8th Pay Commission : 8ನೇ ವೇತನ ಆಯೋಗ ಶೇ.44 ರಷ್ಟು ವೇತನ ಹೆಚ್ಚು! ಸಂಪೂರ್ಣ ಮಾಹಿತಿ ಇಲ್ಲಿದೆ
8th Pay Commission Update: ಪ್ರಸ್ತುತ ತುಟ್ಟಿಭತ್ಯೆ ಹೆಚ್ಚಳದ ನಂತರ ಇದೀಗ ಕೇಂದ್ರ ನೌಕರರಿಗೆ ಮಹತ್ವದ ಮಾಹಿತಿ ಒಂದು ನೀಡಲಾಗಿದೆ. ಸದ್ಯ ದೇಶಾದ್ಯಂತ ಉದ್ಯೋಗಿಗಳು ಏಳನೇ ವೇತನ ಆಯೋಗದ ಅಡಿಯಲ್ಲಿ ಸಂಬಳ ಪಡೆಯುತ್ತಿದ್ದಾರೆ. ಆದರೆ ಪ್ರಸ್ತುತ ಶಿಫಾರಸುಗಳ ಪ್ರಕಾರ ವೇತನ ಸಿಗುತ್ತಿಲ್ಲ ಎಂದು ನೌಕರರು ದೂರುತ್ತಿದ್ದು, ಅಂದರೆ ನಾವು ಪಡೆಯಬೇಕಾದುದಕ್ಕಿಂತ ಕಡಿಮೆ ಹಣವನ್ನು ನಾವು ಪಡೆಯುತ್ತಿದ್ದೇವೆ ಎಂದು ಅನೇಕ ದೂರುಗಳು ನೌಕರರಿಂದ ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ವೇತನ ಆಯೋಗಕ್ಕಾಗಿ ಬೇಡಿಕೆ ಇರಿಸಲಾಗಿತ್ತು.
ಸದ್ಯ ನೌಕರರ ಸಂಘದಿಂದ ಬಂದಿರುವ ಮಾಹಿತಿ ಪ್ರಕಾರ, ಈ ಬಗ್ಗೆ ಜ್ಞಾಪಕ ಪತ್ರ ಸಿದ್ಧಪಡಿಸಲಾಗುತ್ತಿದ್ದು, ಶೀಘ್ರವೇ ಸರಕಾರಕ್ಕೆ ನೀಡಲಾಗುವುದು ಎನ್ನಲಾಗಿದೆ. ಇದರ ನಂತರ, ಅದರ ಶಿಫಾರಸುಗಳನ್ನು ಅವಲೋಕಿಸಿದ ನಂತರ, ಅದನ್ನು ಕಾರ್ಯಗತಗೊಳಿಸಲಾಗುತ್ತದೆ. ಮತ್ತೊಂದೆಡೆ, ಸದನದಲ್ಲಿ 8 ನೇ ವೇತನ ಆಯೋಗವನ್ನು (8th Pay Commission Update) ಜಾರಿಗೊಳಿಸುವ ವಿಷಯದ ಬಗ್ಗೆ ಯಾವುದೇ ಪರಿಗಣನೆಯನ್ನು ಸರ್ಕಾರ ನಿರಾಕರಿಸಿದೆ, ಆದರೆ ಇದರ ಬಳಿಕವೂ ನೌಕರರು ಮುಂದಿನ ವೇತನ ಆಯೋಗವನ್ನು ಜಾರಿಗೆ ತರಲು ಒತ್ತಾಯಿಸುತ್ತಿದ್ದಾರೆ.
ಈವರೆಗಿನ ವರ್ಷವಾರು ವೇತನ ಹೆಚ್ಚಳ ಗಮನಿಸಿದಾಗ :
4ನೇ ವೇತನ ಆಯೋಗದಿಂದ ನೌಕರರ ವೇತನ ಹೆಚ್ಚಳ – ಶೇ.27.6 ರಷ್ಟು
ಕನಿಷ್ಠ ವೇತನ – 750 ರೂ ಆಗಿದೆ.
5ನೇ ವೇತನ ಆಯೋಗದಿಂದ ನೌಕರರ ವೇತನ ಹೆಚ್ಚಳ -ಶೇ.31 ರಷ್ಟು
ಕನಿಷ್ಠ ವೇತನ – 2,550 ರೂ
6ನೇ ವೇತನ ಆಯೋಗದಿಂದ ನೌಕರರ ವೇತನ ಫಿಟ್ಮೆಂಟ್ ಫ್ಯಾಕ್ಟರ್ – 1.86 ಪಾಯಿಂಟ್
ಸಂಬಳದಲ್ಲಿ ಹೆಚ್ಚಳ – ಶೇ.54 ರಷ್ಟು
ಕನಿಷ್ಠ ವೇತನ – 7,000 ರೂ
7 ನೇ ವೇತನ ಆಯೋಗದಿಂದ (ಫಿಟ್ಮೆಂಟ್ ಫ್ಯಾಕ್ಟರ್) ನೌಕರರ ವೇತನ – ಫಿಟ್ಮೆಂಟ್ ಫ್ಯಾಕ್ಟರ್ – 2.57 ಪಾಯಿಂಟ್
ಸಂಬಳದಲ್ಲಿ ಹೆಚ್ಚಳ – ಶೇ. 14.29 ರಷ್ಟು
ಕನಿಷ್ಠ ವೇತನ – 18,000 ರೂ
ಸದ್ಯ 8ನೇ ವೇತನ ಆಯೋಗವು ನೌಕರರ ವೇತನವನ್ನು ಫಿಟ್ಮೆಂಟ್ ಫ್ಯಾಕ್ಟರ್ – 3.68 ಪಾಯಿಂಟ್ಸ್
ವೇತನ ಹೆಚ್ಚಳ – ಶೇ. 44.44 ರಷ್ಟು ಹೆಚ್ಚಾಗುವ ಸಾಧ್ಯತೆ
ಕನಿಷ್ಠ ಸಂಬಳ – ರೂ 26000 ಕ್ಕೆ ಏರುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಪ್ರಸ್ತುತ 7ನೇ ವೇತನ ಆಯೋಗದ ನಂತರ ಹೊಸ ವೇತನ ಆಯೋಗ ಬರುವುದಿಲ್ಲ ಎಂದೂ ಕೂಡ ಹೇಳಲಾಗುತ್ತಿದೆ. ಬದಲಾಗಿ ಇಂತಹ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತರಲು ಹೊರಟಿದ್ದು, ಇದರಿಂದ ಸರ್ಕಾರಿ ನೌಕರರ ವೇತನ ತನ್ನಷ್ಟಕ್ಕೆ ತಾನೇ ಹೆಚ್ಚಾಗಲಿದೆ. ಇದು ‘ಸ್ವಯಂಚಾಲಿತ ವೇತನ ಪರಿಷ್ಕರಣೆ ವ್ಯವಸ್ಥೆ’ ಆಗಿರುವ ಸಾಧ್ಯತೆ ಇದೆ, ಇದರಲ್ಲಿ ಡಿಎ ಶೇಕಡಾ 50 ಕ್ಕಿಂತ ಹೆಚ್ಚಿದ್ದರೆ ವೇತನದಲ್ಲಿ ಸ್ವಯಂಚಾಲಿತ ಪರಿಷ್ಕರಣೆಗೆ ಒಳಗಾಗಲಿದೆ. ಇದು ಸಂಭವಿಸಿದಲ್ಲಿ, 68 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 52 ಲಕ್ಷ ಪಿಂಚಣಿದಾರರು ಇದರ ನೇರ ಪ್ರಯೋಜನವನ್ನು ಪಡೆಯುತ್ತಾರೆ.
ಒಂದುವೇಳೆ ವೇತನ ಹೆಚ್ಚಳ ಆದಲ್ಲಿ, ಪ್ರಸ್ತುತ ಕನಿಷ್ಠ ವೇತನ ಮಿತಿಯನ್ನು 18,000 ರೂ.ಗೆ ಇರಿಸಲಾಗಿದೆ ಎಂದು ಕೇಂದ್ರ ನೌಕರರ ಸಂಘಟನೆಗಳು ಹೇಳುತ್ತವೆ. ಇದರ ಹೆಚ್ಚಳಕ್ಕೆ ಫಿಟ್ಮೆಂಟ್ ಫ್ಯಾಕ್ಟರ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. 7ನೇ ವೇತನ ಆಯೋಗದಲ್ಲಿ ಇದನ್ನು 3.68 ಪಟ್ಟು ಉಳಿಸಿಕೊಳ್ಳಲು ಶಿಫಾರಸು ಮಾಡಲಾಗಿದ್ದರೂ ಈ ಅಂಶ 2.57 ಪಟ್ಟು ಹೆಚ್ಚಿದೆ. ಇದಕ್ಕೆ ಸರಕಾರ ಒಪ್ಪಿಗೆ ನೀಡಿದರೆ ನೌಕರರ ಕನಿಷ್ಠ ವೇತನ 18 ಸಾವಿರದಿಂದ 26 ಸಾವಿರಕ್ಕೆ ಏರಿಕೆಯಾಗಲಿದೆ.