Puffy Face : ಪ್ರತಿದಿನ ಬೆಳಗ್ಗೆ ಎದ್ದಾಗ ನಿಮ್ಮ ಮುಖ ಊದಿಕೊಂಡಂತೆ ಕಾಣುತ್ತಾ? ಇದಕ್ಕಿದೆ ಹಲವು ಕಾರಣ

Puffy Face : ದಿನನಿತ್ಯ ಮುಂಜಾನೆ (morning) ಎದ್ದೇಳುವಾಗ ಎಲ್ಲರೂ ಮನಸ್ಸಿನಲ್ಲಿ ಅಂದುಕೊಳ್ಳುದು ತನ್ನ ಮುಖ ನಕ್ಷತ್ರದ ಹಾಗೆ ಹೊಳೆಯ ಬೇಕೆಂಬುದನ್ನು. ಆದರೆ ನಿಮ್ಮ ಮುಖ ಈ ತರದ ಯಾವುದೇ ಹೊಳಪು ಇಲ್ಲದೆ (Puffy Face)ಉಬ್ಬಿಕೊಂಡಂತೆ ಇದ್ದರೆ, ಮೊದಲು ಆ ಸಮಸ್ಯೆಗೆ ಕಾರಣ ಏನಿರಬಹುದು ಎಂಬುದನ್ನು ತಿಳಿಯಬೇಕಾಗುತ್ತದೆ. ಈ ಸಮಸ್ಯೆಯ ಕೆಲವು ಕಾರಣಗಳು ಇಲ್ಲಿವೆ ನೋಡಿ.

 

ಹೌದು, ಜೀವನದಲ್ಲಿ ಅನೇಕ ಸಮಸ್ಯೆಗಳು (problems) ಬಂದು ಹೋಗುತ್ತದೆ. ಯಾರು ಸುಖದ ಸುಪ್ಪತ್ತಿನಲ್ಲಿ ಬದುಕಿರುವುದಿಲ್ಲ. ಎಲ್ಲರೂ ತನ್ನದೇ ಆದ ಸಮಸ್ಯೆಯನ್ನು ಎದುರಿಸಿ ಮುಂದೆ ಬಂದಿರುತ್ತಾರೆ. ನಿಮ್ಮ ಮುಖ ಉಬ್ಬಿಕೊಂಡಂತೆ (swelling) ಇದ್ದರೆ ನಮಗೂ ಅಥವಾ ನೋಡುಗರಿಗೂ ಈ ಸಮಸ್ಯೆಗಳು ಎದ್ದು ಕಾಣುತ್ತದೆ. ಮುಖ ಉಬ್ಬಿಕೊಂಡಾಗ ಎಲ್ಲರಿಗೂ ಕಾಡುವ ಪ್ರಶ್ನೆ. ಮುಖ ಊದಿ ಕೊಳ್ಳಲು ಕಾರಣ ಏನಿರಬಹುದು? ಹಾಗಾದರೆ ಮುಖ ಉಬ್ಬಿಕೊಳ್ಳುವ ಪ್ರಮುಖ ಕಾರಣ ತಿಳಿಯೋಣ ಬನ್ನಿ.

ಈ ರೀತಿ ಮುಖ ಉಬ್ಬಿಕೊಂಡರೆ (swelling) ಹುರಿದ ಆಹಾರಗಳನ್ನು ದಿನವಿಡೀ ಅಥವಾ ತಡರಾತ್ರಿಯಲ್ಲಿ ಸೇವನೆ ಮಾಡುವುದರಿಂದ ಮುಖ ಉಬ್ಬಿಕೊಂಡಂತಾಗುತ್ತದೆ. ನೀವು ಪ್ರತಿದಿನ ಬೆಳಗ್ಗೆ (morning) ಎದ್ದೇಳುವಾಗ ಊದಿಕೊಂಡ ಮುಖವನ್ನು ಹೊಂದಿರುತ್ತೀರಾ? ಹಾಗಾದರೆ ಇದು ಕೆಲವು ದೀರ್ಘಕಾಲದ ಆರೋಗ್ಯ ಸಮಸ್ಯೆಗಳ (health problem) ಕಾರಣದಿಂದಾಗಿರಬಹುದು. ಅತಿಯಾದ ಒತ್ತಡ, ಕರುಳಿನ ಸಮಸ್ಯೆಗಳು, ಯಕೃತ್ತಿನ ಸಮಸ್ಯೆಗಳು ಮುಖದ ಉಬ್ಬುವಿಕೆಗೆ ಕಾರಣವಾಗುತ್ತದೆ. ಜೊತೆಗೆ ಅಲರ್ಜಿಗಳು (allergy), ಮದ್ಯಸೇವನೆ, ಅಳುವುದು ಅಥವಾ ನಿದ್ರೆಯ ಕೊರತೆಯಿಂದಲೂ ಮುಖವು ಉಬ್ಬಿಕೊಳ್ಳುತ್ತದೆ. ನಿಮ್ಮ ದೇಹವನ್ನು ಚೆನ್ನಾಗಿ ಹೈಡ್ರೀಕರಿಸಿಕೊಳ್ಳದಿದ್ದರೆ ಅಥವಾ ನಿಮ್ಮ ಹಾರ್ಮೋನುಗಳು (hormone) ದುರ್ಬಲವಾಗಿದ್ದರೆ, ಇವುಗಳು ಮುಖದಲ್ಲಿನ ಊತಕ್ಕೆ ಕಾರಣವಾಗಬಹುದು.

ಪ್ರತಿದಿನವೂ ಉಬ್ಬಿದ ಮುಖದೊಂದಿಗೆ ಏಳುವುದು ಎಂದರೆ ಅದು ಸಾಮಾನ್ಯವಾದ ವಿಚಾರವಲ್ಲ. ನೀವು ಊಟ ಮಾಡಿದ ನಂತರ ಉಬ್ಬುವಿಕೆ ಸಾಮಾನ್ಯವಾಗಿದೆ ಏಕೆಂದರೆ ನಮ್ಮ ಹೊಟ್ಟೆ ತುಂಬುವಾಗ ಮುಖ ಊದಿಕೊಳ್ಳುದು ಸಾಮಾನ್ಯ. ನೀವು ಒಮ್ಮೆಲೇ ಹೆಚ್ಚಿನ ಫೈಬರ್‌ನ್ನು ಸೇವಿಸಿದರೆ ಅದು ನಿಮ್ಮ ಆರೋಗ್ಯದಲ್ಲಿ ಏರು ಪೇರು ಆಗಬಹುದು ಅದು ನಿಮ್ಮ ಕರುಳನ್ನು (liver) ಪ್ರಚೋದಿಸುತ್ತದೆ. ಹಾಗೆ ಆಗುವುದರಿಂದ ನೀವು ಬೆಳಗ್ಗೆ ಎದ್ದಾಗ ಮುಖ ಊದಿಕೊಳ್ಳಲು ಕಾರಣವಾಗುತ್ತದೆ. ಅದು ಸಾಮಾನ್ಯವಲ್ಲ, ಕೆಲವೊಂದು ಕಾರಣಗಳಿಂದ ಉಂಟಾಗುತ್ತದೆ” ಎಂದು ಪೌಷ್ಟಿತಜ್ಞೆಯರ ಅಭಿಪ್ರಾಯ.

ಒತ್ತಡ:
ನೀವು ನಿಮ್ಮೊಳಗೆ ಆತಂಕದ ಭಯವನ್ನು ಹೆಚ್ಚಿಸಿಕೊಂಡಾಗ ಅಥವಾ ನಿಮ್ಮಿಂದ ಅದನ್ನು ಸ್ಥಗಿತಗೊಳಿಸಲು ಸಾಧ್ಯವಾಗದೇ ಇದ್ದಾಗ ಮತ್ತು ನಿರಂತರವಾದ ಒತ್ತಡಕ್ಕೆ (preasure) ಒಳಗಾದಾಗ, ಅದು ನಿಮ್ಮ ಕರುಳಿನ ಮೇಲೆ ಪರಿಣಾಮ ಬೀರಬಹುದು. ಇದು ನಿಮ್ಮ ಮುಖವು ಬೆಳಗ್ಗೆ ಉಬ್ಬಿಕೊಳ್ಳುವುದಕ್ಕೆ ಪ್ರಮುಖ ಕಾರಣವಾಗುತ್ತದೆ. ನಿಮ್ಮ ಮೂತ್ರಜನಕಾಂಗದ ಗ್ರಂಥಿಗಳು ಒತ್ತಡದ ಹಾರ್ಮೋನ್(hormone) ಆದ ಕಾರ್ಟಿಸೋಲ್‌ನ್ನು ಹೆಚ್ಚು ಕಾಲ ಉತ್ಪಾದಿಸಿದಾಗ ಈ ಸಮಸ್ಯೆ ಸಂಭವಿಸುತ್ತದೆ.

ಕರುಳು:
ಕರುಳಿನ ಸಮಸ್ಯೆಯಿಂದಲೂ ಮುಖವು ಊದಿಕೊಳ್ಳುವ ಸಾಧ್ಯತೆ ಹೆಚ್ಚು ಇರುತ್ತದೆ. ಏಕೆಂದರೆ ಮಲಬದ್ಧತೆ, ಜೀರ್ಣಕ್ರಿಯೆಯ (digest) ಸಮಸ್ಯೆಗಳು ಜೀವನಶೈಲಿಯಲ್ಲಿ ಸಾಮಾನ್ಯವಾಗಿರುತ್ತದೆ. ನಿಮ್ಮ ಕರುಳಿನಲ್ಲಿ ಉರಿಯೂತವನ್ನು ಉಂಟುಮಾಡುವ ಆಹಾರವನ್ನು ನೀವು ದಿನ ನಿತ್ಯ ಅಥವಾ ಒಮ್ಮೆ ಆದರೂ ಸೇವಿಸಿದಾಗ ಅದು ನಿಮ್ಮ ಮುಖದ ಮೇಲೆ ಕಾಣಿಸಿಕೊಳ್ಳುವ ದ್ರವದ ಧಾರಣಕ್ಕೆ ಕಾರಣವಾಗುತ್ತದೆ. ಇದರಿಂದಲೂ ನಿಮ್ಮ ಮುಖದ ಸಮಸ್ಯೆಗೆ ನೀವು ಒಳಗಾಗಬಹುದು. ಕರುಳು(liver) ಸಂಬಂಧಿ ಸಮಸ್ಯೆಗಳು ಬೆಳಗ್ಗೆ ಎದ್ದಾಗ ಮುಖ ಉಬ್ಬಿಕೊಳ್ಳಲು ಪ್ರಮುಖ ಕಾರಣವಾಗುತ್ತದೆ.

ದಟ್ಟಣೆಯ ಯಕೃತ್ತು:
ದಟ್ಟಣೆಯ ಯಕೃತ್ತುನಲ್ಲಿ ದುಗ್ದರಸ ವ್ಯವಸ್ಥೆಯು ನಿಮ್ಮ ದೇಹದಲ್ಲಿನ ಕೊಳಕು(dirty) ವ್ಯವಸ್ಥೆಯಂತೆ ಕೆಲಸವನ್ನು ನಿರ್ವಹಿಸುತ್ತದೆ. ಇದು ನಿಮ್ಮ ಅಂಗಾಂಶಗಳಿಂದ ತ್ಯಾಜ್ಯ ಮತ್ತು ವಿಷವನ್ನು ತೆಗೆದುಹಾಕಲು ಹೆಚ್ಚಾಗಿ ಸಹಾಯ ಮಾಡುತ್ತದೆ. ನಿಮ್ಮ ದುಗ್ದರಸ ವ್ಯವಸ್ಥೆಯನ್ನು ಆರೋಗ್ಯಕರವಾಗಿಡುವಲ್ಲಿ ಯಕೃತ್ತು ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಇದು ನಿಮ್ಮ ರಕ್ತದಿಂದ ವಿಷ ಮತ್ತು ತ್ಯಾಜ್ಯವನ್ನು ಹೊರಹಾಕಲು ಸಹಾಯ (help) ಮಾಡುತ್ತದೆ. ಆದರೆ ನಿಮ್ಮ ಯಕೃತ್ತು ದಟ್ಟಣೆಯಿಂದ ಕೂಡಿದ್ದರೆ, ಅದು ನಿಮ್ಮ ದೇಹದಲ್ಲಿ ವಿಷಕಾರಿ ಅಂಶಗಳ ಸಂಗ್ರಹಣೆಗೆ ಕಾರಣವಾಗಬಹುದು. ಇದು ಜನರಿಗೆ ಉರಿಯೂತವನ್ನು ಉಂಟುಮಾಡಬಹುದು. ಇದರಿಂದ ಅನೇಕ ಸಮಸ್ಯೆಗಳು ಎದುರಿಸಬೇಕಾಗುತ್ತದೆ. ಆದರಿಂದ ಇದು ಬೆಳಗ್ಗೆ ಎದ್ದಾಗ ಮುಖ ಉಬ್ಬುಕೊಳ್ಳಲು ಕಾರಣವಾಗುತ್ತದೆ.

ಹಾಗಾದರೆ ಮುಖ ಉಬ್ಬಿಕೊಳ್ಳದಂತೆ ಆಗಬಾರದೆಂದರೆ ಸರಿಯಾದ ಜಾಗರೂಕತೆಯನ್ನು (safety) ವಹಿಸುವುದು ನಮ್ಮ ಆದ್ಯ ಕರ್ತವ್ಯ.

Leave A Reply

Your email address will not be published.