ್ನೊಂದಿಗೆ ಡಿಸ್ಪ್ಲೇಯನ್ನು ಕನೆಕ್ಟ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಯುವ ಖರೀದಿದಾರರನ್ನು ಮೆಚ್ಚಿಸುವ ನಿಟ್ಟಿನಲ್ಲಿ ಅನೇಕ ವಿಶೇಷತೆಯನ್ನು ಒಳಗೊಂಡಿರುವ ಈ ಸ್ಕೂಟರ್, 78 Kmph ಟಾಪ್ ಸ್ವೀಡ್ ಅನ್ನು ಒಳಗೊಂಡಿದೆ.
ಆಂಪಿಯರ್ ಮ್ಯಾಗ್ನಸ್ (Ampere Magnus)EX ಸ್ಕೂಟರ್ ಬ್ಯಾಟರಿ ಪ್ಯಾಕ್ ಸಂಪೂರ್ಣ ಚಾರ್ಜ್ ಆಗುವ ನಿಟ್ಟಿನಲ್ಲಿ 4 ರಿಂದ 5 ಗಂಟೆ ತೆಗೆದುಕೊಳ್ಳುತ್ತದೆ. ಈ ಸ್ಕೂಟರ್ ಕೂಡ ಗ್ರಾಹಕರನ್ನು ಆಕರ್ಷಿಸವ ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಫುಲ್ ಚಾರ್ಜಿನಲ್ಲಿ 121 ಕಿ.ಮೀ. ರೇಂಜ್ ನೀಡಲಿದ್ದು, 50 kmph ಟಾಪ್ ಸ್ವೀಡ್ ಅನ್ನು ಒಳಗೊಂಡಿದೆ. ಇದು ರೂ.81,900 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.
ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಭಾರತದಲ್ಲಿ ಗುರುತಿಸಿಕೊಂಡಿರುವ ಹೀರೋ ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ರೂ.85,190 (Ex Showroom) ಬೆಲೆಗೆ ಡ್ಯುಯಲ್ ಬ್ಯಾಟರಿ ಆಯ್ಕೆಯನ್ನ ಒಳಗೊಂಡಿದೆ. ‘ಆಪ್ಟಿಮಾ CX’ ಸ್ಕೂಟರ್ ಅನ್ನು ಮಾರಾಟ ಮಾಡುತ್ತಿದ್ದು, ಇದು ಪವರ್ ಫುಲ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾಗಿದೆ. ಸಂಪೂರ್ಣ ಚಾರ್ಜಿನಲ್ಲಿ 140 ಕಿ.ಮೀ ರೇಂಜ್ ನೀಡುವ ಸಾಮರ್ಥ್ಯವನ್ನ ಹೊಂದಿದೆ. ಆದರೆ, ಓಲಾ ಸ್ಕೂಟರ್ಗಳಿಗೆ ಹೋಲಿಕೆ ಮಾಡಿದರೆ ಹಿನ್ನೆಡೆ ಎದುರಿಸುತ್ತಿದೆ.
ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಓಲಾ (Ola)ದೇಶೀಯ ಮಾರುಕಟ್ಟೆಯಲ್ಲಿ ಹೆಸರು ಪಡೆದಿದ್ದು , 7- ಇಂಚಿನ ಟಚ್ಸ್ಕ್ರೀನ್, 34 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್, ವೈಫೈ ಕನೆಕ್ಟಿವಿಟಿ, ಜಿಪಿಎಸ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. 3 kWh ಬ್ಯಾಟರಿ ಪ್ಯಾಕ್ ಹೊಂದಿರುವ ‘ಎಸ್1 ಏರ್’ ಎಲೆಕ್ಟ್ರಿಕ್ ಸ್ಕೂಟರ್ 125 ಕಿ.ಮೀ (IDC) ರೇಂಜ್ ಒದಗಿಸುತ್ತದೆ. ಅಷ್ಟೇ ಅಲ್ಲದೆ, ರೂ.99,999 ಬೆಲೆಯಲ್ಲಿ ಕೊಂಡುಕೊಳ್ಳ ಬಹುದಾಗಿದೆ.
ದೇಶದಲ್ಲಿ ಮುನ್ನೆಲೆ ಬರುತ್ತಿರುವ ಒಕಿನಾವಾದ ‘ಡ್ಯುಯಲ್ 100’ (Okinawa Dual 100)ಎಲೆಕ್ಟ್ರಿಕ್ ಸ್ಕೂಟರ್ ಬಹುಬೇಡಿಕೆಯನ್ನು ಗಳಿಸಿದೆ. ಸಂಪೂರ್ಣ ಚಾರ್ಜ್ನಲ್ಲಿ 149 ಕಿ.ಮೀ ರೇಂಜ್ ನೀಡಲಿದ್ದು,200 ಕೆಜಿ ತೂಕವರೆಗೆ ಸರಕನ್ನು ಸಾಗಿಸುವ ಸಾಮರ್ಥ್ಯ ಒಳಗೊಂಡಿದೆ. ಇದು ರೂ.79,813 ದರದಲ್ಲಿ ಖರೀದಿಗೆ ಲಭ್ಯವಿದ್ದು, ಈ ಸ್ಕೂಟರ್ ಕಂಪನಿಯ ವೆಬ್ಸೈಟ್ನಲ್ಲಿ ಔಟ್ ಆಫ್ ಸ್ಟಾಕ್ ಎಂದು ತೋರಿಸಲಿದ್ದು, ಇ ಬುಕ್ ಮಾಡಿದರೂ ವಿತರಣೆ ಪಡೆಯಲು ಕನಿಷ್ಠವೆಂದರೂ ಆರು ತಿಂಗಳು ಕಾಯಬೇಕಾಗುತ್ತದೆ.