Bajaj 350cc Bike: ರಾಯಲ್ ಎನ್ ಫೀಲ್ಡ್ ಗೆ ಪೈಪೋಟಿ ನೀಡಲು ಬರುತ್ತಿದೆ ಬಜಾಜ್ 350ಸಿಸಿ ಬೈಕ್

Bajaj 350cc Bike: ಬೈಕ್ ಅಂದರೆ ಸಾಕು!!! ಹುಡುಗರ ಪಾಲಿನ ಗರ್ಲ್ ಫ್ರೆಂಡ್ ಇದ್ದಂತೆ. ಎಲ್ಲೇ ಹೋದರು ಬಂದರೂ ಯುವಜನತೆಗೆ ಬೈಕ್ ಮೇಲಿನ ವ್ಯಾಮೋಹ ಕಡಿಮೆ ಆಗುವಂತಹದಲ್ಲ. ಇಂದು ಮಾರುಕಟ್ಟೆಯಲ್ಲಿ ಹೊಸ ಹೊಸ ವೈಶಿಷ್ಟ್ಯದ ಬೈಕ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ (Royal Enfield) ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೊಸ ಬೈಕ್‌ಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ (Indian Market) ರಾಯಲ್ ಎನ್‌ಫೀಲ್ಡ್ ಬ್ರ್ಯಾಂಡ್‌ ವಿವಿಧ ವಿಭಾಗಗಳಲ್ಲಿ ಹೊಸ ಬೈಕ್‌ ಅನ್ನು ಪರಿಚಯಿಸುತ್ತಾ ಬರುತ್ತಿದೆ.ರಾಯಲ್ ಎನ್‍ಫೀಲ್ಡ್ ಕಂಪನಿಯು ಬಿಡುಗಡೆಗೊಳಿಸಿದ ಮಾದರಿಗಳಲ್ಲಿ ಹೊಸ ಬೈಕ್‌ ಹಂಟರ್ 350 (Hunter 350) ಕೂಡ ಒಂದಾಗಿದ್ದು, ಇದು ಮೋಟಾರ್‌ಸೈಕಲ್ ವಿಭಾಗದಲ್ಲಿ ಇದು ಅತ್ಯುತ್ತಮ ಬೈಕ್ ಮಾದರಿಯಾಗಿದೆ ಸದ್ಯ, ರಾಯಲ್‌ ಎನ್‌ಫೀಲ್ಡ್‌ನ ಎರಡನೇ ಅತಿ ಹೆಚ್ಚು ಮಾರಾಟವಾದ ಬೈಕ್‌ ಎನಿಸಿಕೊಂಡಿದೆ.

 

ರಾಯಲ್ ಎನ್‌ಫೀಲ್ಡ್ ತನ್ನ ಹೊಸ ಬೈಕ್ ಹಂಟರ್ 350 ಅನ್ನು ಕೆಲ ಸಮಯದ ಹಿಂದಷ್ಟೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಂಟರ್‌ 350ಗೆ ಗ್ರಾಹಕರಿಂದ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಪ್ರಸ್ತುತ ರಾಯಲ್‌ ಎನ್‌ಫೀಲ್ಡ್‌ನ ಎರಡನೇ ಅತಿ ಹೆಚ್ಚು ಮಾರಾಟವಾದ ಬೈಕ್‌ ಎನಿಸಿಕೊಂಡಿದೆ. ಕೆಲ ಸಮಯದ ಹಿಂದಷ್ಟೇ ರಾಯಲ್ ಎನ್‌ಫೀಲ್ಡ್ ತನ್ನ ಹೊಸ ಬೈಕ್ ಹಂಟರ್ 350 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಹಂಟರ್‌ 350ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ, ಈ ಬೈಕ್‌ಗೆ ಪೈಪೋಟಿ ನೀಡಲು ಬಜಾಜ್ ಕಂಪನಿ ರೆಡಿಯಾಗಿದೆ. ಭಾರತದಲ್ಲಿ ಅತೀ ಶೀಘ್ರದಲ್ಲಿ ಬಜಾಜ್‌ನ 350 ಸಿಸಿ ಬೈಕ್ ಬಿಡುಗಡೆಯಾಗುವ ಸಾಧ್ಯತೆ ದಟ್ಟವಾಗಿದೆ.

ಬ್ರಿಟಿಷ್ ಕಂಪನಿ triumph ಕೈಗೆಟುಕುವ ದರದಲ್ಲಿ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಲು ಬಜಾಜ್‌ನೊಂದಿಗೆ(Bajaj) ಪಾಲುದಾರಿಕೆ ಮಾಡಿಕೊಂಡಿದ್ದು, ಪಾಲುದಾರಿಕೆ ಅಡಿಯಲ್ಲಿ ಹಲವಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಾ ಬರುತ್ತಿದೆ. ಇತ್ತೀಚೆಗೆ ಒಂದು ಮಾದರಿಯನ್ನು ಪುಣೆಯಲ್ಲಿ ಪರೀಕ್ಷೆ ನಡೆಸಲಾಗಿದ್ದು, ಬಜಾಜ್ ಮತ್ತು triumphನ 350 ಸಿಸಿ ಮೋಟಾರ್‌ಸೈಕಲ್‌ಗಳು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ದಟ್ಟವಾಗಿದೆ.

350 cc ಮೋಟಾರ್‌ಸೈಕಲ್( Bajaj 350cc Bike)ವಿಭಾಗದಲ್ಲಿ ಪ್ರಸ್ತುತ ರಾಯಲ್ ಎನ್‌ಫೀಲ್ಡ್ ಪ್ರಾಬಲ್ಯ ಹೊಂದಿದ್ದು, ಕಂಪನಿಯು 90 ಪ್ರತಿಶತ ಮಾರುಕಟ್ಟೆ ಪಾಲನ್ನು ಒಳಗೊಂಡಿದೆ. ಈ ಬೈಕ್ ನಲ್ಲಿ ಲಿಕ್ವಿಡ್ ಕೂಲಿಂಗ್, ಸ್ಲಿಪ್ಪರ್ ಕ್ಲಚ್, ಕ್ವಿಕ್ ಶಿಫ್ಟರ್ ಮತ್ತು ಎಬಿಎಸ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ ಎಂದು ಅಂದಾಜಿಸಲಾಗಿದೆ. triumph ಭಾರತದಲ್ಲಿ 250 ಸಿಸಿ ಮಾದರಿಯನ್ನು ಮಾತ್ರ ಬಿಡುಗಡೆ ಮಾಡುವ ಸಂಭವವಿದೆ. 350 ಸಿಸಿ ಮಾದರಿಯನ್ನು ಜಾಗತಿಕ ಮಾರುಕಟ್ಟೆಗೆ ಮೀಸಲಿಡ ಬಹುದು. 250 ಸಿಸಿ ಎಂಜಿನ್ 30 ಬಿಎಚ್‌ಪಿ ಪವರ್ ನೀಡಿದರೆ, ದೊಡ್ಡ 350 ಸಿಸಿ ಎಂಜಿನ್ 40 ಬಿಎಸ್‌ಪಿ ಗರಿಷ್ಠ ಶಕ್ತಿಯನ್ನು ನೀಡುವ ಸಂಭವವಿದೆ.ಇದರ ಬೆಲೆ 2 ಲಕ್ಷದಿಂದ 2.5 ಲಕ್ಷದವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಬಜಾಜ್- triumph ಮೋಟಾರ್‌ಸೈಕಲ್‌ಗೆ 2 ಎಂಜಿನ್ ಆಯ್ಕೆಗಳನ್ನು ಒಳಗೊಂಡಿರ ಬಹುದು. ಇದರಲ್ಲಿ ಒಂದು ಎಂಜಿನ್ 250 ಸಿಸಿಯದ್ದಾಗಿದ್ದು ಮತ್ತೊಂದು ಎಂಜಿನ್ 350 ಸಿಸಿಯದ್ದಾಗಿದೆ. ಬಜಾಜ್ ಈ ಹಿಂದೆ ರಾಯಲ್ ಎನ್‌ಫೀಲ್ಡ್‌ ನೊಂದಿಗೆ ಟಕ್ಕರ್ ನೀಡಲು ಹಲವಾರು ಬಾರಿ ಪ್ರಯತ್ನಿಸಿದೆ.

Leave A Reply

Your email address will not be published.