Actress Mahima Chaudhry : ನಟಿಯರು ವರ್ಜಿನ್ ಆಗಿರ್ಬೇಕು, ಬಾಯ್ ಫ್ರೆಂಡ್ ಇರಬಾರದು- ಬಾಲಿವುಡ್ ಚಿತ್ರರಂಗದ ಬಗ್ಗೆ ಮಹಿಮಾ ಚೌಧರಿ ಮಾತು!
Actress Mahima Chaudhry :1997ರಲ್ಲಿ Prades ಚಿತ್ರದ ಮೂಲಕ ಹೆಚ್ಚಿನ ಸಂಭಾವನೆ ಪಡೆದು, ಜನಪ್ರಿಯ ನಟನಾದ ಶಾರುಖ್ ಖಾನ್(Shahrukh Khan) ಜೊತೆ ನಾಯಕಿಯಾಗಿ ನಟನೆ ಮಾಡಿ ಅಭಿಮಾನಿಗಳಿಂದ ಹೆಚ್ಚಿನ ಮೆಚ್ಚುಗೆಯನ್ನು ಪಡೆದು ಬಾಲಿವುಡ್ ಚಿತ್ರರಂಗಕ್ಕೆ (bollywood industry) ಕಾಲಿಟ್ಟ ನಟಿ ಮಹಿಮಾ ಚೌಧರಿ (Actress Mahima Chaudhry) ಈ ಹಿಂದೆ ನೀಡಿದ ಸಂದರ್ಶನ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಆಗುತ್ತಿದೆ.
ಹೌದು, ಈ ಹಿಂದೆ ನಡೆದ ಅಂದರೆ 2021 ರಲ್ಲಿ ಹಿಂದುಸ್ತಾನ್ ಟೈಮ್ಸ್ ಸಂದರ್ಶನದಲ್ಲಿ (Hindustan Times interview) ಮಹಿಮಾ ಚೌಧರಿ (Mahima Chaudhary) ಮಾತನಾಡಿದ್ದರು.
ನಟಿ ಮಹಿಮಾ ಚೌಧರಿ ಈ ಹಿಂದೆ ಆಡಿದ ಮಾತು ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (viral) ಆಗುತ್ತಿದೆ.
ಪುರುಷ ಪ್ರಧಾನ ಸಮಾಜದಲ್ಲಿ ನಾಯಕಿಯರಿಗೆ (actress) ಅವಕಾಶ ಸಿಗುತ್ತಿರಲಿಲ್ಲ ಹಾಗೂ ಪರ್ಸನಲ್ ಲೈಫ್ನಲ್ಲಿ (personal life) ನಡೆಯುತ್ತಿರುವ ಘಟನೆಗಳನ್ನು ತಿಳಿದುಕೊಂಡು ಆಮೇಲೆ ಸಿನಿಮಾದಲ್ಲಿ ನಟನೆ ಮಾಡಲು ಅವಕಾಶಗಳನ್ನು ಕೊಡುತ್ತಿದ್ದರು ಎಂದು ಹೇಳಿದ್ದರು. ಪರ್ಸನಲ್ ಲೈಫ್ನ ಟಾರ್ಗೇಟ್ (target) ಮಾಡ್ಕೊಂಡು ಸಿನಿಮಾ ಕಥೆ ಕೊಡುತ್ತಿದ್ದರು ಎಂದು ಆರೋಪ ಮಾಡಿದ ನಟಿ ಮಹಿಮಾ ಚೌಧರಿ ಇದರ ಬಗ್ಗೆ ಪ್ರಮುಖ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ ನೋಡಿ.
‘ಚಿತ್ರರಂಗದಲ್ಲಿ (film industry) ಈಗ ಬದಲಾವಣೆ ಆರಂಭವಾಗಿದೆ ಮೊದಲಿನ ಹಾಗೆ ಯಾವುದು ಇಲ್ಲ ಅಂದರೆ ಈಗ ನಾಯಕಿರು ಶಾಟ್ಸ್ (shots) ಕೇಳುವುದಕ್ಕೆ ಶುರು ಮಾಡಿದ್ದಾರೆ. ಮೊದಲಿನ ಸಿನಿಮಾದಲ್ಲಿ (film) ನಟಿಸುವಾಗ ಹೀಗೆಲ್ಲ ಇರುತ್ತಿರಲಿಲ್ಲ. ಆದರೆ ಈಗ ಶಾಟ್ಸ್ ಕೇಳುದರ ಮೂಲಕ ಅವರಿಗೆ ಬೇಕಿರುವ ರೀತಿಯಲ್ಲಿ ಟೇಕ್ (take) ಓಕೆ ಮಾಡಬಹುದು.
ಚೆನ್ನಾಗಿ ಅಭಿನಯಿಸಿದ್ದಾರೆ ಅಂದ್ರೆ ಅವರಿಗೆ ಮುಂದೆ ಹೆಚ್ಚಿಗೆ ಅವಕಾಶ ಸಿಗುತ್ತದೆ ಹಾಗೆಯೇ ಅಭಿಮಾನಿಗಳಿಂದ (fans) ಹೆಚ್ಚಿಗೆ ಸಂಭಾವನೆಯನ್ನೂ ಪಡೆಯುತ್ತಾರೆ. ಹಳೆ ನಟಿಯರಿಗಿಂತ ಈಗಿನ ಕಾಲದವರಿಗೆ ಸಿನಿಮಾರಂಗದಲ್ಲಿ ಸಮಯ ಹೆಚ್ಚಿದೆ ಅಂತೆ. ‘ಒಂದು ವೇಳೆ ಯಾರನ್ನಾದರೂ ಡೇಟಿಂಗ್ ಮಾಡಲು ಆರಂಭಿಸಿದರೆ ಅವರ ಜೊತೆಗಿರುವ ಫೋಟೋ(photo) ಹಂಚಿಕೊಂಡು ಬರೆದು ಬಿಡುತ್ತಾರೆ.’ಎಂದು ಹಿಂದುಸ್ತಾನ್ ಟೈಮ್ಸ್ ಸಂದರ್ಶನದಲ್ಲಿ (Hindustan Times interview)ಮಹಿಮಾ ಚೌಧರಿ ಮಾತನಾಡಿದ್ದರು.
ಆದರೆ ಮೊದಲು ಹೀಗೆಲ್ಲ ಯಾವುದು ನಡಿತಾನೆ ಇರ್ತಿರಲಿಲ್ಲ ‘ಅವರಿಗೆಲ್ಲಾ ಚಿತ್ರರಂಗದಲ್ಲಿ ನಟಿಸಲು ವರ್ಜಿನ್ (original) ಹುಡುಗಿಯರು ಬೇಕು. ಈ ಹಿಂದೆ ಚಿತ್ರರಂಗದಲ್ಲಿ ಎಲ್ಲಾನೂ ಸ್ಟ್ಯಾಂಡರ್ಡ್(standard) ಆಗಿನೆ ಇತ್ತು. ಯಾರ ಜೊತೆನು ಕಿಸ್ ಕೂಡ ಮಾಡಿರಬಾರದು. ಡೇಟಿಂಗ್ ಗಾಳಿ ಮಾತು ಕೇಳಿದರೆ ಸಾಕು Oh!! She’s dating! ಎಂದು ಅಸಯ್ಯವಾಗಿ ಹೇಳುತ್ತಿದ್ದರು. ‘ಹಾಗೆಯೇ ನೀವು ಮದುವೆ ಮಾಡಿಕೊಂಡರೆ ಅಲ್ಲಿಗೆ ನಿಮ್ಮ ಜೀವನ ಮುಗಿಯಿತ್ತು ಎಂದೇ ಅರ್ಥ; ನಿಮ್ಮ ವೃತ್ತಿ ಜೀವನಕ್ಕೆ ಅವರೇ ಬ್ರೇಕ್ ಹಾಕುತ್ತಾರೆ. ಮಗು ಬಂದ್ಮೇಲೆ ಕೇಳೋದೇ ಬೇಡ ನಿಮ್ಮ ಜೀವನ ಅಲ್ಲಿಗೆ ಮುಗಿಯಿತ್ತು’ ಇನ್ನೂ ಯಾವ ಕೆಲಸ ಮಾಡಲು ಅಸಾದ್ಯ ಎನ್ನುವ ರೀತಿ ಆಗಿ ಬಿಡುತ್ತೆ ಎಂದು ಮಹಿಮಾ ಚೌಧರಿ ಈ ಹಿಂದೆ ನಡೆದ ಸಂದರ್ಶನ (interview) ಒಂದರಲ್ಲಿ ಮಾತುಕತೆ ಮುಂದುವರಿಸುತ್ತಾ ಹೋಗುವಾಗ ಇದನ್ನು ಹೇಳಿದ್ದಾರೆ.