Upendra Rao: ಬಾಲಿಶ ಪ್ರಶ್ನೆ ಕೇಳಿದ ಉಪೇಂದ್ರಗೆ ನೆಟ್ಟಿಗರ ಕ್ಲಾಸ್, ಕೌಂಟ್ರು ಕೊಟ್ಟ ಉಪ್ಪಿ ಹೇಳಿದ್ದೇನು!
Upendra Rao :ಇಡೀ ಕರ್ನಾಟಕ(Karnataka) ದ ಜನರು ಚುನಾವಣೆ ಯಾವಾಗ? ಎಂದು ಕಾತರದಿಂದ ಕಾದಿದ್ದ ಪ್ರಶ್ನೆಗೆ ಅಂತೂ ಚುನಾವಣಾ ಆಯೋಗ(Election Commission) ಉತ್ತರಿಸಿದೆ. ವಿಧಾನಸಭಾ ಚುನಾವಣೆಗೆ(Assembly Election) ದಿನಾಂಕವಲ್ಲದೆ ಮತ ಎಣಿಕೆಗೂ ದಿನಾಂಕ ನಿಗದಿ ಮಾಡಿದೆ. ಇದರ ಬೆನ್ನಲೇ ಮತ ಎಣಿಕೆಗೆ ಎರಡು ದಿನ ಬೇಕೇ ಎಂದು ನಟ ಹಾಗೂ ಪ್ರಜಾಕೀಯ ಮುಖ್ಯಸ್ಥ ಉಪೇಂದ್ರ ಪ್ರಶ್ನಿಸಿದ್ದಾರೆ. ಉಪೇಂದ್ರ(Upendra Rao) ಈ ರೀತಿ ಪ್ರಶ್ನೆ ಕೇಳುತ್ತಿದ್ದಂತೆ ಹಲವರು ಖಡಕ್ ತಿರುಗೇಟು ನೀಡಿ, ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಹೌದು, ಬುಧ್ಧಿವಂತರಿಗೆ ಮಾತ್ರ ಅಂತ ಸಿನಿಮಾ ಮಾಡಿದ, ಉಪ್ಪಿಗಿಂತ ಬೇರೆ ರುಚಿ ಇಲ್ಲ ಒಪ್ಪಿಕೊಂಡವರು ದಡ್ಡರಿಲ್ಲ ಅಂತ ಡೈಲಾಗ್ ಸಾಂಗ್ ಮಾಡಿದ ಉಪ್ಪಿ ಮೇಲೆ ಜನ ಹಾರಿ ಬಿದ್ದಿದ್ದಾರೆ. ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಉಪೇಂದ್ರ ಅವರು, ಫೇಸ್‌ಬುಕ್‌ನಲ್ಲಿ, ಮತ ಎಣಿಕೆಗೆ ಎರಡು ದಿನ ಬೇಕೆ? ಏಕೆಂದು ಬಲ್ಲವರು ತಿಳಿಸುತ್ತೀರಾ? ಎಂದು ಜನರನ್ನು ಪ್ರಶ್ನಿಸಿದ್ದರು. ಉಪೇಂದ್ರ ಈ ಪ್ರಶ್ನೆ ಕೇಳುತ್ತಿದ್ದಂತೆ ರೊಚ್ಚಿಗೆದ್ದ ಜನ, ಉಪೇಂದ್ರ ಅವರೆ ಪ್ರಶ್ನೆ ಕೇಳುವಾಗ ಸ್ವಲ್ಪ ಪ್ರಬುದ್ಧತೆ ಇರಲಿ. ಮದುವೆಯಾದ ತಕ್ಷಣ ಮಕ್ಕಳಾಗಲ್ಲ. ಸಿನಿಮಾ ಡೈಲಾಗ್ ಹೊಡೆದಷ್ಟು ಚುನಾವಣಾ ಪ್ರಕ್ರಿಯೆ ಸುಲಭ ಅಲ್ಲ. 1ನೇ ಕ್ಲಾಸ್ ಪರೀಕ್ಷೆ ನಡೆಸಿದರೆ ಅದರ ಫಲಿತಾಂಶ ನೀಡೋಕೆ ಒಂದು ತಿಂಗಳು ಕಾಯಿಸ್ತಾರೆ. ಅಂಥದ್ದರಲ್ಲಿ 224 ಕ್ಷೇತ್ರಗಳ ಮಹತ್ವದ ಚುನಾವಣೆಯ ರಿಸಲ್ಟ್ ಘೋಷಣೆ ಮಾಡೋಕೆ ಎರಡು ದಿನವಾದರೂ ಬೇಡವೇ? ಎಂದು ನೇರವಾಗಿ, ಖಾರವಾಗಿ ಉತ್ತರಿಸಿದ್ದಾರೆ.
ಅಲ್ಲದೆ ನಿಮ್ಮ ಸಿನಿಮಾ ಶೂಟಿಂಗ್ ಮುಗಿದ ತಕ್ಷಣ ಏಕೆ ಸಿನಿಮಾವನ್ನು ರಿಲೀಸ್ ಮಾಡಲ್ಲ, ಸಿನಿಮಾ ಡೈಲಾಗ್ ಹೊಡೆದಷ್ಟು ಚುನಾವಣಾ ಪ್ರಕ್ರಿಯೆ ಸುಲಭ ಅಲ್ಲ ತಿಳಿದುಕೊಳ್ಳಿ ಎಂದು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನೂ, ಕೆಲವರು ಚುನಾವಣಾ ಪ್ರಕ್ರಿಯೆ ವಿವರಿಸಿದ್ದು, ಮತದಾನದ ದಿನ ಸಂಜೆ 6 ಗಂಟೆಗೆ ಮತದಾನ ಅಂತ್ಯವಾಗುತ್ತದೆ. ಅಲ್ಲಿ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಸ್ಟ್ರಾಂಗ್ ರೂಮ್‌ಗೆ ಬರೋಕೆ ರಾತ್ರಿ 8-9 ಗಂಟೆ ಆಗುತ್ತೆ. ಆ ಬಳಿಕ ಎಲ್ಲ ಇವಿಎಂಗಳನ್ನು ಮತ್ತು ದಾಖಲೆಗಳನ್ನು ಪರಿಶೀಲಿಸಿ ಸಂಗ್ರಹಿಸುವ ಹೊತ್ತಿಗೆ ಮಧ್ಯರಾತ್ರಿ 12 ರಿಂದ 1 ಗಂಟೆ ಆಗುತ್ತದೆ. ಆ ಬಳಿಕ ಅವುಗಳನ್ನು ಸ್ಟ್ರಾಂಗ್ ರೂಮ್‌ನಲ್ಲಿಡಲು ಮರುದಿನ ಬೆಳಗ್ಗೆ 9-10 ಗಂಟೆ ಆಗುತ್ತದೆ. ಇವುಗಳ ಮಧ್ಯೆ ಬಹಳಷ್ಟು ಪ್ರಕ್ರಿಯೆಗಳು ಇರುತ್ತವೆ ಎಂದು ಚುನಾವಣೆ ಪ್ರಕ್ರಿಯೆಯ ವಿವರಗಳನ್ನು ಉಪೇಂದ್ರ ಅವರಿಗೆ ಮನದಟ್ಟು ಮಾಡಿಸುವ ಪ್ರಯತ್ನ ಮಾಡಿದ್ದಾರೆ.
ಅಲ್ಲದೆ ಮತ ಎಣಿಕೆಗೆ ಎರಡು ದಿನ ಬೇಕಿಲ್ಲ. ಮತ ಎಣಿಕೆ ನಡೆಯೋದೇ ಮೇ 13ರಂದು, ಮೇ 13ರಂದೇ ಫಲಿತಾಂಶ’ ಎಂದು ಪದಗಳ ಜೊತೆ ಆಟವಾಡುವ ಉಪೇಂದ್ರ ಅವರ ಸ್ಟೈಲ್‌ನಲ್ಲೇ ಮೊಯಿನುದ್ದೀನ್ ಶರೀಫ್ ಎನ್ನುವವರು ಪ್ರತಿಕ್ರಿಯಿಸಿದ್ದಾರೆ. ‘ಇದು ಗೊತ್ತಿಲ್ಲದ ನೀನು ಪ್ರಜಾಕೀಯ ಅಂತ ಬೇರೆ ಒಂದು ಪಕ್ಷ ಕಟ್ಟಿದ್ದೀಯ..’ ಉಪೇಂದ್ರ ಅವರ ಟ್ವೀಟ್‌ಗೆ ಟೀಕೆ ಮಾಡಿದ್ದಾರೆ. ಅದೇ ದಿನ ಫಲಿತಾಂಶ ಕೊಡೋಕೆ ಇದೇನು ಪ್ರಸ್ಥವೇ ಎಂದು ಒಬ್ಬರು ಹೇಳಿದರೆ, ಮತಗಟ್ಟೆಯಲ್ಲಿ ಗಲಾಟೆ ಗದ್ದಲ ಆಗಿ ಅಥವಾ ಯಾವುದೋ ಒಂದು ಕಾರಣಕ್ಕೆ ಮತದಾನ ಸರಿಯಾಗಿ ಆಗದಿದ್ದಲ್ಲಿ ಒಂದು ದಿನ ಮರು ಮತದಾನಕ್ಕೆ ಮೀಸಲಿಟ್ಟಿರಲಾಗುತ್ತೆ. As a precautionary. ಮತ್ತು ಕೆಲವು ಚುನಾವಣಾ ಅಧಿಕಾರಿಗಳನ್ನು relieve madoke ಈ ಸಮಯವನ್ನು ಬಳಸಿಕೊಳ್ಳಲಾಗುತ್ತದೆ’ ಎಂದು ವಿಕ್ರಾಂತ್ ಎನ್ನುವವರು ಪ್ರತಿಕ್ರಿಯಿಸಿದ್ದಾರೆ.
ಇಷ್ಟಲ್ಲದೆ ಹಲವರು ಉಪೇಂದ್ರ ಅವರ ಪ್ರಶ್ನೆಗೆ ತರಲೆ ಹಾಗೂ ಖಾರವಾಗಿ ಉತ್ತರಿಸಿದ್ದಾರೆ. ಚುನಾವಣೆ ಕರ್ತವ್ಯ ನಿರ್ವಹಿಸಿ ಆಗ ಗೊತ್ತಾಗುತ್ತದೆ, ಸಿನಿಮಾ ಡೈಲಾಗ್ ಹೊಡೆದಷ್ಟು ಸುಲಭ ಇಲ್ಲ ಚುನಾವಣಾ ಪ್ರಕ್ರಿಯೆ, ಮದುವೆ ಆದ ತಕ್ಷಣ ಮಕ್ಕಳಾಗಲ್ಲ ಸರ್, ಇವಿಎಂ ಬದಲಾವಣೆಗೆ ಎರಡು ದಿನ ಬೇಕಾಗಬಹುದು, ಅತಿ ಬುದ್ಧಿವಂತಿಕೆ ದಡ್ಡತನದ ಪರಮಾವಧಿ, ಅದು ಫೇಸ್‌ಬುಕ್ ಲೈಕ್ಸ್ ಎಣಿಕೆ ಅಲ್ಲ, ಅದಕ್ಕೆ ಎರಡು ದಿನ, ನಿಮ್ಮ ಆಲೋಚನೆಗಳು ಸಂವಿಧಾನ ಮೀರಿ ಇರಬಾರದು. ನೆನಪಿರಲಿ ಸರ್, ಎಲೆಕ್ಷನ್ ನಿಂತಿರವ್ರೆಲ್ಲ ಬಿಪಿ, ಶುಗರ್ ಕಂಟ್ರೋಲ್ ಅಲ್ಲಿಟ್ಕಳ್ಲಿ ಅಂತ ಎರಡ್ ದಿನ ಗ್ಯಾಪ್, ಈ ಪ್ರಶ್ನೆಯ ಭಾವಾರ್ಥ ಏನು? ನಿಮ್ಮ ಪ್ರಕಾರ ಒಂದೇ ದಿನದಲ್ಲಿ ಎಲ್ಲವನ್ನು ಮಾಡಬಹುದಾ, ನಿಮ್ಮ ಬುದ್ಧಿವಂತಿಕೆಗೊಂದು ಸಲಾಂ, ಅಪ್ಪಿ ನೀನು ತಿಳ್ಕೊಳ್ಳೋದು ಇನ್ನೂ ತುಂಬಾ ಇದೆ ಬಿಡು. ಹೀಗೆ ಬಗೆ ಬಗೆಯಾಗಿ ಕಮೆಂಟಿಸುತ್ತಿದ್ದಾರೆ.
ಆದರೆ ಉಪ್ಪಿ ಅವರು ಸೋಲು ಒಪ್ಪಿಕೊಳ್ಳುವ ಬದಲು ಅತಿ ಬುದ್ಧಿವಂತರಂತೆ ಇದಕ್ಕೆ ಉತ್ತರ ನೀಡಿ ಕೌಂಟರ್ ಕೊಟ್ಟಿದ್ದಾರೆ. ಇದನ್ನೆಲ್ಲಾ ನೋಡಿದರೆ ತಾನೊಬ್ಬ ಅತಿ ಬುದ್ಧಿವಂತ ಅಂತ ಉಪ್ಪಿ ಅಲಿಯಾಸ್ ಉಪೇಂದ್ರ ಅವರು ಅಂದುಕೊಂಡಂತಿದೆ. ‘ಡಿಜಿಟಲ್ ವೋಟಿಂಗ್ ಅಲ್ವಾ? ಮತ ಎಣಿಕೆಗೆ 2 ದಿನಾ ಬೇಕಾ ? ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ. ಅಬ್ಬಬ್ಬಾ ಏನು ಕಾಮೆಂಟ್ಸ್ ಗಳು ?! ವಾರೆ ವಾಹ್.. ವ್ಯಾಪಾರೀ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ ಮಾಡಿ ನೋಡೋಣ ಅತಿ ಬುದ್ವಂತ್ರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂಬಾಲಕರು’ ಎಂದು ತಮ್ಮದೇ ಶೈಲಿಯಲ್ಲಿ ಉಪೇಂದ್ರ ಟ್ವೀಟ್ ಮಾಡಿದ್ದಾರೆ.
ಅಂದಹಾಗೆ ಪ್ರಜಾಕೀಯ ಅನ್ನುವ ಈವರೆಗೂ ಯಾವನಿಗೂ ಅರ್ಥವಾಗದ ಕಾನ್ಸೆಪ್ಟ್ ನಲ್ಲಿ ಹೊರ ತಂದ ಪಕ್ಷ ಇನ್ಯಾವತ್ತೂ ಮೇಳೆಲದ ಸ್ಥಿತಿಯಲ್ಲಿ. ಉಪ್ಪಿ ತಮ್ಮ ಪಕ್ಷದ ರೀತಿ ನೀತಿಗಳ ಕುರಿತು ಹೇಳುವುದು ಎಲ್ಲವೂ ಸರಿಯೇ. ಆದರೆ ಇವೆಲ್ಲವೂ ಮಾತನಾಡಲು ಚಂದ ಅಷ್ಟೆ. ರಾಜಕೀಯ ರಂಗ ಎಂದರೆ ಹೇಳಿದಷ್ಟು ಸುಲಭ ಅಲ್ಲ. ಅಲ್ಲಿ ಯೋಚಿಸಿ, ಯೋಜಿಸಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಬೇಕು. ಅದು ಬಿಟ್ಟು ನಮ್ಮ ಪಕ್ಷ ಗೆದ್ದರೆ ವಿಧಾನಸೌಧವನ್ನು ರಂಗ ಮಂದಿರ ಮಾಡುತ್ತೇನೆ, ಅಲ್ಲಿ ನೃತ್ಯಗಳನ್ನು ಮಾಡಿಸುತ್ತೇನೆ, ಎಲ್ಲವನ್ನೂ ಜನರಲ್ಲಿ ಕೇಳುತ್ತೇನೆ ಎನ್ನುವುದು ಎಂತಾ ಉದ್ಧಟತನದ ಹೇಳಿಕೆಗಳು ಅಲ್ಲವೇ?
ಡಿಜಿಟಲ್ ವೋಟಿಂಗ್ ಅಲ್ವಾ ?
ಮತ ಎಣಿಕೆಗೆ 2 ದಿನಾ ಬೇಕಾ ? ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ….
ಅಬ್ಬಬ್ಬಾ ಏನು ಕಾಮೆಂಟ್ಸ್ ಗಳು ?!
ವಾರೆ ವಾಹ್ …
ವ್ಯಾಪಾರೀ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ ಮಾಡಿ ನೋಡೋಣ ಅತಿ ಬುದ್ವಂತ್ರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂ ಬಾಲಕರು….— Upendra (@nimmaupendra) March 29, 2023
ಇದನ್ನೂ ಓದಿ: Naga Chaitanya : ಕೊನೆಗೂ ಗರ್ಲ್ ಫ್ರೆಂಡ್ ಜೊತೆ ಸಿಕ್ಕಾಕೊಂಡ ನಾಗ ಚೈತನ್ಯ! ಯಾರೀ ಬೆಡಗಿ?