Hibiscus Flowers : ಗಿಡದ ತುಂಬಾ ದಾಸವಾಳ ಹೆಚ್ಚಾಗಿ ಬೆಳೆಯಬೇಕೇ? ಈ ಟಿಪ್ಸ್‌ ಫಾಲೋ ಮಾಡಿ!

Hibiscus Flowers : ಮಹಿಳೆಯರಿಗೆ ಹೂವಿನ ಗಿಡದ ಮೇಲೆ ಅಪಾರ ಪ್ರೀತಿ ಇರುತ್ತದೆ. ಗಿಡದಲ್ಲಿ ತುಂಬಾ ಹೂವುಗಳು (Flowers) ಬಿಟ್ಟಾಗ ಹೊಟ್ಟೆ ತುಂಬಿದಷ್ಟು ಖುಷಿ ಪಡುತ್ತಾರೆ. ಅದರಲ್ಲೂ ಮನೆಯ ಹೂದೋಟದಲ್ಲಿ ದಾಸವಾಳ (Hibiscus Flowers) ಗಿಡ ಇದ್ದೇ ಇರುತ್ತದೆ. ಯಾಕೆಂದರೆ ದೇವರ ಪೂಜೆಗೆ ಹೆಚ್ಚಾಗಿ ದಾಸವಾಳದ ಅರ್ಪಣೆ ಮಾಡುವುದು ಸಾಮಾನ್ಯ. ಹಾಗೆಯೇ ದಾಸವಾಳ ಹೂದೋಟಕ್ಕೆ ಮೆರುಗು ನೀಡುತ್ತದೆ.

ನಿಮಗೆ ಮಾರುಕಟ್ಟೆಯಲ್ಲಿ ವಿವಿಧ ಬಣ್ಣದ ದಾಸವಾಳದ ಹೂವಿನ ಗಿಡಗಳು ಸಿಗಲಿದೆ. ಹೀಗೆ ತಂದು ನೆಟ್ಟ ದಾಸವಾಳ ಗಿಡದ ತುಂಬಾ ಹೂ ಬಿಡಲು ನಾನಾ ಪ್ರಯತ್ನಗಳನ್ನು ಮಾಡಿದರೂ ಕೆಲವೊಮ್ಮೆ ಹೂವುಗಳು ಬಿಡುವುದಿಲ್ಲ. ಅದಕ್ಕಾಗಿ ಇಲ್ಲಿ ಟಿಪ್ಸ್ ಒಂದನ್ನು ನಿಮಗಾಗಿ ತಿಳಿಸಲಾಗಿದೆ.

ನೀವು ದಾಸವಾಳ ಗಿಡವನ್ನು ಕೂಡ ಪಾಟ್ ಗಳಲ್ಲಿ ಸುಲಭವಾಗಿ ಬೆಳೆಸಬಹುದು. ಮಣ್ಣು, ನೀರಿನಷ್ಟೇ ಮುಖ್ಯವಾಗಿ ಕೆಲವೊಂದು ಟಿಪ್ಸ್ ಗಳನ್ನು ಅನುಸರಿಸುವ ಮೂಲಕ ದಾಸವಾಳ ಗಿಡವನ್ನು ತುಂಬಾ ಚೆನ್ನಾಗಿ ಬೆಳೆಸಬಹುದು. ಹಾಗೇ ಗಿಡದ ತುಂಬಾ ಹೂ ಬಿಡುವಂತೆ ಮಾಡಬಹುದು.

ನೀವು ಒಂದು ಗ್ಲಾಸ್ ನೀರಿಗೆ 2 ಚಮಚದಷ್ಟು ಕಾಫಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ನೀರನ್ನು ದಾಸವಾಳದ ಗಿಡದ ಬುಡಕ್ಕೆ ಹಾಕಿ. ಇದರಿಂದ ದಾಸವಾಳದ ಗಿಡದಲ್ಲಿ ಹೂ ಚೆನ್ನಾಗಿ ಆಗುತ್ತದೆ. ಹೀಗೆ ಕಾಫಿ ಪುಡಿ ಮಿಶ್ರಿತ ನೀರು ಬೆರೆತಾಗ ಹೂವುಗಳು ಹೆಚ್ಚು ಬಿಟ್ಟುಕೊಳ್ಳುತ್ತವೆ.

Leave A Reply

Your email address will not be published.